ಭಾರತ ವಿರುದ್ಧದ ಸೋಲು-ಪಾಕ್ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡ?

By Web DeskFirst Published Jun 20, 2019, 4:52 PM IST
Highlights

ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧದ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡವಾಗಿದೆ. ಕ್ರಿಕೆಟ್ ಕಮಿಟಿ ಮುಖ್ಯಸ್ಥ ಮೊಹ್ಸಿನ್ ಖಾನ್ ರಾಜಿನಾಮೆ ಹಿಂದಿನ ಕಾರಣಗಳೇನು? ಇಲ್ಲಿದೆ ವಿವರ.

ಇಸ್ಲಾಮಾಬಾದ್(ಜೂ.20): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಸೋಲು ಅನುಭವಿಸಿದ ಪಾಕಿಸ್ತಾನ ತೀವ್ರ ಟೀಕೆಗೆ ಗುರಿಯಾಗಿದೆ. ಪಾಕ್ ಅಭಿಮಾನಿಗಳ ಆಕ್ರೋಶ ಸದ್ಯಕ್ಕೆ ತಣ್ಣಗಾಗೋ ಲಕ್ಷಣಗಳು ಕಾಣುತ್ತಿಲ್ಲ. ಪಾಕಿಸ್ತಾನ ತಂಡದ ಸೋಲುಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ(ಪಿಸಿಬಿ) ಹೊಡೆತ ನೀಡಿದೆ. ಸೋಲಿನ ಬೆನ್ನಲ್ಲೇ ಪಾಕ್ ಮಂಡಳಿಯ ಮೊದಲ ವಿಕೆಟ್ ಪತನಗೊಂಡಿದೆ.

ಇದನ್ನೂ ಓದಿ: ನಾವ್ ಮನೆಗೆ ಹೋಗೋದಿಲ್ಲ : ಪಾಕ್ ಕ್ರಿಕೆಟಿಗರು ಕಂಗಾಲು

ಪಾಕಿಸ್ತಾನ ಕ್ರಿಕೆಟ್ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಮೊಹ್ಸಿನ್ ಹಸನ್ ಖಾನ್ ರಾಜಿನಾಮೆ ನೀಡಿದ್ದಾರೆ. ಭಾರತ ವಿರುದ್ಧದ ಸೋಲಿನ ಬೆನ್ನಲ್ಲೇ ಪಾಕಿಸ್ತಾನ ತಂಡದ ಕಳೆದ 3 ವರ್ಷದ ಪ್ರದರ್ಶವನ್ನು ಪರಾಮರ್ಶಿಸಲು ಪಿಸಿಬಿ ಮುಂದಾಗಿದೆ. ಇದರ ಬೆನ್ನಲ್ಲೇ ಮೊಹಿಸಿನ್ ಖಾನ್ ಕ್ರಿಕೆಟ್ ಕಮಿಟಿಯ ಮುಖ್ಯಸ್ಥನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

 

PCB accepts Mohsin Khan’s request to release him as Chair of the PCB Cricket Committee

More Details ⬇️https://t.co/R7YIQlA8RC pic.twitter.com/xC14ocz4pF

— Pakistan Cricket (@TheRealPCB)

ಇದನ್ನೂ ಓದಿ: Fact Check| ಕಾಶ್ಮೀರ ಬೇಡ, ಕೊಹ್ಲಿ ಕಳುಹಿಸಿಕೊಡಿ: ಪಾಕ್ ಅಭಿಮಾನಿಗಳು!

ಮೊಹ್ಸಿನ್ ಖಾನ್ ಹೆಸರಿಗೆ ಮಾತ್ರ ರಾಜಿನಾಮೆ ನೀಡಿದ್ದಾರೆ. ಆದರೆ ಭಾರತ ವಿರುದ್ದದ ಸೋಲಿಗೆ ತಲೆದಂಡವಾಗಿ ಅನ್ನೋ ಮಾತುಗಳು ಕೇಳಿಬಂದಿದೆ. ಇನ್ನು ವಿಶ್ವಕಪ್ ಟೂರ್ನಿ ಬಲಿಕ ಮೊಹ್ಸಿನ್ ಖಾನ್‌ಗೆ ಹೆಚ್ಚಿನ ಜವಾಬ್ದಾರಿ ನೀಡಲು ಪಿಸಿಬಿ ಮುಂದಾಗಿದೆ. ಹೀಗಾಗಿ ರಾಜಿನಾಮೆ ನೀಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಾನಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ಇತ್ತ ಪಿಸಿಬಿ ಕೂಡ ರಾಜಿನಾಮೆ ಅಂಗೀಕರಿಸಿದೆ. 

click me!