ಶೂನ್ಯಕ್ಕೆ ಔಟಾಗಿ ಟ್ರೋಲ್ ಆದ ಶೋಯಿಬ್ ಮಲಿಕ್!

Published : Jun 16, 2019, 10:40 PM IST
ಶೂನ್ಯಕ್ಕೆ ಔಟಾಗಿ ಟ್ರೋಲ್ ಆದ ಶೋಯಿಬ್ ಮಲಿಕ್!

ಸಾರಾಂಶ

ಭಾರತ ವಿರುದ್ದದ ಮಹತ್ವಗ ಲೀಗ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಶೋಯಿಬ್ ಮಲಿಕ್ ಟ್ವಿಟರ್‌ನಲ್ಲಿ ಟ್ರೋಲ್ ಆಗಿದ್ದಾರೆ. ಮಲಿಕ್ ಟ್ರೋಲ್ ಆಗಲು ಕಾರಣವೇನು? ಇಲ್ಲಿದೆ ವಿವರ.

ಮ್ಯಾಂಚೆಸ್ಟರ್(ಜೂ.16): ಭಾರತ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ 336 ರನ್ ಟಾರ್ಗೆಟ್ ಪಡೆದಿರುವ ಪಾಕಿಸ್ತಾನ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಪಾಕ್ ಆಲೌಟ್‌ಗಾಗಿ ಹೋರಾಟ ನಡೆಸುತ್ತಿದೆ. ಬೃಹತ್ ಮೊತ್ತ ಚೇಸ್ ಮಾಡುತ್ತಿದ್ದ ವೇಳೆ ಪಾಕಿಸ್ತಾನ  ಹಿರಿಯ ಆಲ್ರೌಂಡರ್ ಶೋಯಿಬ್ ಮಲಿಕ್ ಶೂನ್ಯಕ್ಕೆ ಔಟಾದರು. ಮಲಿಕ್ ಡಕೌಟ್ ಟ್ವಿಟರ್‌ನಲ್ಲಿ ಟ್ರೋಲ್ ಆಗಿದೆ.

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ಗಾಯಗೊಂಡ ಭುವನೇಶ್ವರ್ ಔಟ್!

ಶೋಯಿಬ್ ಮಲಿಕ್ ಎದುರಿಸಿದ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಮಲಿಕ್ ವಿಕೆಟ್ ಪತನವಾಗುತ್ತಿದ್ದಂತೆ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ. ಮಲಿಕ್ ವಿದಾಯ ಸೂಕ್ತ ಅನ್ನೋ ಮಾತುಗಳು ಕೇಳಿ ಬಂದಿದೆ.


 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!