ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಪಡೆ ಸಂತೈಸಿದ ಮೋದಿ!

By Web Desk  |  First Published Jul 10, 2019, 8:21 PM IST

ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯರಿಗೆ ನಿರಾಸೆಯಾಗಿದೆ. ಇತ್ತ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ ಟೀಂ ಇಂಡಿಯಾ ಕೂಡ ಬೇಸರದಲ್ಲಿ ಮುಳುಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಟೀಂ ಇಂಡಿಯಾವನ್ನು ಸಂತೈಸೋ ಮೂಲಕ ಆತ್ಮವಿಶ್ವಾಸ ತುಂಬಿದ್ದಾರೆ.


ನವದೆಹಲಿ(ಜು.10): ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮುನ್ನಗ್ಗುತ್ತಿದ್ದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 18 ರನ್ ಸೋಲು ಅನುಭವಿಸೋ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲು ಕೊಹ್ಲಿ ಸೈನ್ಯಕ್ಕೆ ನೋವುಂಟುಮಾಡಿದೆ. ಸೋಲಿನ ಬೇಸರದಲ್ಲಿದ್ದ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಸಂತೈಸಿದ್ದಾರೆ.

ಇದನ್ನೂ ಓದಿ: ದಡ ಸೇರೋ ಮುನ್ನ ಮುಳುಗಿದ ಭಾರತದ ಕ್ರಿಕೆಟ್ ಟೈಟಾನಿಕ್!

Tap to resize

Latest Videos

undefined

ಫಲಿತಾಂಶ ನಿರಾಸೆ ತಂದಿದೆ. ಆದರೆ ಕೊನೆಯ ಎಸೆತದವರೆಗೂ ಟೀಂ ಇಂಡಿಯಾ ಹೋರಾಟ ಮೆಚ್ಚುಗೆ ತಂದಿದೆ. ಇಡೀ ಸರಣಿಯಲ್ಲಿ ಭಾರತ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದೆ.  ತಂಡದ ಪ್ರದರ್ಶನದ ಬಗ್ಗೆ ನಮಗೆ ಹೆಮ್ಮೆ ಇದೆ. ಸೋಲು ಗೆಲುವು ಜೀವನದ ಭಾಗ. ಮುಂದಿನ ಸರಣಿಗಳಿಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಲಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 

A disappointing result, but good to see ’s fighting spirit till the very end.

India batted, bowled, fielded well throughout the tournament, of which we are very proud.

Wins and losses are a part of life. Best wishes to the team for their future endeavours.

— Narendra Modi (@narendramodi)

ಇದನ್ನೂ ಓದಿ: ಅನಗತ್ಯ ದಾಖಲೆಗೆ ಗುರಿಯಾದ ರೋಹಿತ್, ಕೊಹ್ಲಿ, ರಾಹುಲ್!

ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 240 ರನ್ ಸಿಡಿಸಿತು. ಇದಕ್ಕುತ್ತರವಾಗಿ ಭಾರತ ದಿಟ್ಟ ಹೋರಾಟ ನೀಡಿತು. ರವೀಂದ್ರ ಜಡೇಜಾ 77 ಹಾಗೂ ಎಂ.ಎಸ್.ಧೋನಿ 50 ರನ್ ಸಿಡಿಸೋ ಮೂಲಕ ತಿರುಗೇಟು ನೀಡೋ ಪ್ರಯತ್ನ ಮಾಡಿದ್ದರು. ಆದರೆ ಭಾರತ 221 ರನ್‌ಗೆ ಆಲೌಟ್ ಆಗೋ ಮೂಲಕ 18 ರನ್ ಸೋಲು ಅನುಭವಿಸಿತು.

click me!