ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕ್..!

Published : Jul 11, 2019, 06:27 PM ISTUpdated : Jul 11, 2019, 06:36 PM IST
ಟೀಂ ಇಂಡಿಯಾ ಸೋಲನ್ನು ಸಂಭ್ರಮಿಸಿದ ಪಾಕ್..!

ಸಾರಾಂಶ

ನ್ಯೂಜಿಲೆಂಡ್ ಎದುರು ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಮುಗ್ಗರಿಸುತ್ತಿದ್ದಂತೆ ಪಾಕಿಸ್ತಾನದ ಮೇಜರ್ ಜನರಲ್ ಹಾಗೂ ಸೇನಾ ವಕ್ತಾರ ಆಸೀಫ್ ಗಫೂರ್ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ನವದೆಹಲಿ[ಜು.11]: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 18 ರನ್ ಗಳಿಂದ ಸೋಲುತ್ತಿದ್ದಂತೆ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಮೇಜರ್ ಜನರಲ್ ಹಾಗೂ ಸೇನಾ ವಕ್ತಾರ ಆಸೀಫ್ ಗಫೂರ್ ಟ್ವೀಟ್ ಮೂಲಕ ಭಾರತದ ಸೋಲನ್ನು ಸಂಭ್ರಮಿಸುವುದರ ಜತೆಗೆ ಕಿವೀಸ್ ಗೆ ಶುಭ ಕೋರಿದ್ದಾರೆ. 

ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಫಿಸಿಯೋ ಪ್ಯಾಟ್ರಿಕ್ ವಿದಾಯ!

ಹೌದು, ಅತ್ಯದ್ಭುತವಾಗಿ ಆಡುವ ಮೂಲಕ ವಿಶ್ವಕಪ್ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್ ತಂಡಕ್ಕೆ ಅಭಿನಂದನೆಗಳು. ಮಹಾನ್ ರಾಷ್ಟ್ರದ ಆಟಗಾರರಿಂದ ಮಾತ್ರ  ಕ್ರೀಡಾಸ್ಫೂರ್ತಿ ಹಾಗೂ ನೈತಿಕ ಮೌಲ್ಯ ಪ್ರತಿಫಲಿಸಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.

ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ 11 ಅಂಕ ಗಳಿಸಿ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಭಾರತ ತಂಡವು ಲೀಗ್ ಹಂತದಲ್ಲಿ ಬೇಕಂದೇ ಸೋಲು ಕಂಡಿತ್ತು ಎಂದು ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದಿದ್ದರೆ, ಪಾಕಿಸ್ತಾನ ತಂಡವು ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುತ್ತಿತ್ತು. 
 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!