ಧವನ್, ವಿಜಯ್ ಶಂಕರ್ ಆಯ್ತು! ವಿಶ್ವಕಪ್‌ನಿಂದ ಭುವಿ ಸಹ ಹೊರಕ್ಕೆ?

Published : Jun 21, 2019, 12:03 PM ISTUpdated : Jun 21, 2019, 12:20 PM IST
ಧವನ್, ವಿಜಯ್ ಶಂಕರ್ ಆಯ್ತು! ವಿಶ್ವಕಪ್‌ನಿಂದ ಭುವಿ ಸಹ ಹೊರಕ್ಕೆ?

ಸಾರಾಂಶ

ಇಂಗ್ಲೆಂಡ್‌ನಲ್ಲಿರುವ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ 2019ರಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದ ತಂಡಕ್ಕೆ, ಆಟಗಾರರು ಒಬ್ಬರಾದ ನಂತರ ಮತ್ತೊಬ್ಬರು ಗಾಯಗೊಳ್ಳುತ್ತಿರುವುದು ಆತಂಕ ತಂದಿದೆ. ಧವನ್, ವಿಜಯ್ ಶಂಕರ್ ಆಯ್ತು. ಇದೀಗ ಭುವಿ ತಂಡದಿಂದ ಹೊರ ಹೋಗುವ ಸರದಿ.

ಸೌಥಾಂಪ್ಟನ್‌ (ಜು.21) :  ಸ್ನಾಯು ಸೆಳೆತಕ್ಕೆ ಒಳಗಾಗಿರುವ ವೇಗಿ ಭುವನೇಶ್ವರ್‌ ಕುಮಾರ್‌ ಕನಿಷ್ಠ 3 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಂಡದ ಆಡಳಿತ ತಿಳಿಸಿದೆ. ಆದರೆ ಅವರ ಗಾಯದ ಪ್ರಮಾಣ ಎಷ್ಟಿದೆ, ಗುಣಮುಖರಾಗುತ್ತಿದ್ದಾರೆಯೇ ಎನ್ನುವ ವಿವರಗಳನ್ನು ಬಿಸಿಸಿಐ ಮಾಧ್ಯಮಗಳಿಗೆ ಒದಗಿಸುತ್ತಿಲ್ಲ.

ICC WORLD CUP 2019 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೀಸಲು ಬೌಲರ್‌ ಖಲೀಲ್‌ ಅಹ್ಮದ್‌ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದ್ದು, ಒಂದೊಮ್ಮೆ ಭುವನೇಶ್ವರ್‌ ನಿಗದಿತ ಸಮಯದೊಳಗೆ ಗುಣಮುಖರಾಗದಿದ್ದರೆ ಅವರಿಗೆ ಅವಕಾಶ ಸಿಗಲಿದೆ. ಭುವಿ ಬದಲಿಗೆ ಇಂಗ್ಲೆಂಡ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಇಶಾಂತ್‌ ಶರ್ಮಾರನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವಿಜಯ್‌ ಶಂಕರ್‌ಗೆ ಗಾಯ:ಹೆಚ್ಚಿದ ಭಾರತ ತಂಡದ ಆತಂಕ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ಗಾಯಾಳುಗಳ ಸಮಸ್ಯೆ ಮುಂದುವರಿದಿದೆ. ಬುಧವಾರ ಅಭ್ಯಾಸದ ವೇಳೆ ಬೂಮ್ರಾ ಎಸೆದ ಯಾರ್ಕರ್‌ನಿಂದಾಗಿ ಆಲ್ರೌಂಡರ್‌ ವಿಜಯ್‌ ಶಂಕರ್‌ಗೆ ಕಾಲ್ಬೆರಳಿಗೆ ಪೆಟ್ಟು ಬಿದ್ದಿದ್ದು, ಶನಿವಾರ ನಡೆಯಲಿರುವ ಆಷ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಶಿಖರ್‌ ಧವನ್‌, ಭುವನೇಶ್ವರ್‌ ಕುಮಾರ್‌ ಬಳಿಕ ಇದೀಗ ವಿಜಯ್‌ ಶಂಕರ್‌ ಸಹ ಗಾಯಗೊಂಡಿರುವುದು ಭಾರತ ತಂಡದ ಆತಂಕ ಹೆಚ್ಚಿಸಿದೆ.

‘ವಿಜಯ್‌ ಗಾಯದ ಪ್ರಮಾಣ ಹೆಚ್ಚೇನೂ ಇಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ. ಬುಧವಾರ ಸಂಜೆ ವೇಳೇಗೆ ನೋವು ಕಡಿಮೆಯಾಗಿದೆ’ ಎಂದು ಭಾರತ ತಂಡದ ಮೂಲಗಳು ತಿಳಿಸಿವೆ. ಆದರೆ ಗುರುವಾರ ವಿಜಯ್‌ ನೆಟ್ಸ್‌ ಅಭ್ಯಾಸ ನಡೆಸಲಿಲ್ಲ. ಮೈದಾನಕ್ಕೆ ಆಗಮಿಸಿದ ಅವರು ಜಾಗಿಂಗ್‌ ನಡೆಸಲು ಮುಂದಾದರು. ಆದರೆ ಅರ್ಧ ಸುತ್ತು ಸುತ್ತುವ ವೇಳೆಗೆ ನೋವು ಹೆಚ್ಚಾದ ಕಾರಣ, ಜಾಗಿಂಗ್‌ ನಿಲ್ಲಿಸಿ ಕೆಲ ಹೊತ್ತು ವ್ಯಾಯಾಮ ನಡೆಸಿದರು.

ಧವನ್‌ಗೆ ಇಂಜುರಿ, ಮೋದಿ ಟ್ವೀಟ್

ಬ್ಯಾಟಿಂಗ್‌ನಲ್ಲಿ ವಿಜಯ್‌ಗೆ ಹೆಚ್ಚಿನ ಅವಕಾಶ ಸಿಗದಿದ್ದರೂ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದರು. ಒಂದೊಮ್ಮೆ ಅವರು ಅಲಭ್ಯರಾದರೆ ರವೀಂದ್ರ ಜಡೇಜಾ ಇಲ್ಲವೇ ದಿನೇಶ್‌ ಕಾರ್ತಿಕ್‌ರನ್ನು ಆಡಿಸಬೇಕಾಗುತ್ತದೆ.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!