ಪಾಕ್ ವಿರುದ್ಧ ಗೆಲುವಿನತ್ತ ದಾಪುಗಾಲಿಟ್ಟ ಭಾರತಕ್ಕೆ ಮಳೆ ಅಡ್ಡಿ!

By Web DeskFirst Published Jun 16, 2019, 10:51 PM IST
Highlights

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ

ಮ್ಯಾಂಚೆಸ್ಟರ್(ಜೂ.16): ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯಕ್ಕೆ 2ನೇ ಬಾರಿ ಮಳೆ ಅಡ್ಡಿಯಾಗಿದೆ. ಭಾರತದ ಬ್ಯಾಟಿಂಗ್ ವೇಳೆ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತ್ತು.ಇದೀಗ ಪಾಕಿಸ್ತಾನ ಬ್ಯಾಟಿಂಗ್ ವೇಳೆ ಮಳೆ ಸುರಿದು ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಪಾಕಿಸ್ತಾನ 35 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ ಸಿಡಿಸಿತ್ತು. ಸೋಲಿನತ್ತ ಮುಖಮಾಡಿದ ಪಾಕಿಸ್ತಾನ ತಂಡಕ್ಕೆ ಸದ್ಯ ಮಳೆ ಆಸರೆಯಾಗಿದೆ. ಮತ್ತೆ ಸುರಿದ ಮಳೆಯಿಂದ ಪಂದ್ಯವನ್ನು ನಿಲ್ಲಿಸಲಾಗಿದೆ. ಭಾರತದ ಪರ ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ.

ಸದ್ಯ ತುಂತುರ ಮಳೆ ಸುರಿಯುತ್ತಿದೆ. ಹೆಚ್ಚಿನ  ಮಳೆಯಾಗಿ ಸಮಯ ವ್ಯರ್ಥವಾದಲ್ಲಿ ಓವರ್ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ ಡಕ್ ವರ್ತ್ ಲೂಯಿಸ್ ನಿಯಮ ಅನ್ವಯವಾಗಲಿದೆ. ಢಕ್ ವರ್ತ್ ನಿಯಮದ ಪ್ರಕಾರ 35 ಓವರ್‌ಗೆ 255 ರನ್ ಸಿಡಿಸಬೇಕಿತ್ತು. ಆದರೆ ಸದ್ಯ ಪಾಕಿಸ್ತಾನ 86 ರನ್ ಹಿನ್ನಡೆಯಲ್ಲಿದೆ. 

click me!