ಇಂಡೋ-ಪಾಕ್ ಪಂದ್ಯ- ಕ್ರೀಡಾಂಗಣದಲ್ಲಿ ಗೆಳತಿಗೆ ಪ್ರಪೋಸ್ ಮಾಡಿದ ಅಭಿಮಾನಿ!

By Web Desk  |  First Published Jun 21, 2019, 7:42 PM IST

ಭಾರತ ಹಾಗೂ ಪಾಕಿಸ್ತಾನ ಪಂದ್ಯದ  ನಡುವೆ ಅಭಿಮಾನಿಯೊರ್ವ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಮುಂದೆ ಗೆಳೆಯ ಪ್ರಪೋಸಲ್‌ಗೆ ಒಕೆ  ಎಂದ ಗೆಳತಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಬದ್ಧವೈರಿಗಳ ಕದನದಲ್ಲಿ ನಡೆದ ಸಕ್ಸಸ್ ಲವ್ ಸ್ಟೋರಿ ಇಲ್ಲಿದೆ.


ಮ್ಯಾಂಚೆಸ್ಟರ್(ಜೂ.21): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ಮುಗಿದು ದಿನಗಳಾದರೂ ಸಂಭ್ರಮ ಇನ್ನೂ ಮನೆ ಮಾಡಿದೆ. ಈ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ನೀಡಿದೆ. ಆದರೆ ಭಾರತೀಯ ಅಭಿಮಾನಿಗಳಿಬ್ಬರಿಗೆ ಹೊಸ ಬದುಕನ್ನೇ ಕಟ್ಟಿಕೊಟ್ಟಿದೆ. 

ಇದನ್ನೂ ಓದಿ: ಭಾರತ ವಿರುದ್ಧದ ಸೋಲು-ಪಾಕ್ ಕ್ರಿಕೆಟ್ ಕಮಿಟಿ ಮುಖ್ಯಸ್ಥನ ತಲೆದಂಡ?

Tap to resize

Latest Videos

undefined

ಇಂಡೋ-ಪಾಕ್ ಪಂದ್ಯದ ನಡುವೆ ಭಾರತೀಯ ಅಭಿಮಾನಿ ನಿಖಿಲ್, ತನ್ನ ಗೆಳತಿ ಅನ್ವಿತಾಗೆ  ರಿಂಗ್ ಮೂಲಕ ಪ್ರಪೋಸ್ ಮಾಡಿದ್ದಾನೆ. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಅಭಿಮಾನಿ ಮಂಡಿಯೂರಿ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಗೆಳೆಯನ ಪ್ರಪೋಸಲ್‌ಗೆ ಅಚ್ಚರಿಯಾದ ಗೆಳತಿ ಅನ್ವಿತಾ ಜೆ, ಪ್ರೀತಿಯ ನಗುವಿನೊಂದಿಗೆ ಜೈ ಎಂದಿದ್ದಾಳೆ.  

 

So this happened pic.twitter.com/8lg8AcJvKv

— Anvita J (@BebuJ)

ಇದನ್ನೂ ಓದಿ: ಟ್ವಿಟರ್‌ನಲ್ಲಿ ಕೊಹ್ಲಿಗೆ ಮೂರು ಕೋಟಿ ಹಿಂಬಾಲಕರು..!

ಗೆಳತಿಗೆ ರಿಂಗ್ ತೊಡಿಸಿ ಅಪ್ಪಿಕೊಂಡ ಅಭಿಮಾನಿ ನಿಖಿಲ್‌ಗೆ ನೆರೆದಿದ್ದ ಅಭಿಮಾನಿಗಳು ಶುಭಹಾರೈಸಿದ್ದಾರೆ. ಸ್ವತಃ ಅನ್ವಿತಾ ಈ ವೀಡಿಯೋ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ. ಪಾಕಿಸ್ತಾನ ವಿರುದ್ಧದ ಭರ್ಜರಿ ಗೆಲುವು ಹಾಗೂ ಗೆಳತಿಯ ಸಮ್ಮತಿ ಅಭಿಮಾನಿ ನಿಖಿಲ್‌ಗೆ ಹೊಸ ಹುರುಪನ್ನೇ ನೀಡಿದೆ.

click me!