ನನ್ನ ಕೊನೆ ಉಸಿರಿರುವರೆಗೂ ಹೋರಾಡುತ್ತೇನೆ; ಜಡೇಜಾ ಭಾವನಾತ್ಮಕ ಸಂದೇಶ!

By Web Desk  |  First Published Jul 11, 2019, 7:23 PM IST

ನ್ಯೂಜಿಲೆಂಡ್ ವಿರುದ್ಧದ ಸೋಲಿನಿಂದ  ಭಾರತೀಯರ ಹೊರಬಂದಿಲ್ಲ. ಇದರ ಬೆನ್ನಲ್ಲೇ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮಾನ ಕಾಪಾಡಿದ ರವೀಂದ್ರ ಜಡೇಜಾ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಸೋಲಿನ ಬಳಿಕ ಜಡ್ಡು  ಹೇಳಿದ್ದೇನು? ಇಲ್ಲಿದೆ ವಿವರ. 
 


ಮ್ಯಾಂಚೆಸ್ಟರ್(ಜು.11): ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾಗೆ ನೋವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇತ್ತ ಅಭಿಮಾನಿಗಳು ಕೂಡ ಸೋಲಿನ ನೋವಿನಿಂದ ಹೊರಬಂದಿಲ್ಲ. ಆದರೆ ರವೀಂದ್ರ ಜಡೇಜಾ ನೀಡಿದ ಹೋರಾಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 77 ರನ್ ಸಿಡಿಸಿ ಟೀಂ ಇಂಡಿಯಾವನ್ನು ಹೀನಾಯ ಸೋಲಿನಿಂದ ತಪ್ಪಿಸಿದ ರವೀಂದ್ರ ಜಡೇಜಾ ಎಲ್ಲರ ಹೃದಯ ಗೆದ್ದಿದ್ದಾರೆ. ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳುತ್ತಿದ್ದಂತೆ ರವೀಂದ್ರ ಜಡೇಜಾ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ರವೀಂದ್ರ ಜಡೇಜಾ-ಮಂಜ್ರೇಕರ್ ಮುಸುಕಿನ ಗುದ್ದಾಟಕ್ಕೆ ತೆರೆ!

Tap to resize

Latest Videos

undefined

ಕ್ರೀಡೆ ನನಗೆ ಎಲ್ಲವನ್ನೂ ಕಲಿಸಿದೆ. ಪ್ರತಿ ಬಾರಿ ಎಡವಿದಾಗಲೂ ಮತ್ತೆ ಎದ್ದು ಮುನ್ನಗ್ಗುವಂತೆ ಪ್ರೇರೇಪಿಸಿದೆ. ನಾನು ಯಾವುತ್ತೂ ಕೈಲಾಗಲ್ಲ ಎಂದು ಬಿಡುವುದಿಲ್ಲ. ನನಗೆ ಸ್ಪೂರ್ತಿಯಾಗಿರೋ  ಅಭಿಮಾನಿಗಳು ಹಾಗೂ ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ. ನನ್ನನ್ನು ಪ್ರೋತ್ಸಾಹಿಸಿ, ನಾನು ಕೊನೆಯ ಉಸಿರು ಇರುವವರೆಗೂ ಹೋರಾಡುತ್ತೇನೆ ಎಂದು ರವೀಂದ್ರ ಜಡೇಜಾ ಟ್ವೀಟ್ ಮಾಡಿದ್ದಾರೆ.

 

Sports has taught me to keep on rising after every fall & never to give up. Can’t thank enough each & every fan who has been my source of inspiration. Thank you for all your support. Keep inspiring & I will give my best till my last breath. Love you all pic.twitter.com/5kRGy6Tc0o

— Ravindrasinh jadeja (@imjadeja)

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಭಾರತಕ್ಕೆ ಆಘಾತ; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಬೆಂಬಲ!

ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 240 ರನ್ ಟಾರ್ಗೆಟ್ ನೀಡಿತ್ತು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೇವಲ 1 ರನ್ ಸಿಡಿಸಿ ಔಟಾದರು. ಇನ್ನು ರಿಷಬ್ ಪಂತ್ ಅಲ್ಪ ಹೋರಾಟ ನೀಡಿದರೆ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಅಬ್ಬರಿಸಿಲ್ಲ.  ರವೀಂದ್ರ ಜಡೇಜಾ ಹಾಗೂ ಎಂ.ಎಸ್.ಧೋನಿ ಹೋರಾಟದಿಂದ ಭಾರತ ಭರ್ಜರಿ ಕಮ್‌ಬ್ಯಾಕ್ ಮಾಡಿತು. ಜಡೇಜಾ 77 ರನ್ ಸಿಡಿಸಿದರೆ, ಧೋನಿ 50 ರನ್ ಸಿಡಿಸಿದರು. ಭಾರತ 18 ರನ್ ವಿರೋಚಿತ ಸೋಲು ಕಂಡಿತು.

click me!