ಧೋನಿ ಹುಟ್ಟುಹಬ್ಬದಂದೇ ಗಾಳಿ ಸುದ್ದಿಗೆ ತೆರೆ ಎಳೆದ ಸೆಹ್ವಾಗ್..!

By Web Desk  |  First Published Jul 7, 2019, 3:52 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈ ಮೂಲಕ ಅಭಿಮಾನಿಗಳ ಗೊಂದಲಕ್ಕೆ ಸೆಹ್ವಾಗ್ ತೆರೆ ಎಳೆದಿದ್ದಾರೆ. ಅಷ್ಟಕ್ಕೂ ಸೆಹ್ವಾಗ್ ಏನಂದ್ರು ನೀವೇ ನೋಡಿ...


ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ನವದೆಹಲಿ[ಜು.07]: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಧೋನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ವಿನೂತನವಾಗಿ ಶುಭ ಕೋರುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

Tap to resize

Latest Videos

undefined

ನಿವೃತ್ತಿಯ ಬಗ್ಗೆ ಕೊನೆಗೂ ತುಟಿಬಿಚ್ಚಿದ ಧೋನಿ..!

ಹೌದು, ಧೋನಿ ಹಾಗೂ ವಿರೇಂದ್ರ ಸೆಹ್ವಾಗ್ ನಡುವಿನ ಸಂಬಂಧ ಅಷ್ಟೊಂದು ಸರಿಯಿಲ್ಲ. ಧೋನಿಯಿಂದಾಗಿಯೇ ಡೆಲ್ಲಿ ಬ್ಯಾಟ್ಸ್’ಮನ್ ಅಂತರಾಷ್ಟ್ರೀಯ ಕ್ರಿಕೆಟ್’ನಿಂದ ಬಹು ಬೇಗ ನೇಪಥ್ಯಕ್ಕೆ ಸರಿಯುವಂತಾಯಿತು ಎಂದು ಸೆಹ್ವಾಗ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹಲವು ಸಂದರ್ಭಗಳಲ್ಲಿ ಹೊರಹಾಕಿದ್ದಾರೆ. ಇನ್ನು ಸ್ವತಃ ಸೆಹ್ವಾಗ್ ಕೂಡಾ ತಮ್ಮ ಹಾಗೂ ಧೋನಿಯ ನಡುವೆ ಅಂತಹ ಬೇಸರವೇನಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಉಭಯ ಕ್ರಿಕೆಟಿಗರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಸರೆರಚಾಟ ಮಾಡುವುದನ್ನು ನೋಡಿದ್ದೇವೆ. 

ಧೋನಿಗಿಂದು 38ನೇ ಹುಟ್ಟುಹಬ್ಬದ ಸಂಭ್ರಮ

ಕ್ರಿಕೆಟ್ ನಿವೃತ್ತಿಯ ಬಳಿಕ ಟ್ವಿಟರ್’ನಲ್ಲಿ ಸಾಕಷ್ಟು ಸಕ್ರಿಯವಾಗಿರುವ ಸೆಹ್ವಾಗ್ ಹಲವಾರು ಬಾರಿ ವಿನೂತನ ಟ್ವೀಟ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಧೋನಿಯನ್ನು ಕ್ರಿಕೆಟ್ ಜಗತ್ತಿನ ಅದ್ಭುತ ಎಂದು ಕರೆಯುವ ಮೂಲಕ ವಿನೂತನವಾಗಿ ಶುಭಕೋರಿದ್ದಾರೆ. ಅಲ್ಲದೇ ಅಭಿಮಾನಿಗಳ ಗೊಂದಲಕ್ಕೂ ತೆರೆ ಎಳೆದಿದ್ದಾರೆ. 

7 continents in the World
7 days in a week
7 colours in a rainbow
7 basic musical notes
7 chakras in a human being
7 pheras in a marriage
7 wonders of the world

7 th day of 7th month- Birthday of a wonder of the cricketing world . May God Bless You! pic.twitter.com/3Xq8ZUWx8p

— Virender Sehwag (@virendersehwag)

ಜಗತ್ತಿನಲ್ಲಿ 7 ಖಂಡಗಳಿವೆ
ವಾರದಲ್ಲಿ 7 ದಿನಗಳಿವೆ
ಕಾಮನಬಿಲ್ಲಿನಲ್ಲಿ 7 ಬಣ್ಣಗಳಿವೆ
ಸಂಗೀತದಲ್ಲಿಸಪ್ತ[7] ಸ್ವರಗಳಿವೆ
ಮನುಷ್ಯನ ದೇಹದಲ್ಲಿ ಸಪ್ತ ಚಕ್ರಗಳಿವೆ
ಮದುವೆಯಲ್ಲಿ ಸಪ್ತಪದಿಯಿದೆ
ಜಗತ್ತಿನಲ್ಲಿ 7 ಅದ್ಭುತಗಳಿವೆ.
ಅದೇ ರೀತಿ 7ನೇ ತಿಂಗಳಿನ 7ನೇ ತಾರೀಕಿನಂದು ಜನಿಸಿದ ಧೋನಿ ಕ್ರಿಕೆಟ್ ಜಗತ್ತಿನ ಅದ್ಭುತ. ದೇವರು ಹರಸಲಿ ಎಂದು ಶುಭಕೋರಿದ್ದಾರೆ.

Happy birthday (mahibhai) ❤️ words are not enough to express my love for u 🤗 wish u all the success and happiness and health in life 🤗 God bless u always ❤️ pic.twitter.com/54g9Ac4FRH

— IamKedar (@JadhavKedar)

Here is wishing one of the best in the business a very very happy birthday.

— Ashwin Ravichandran (@ashwinravi99)

Wish you a happy birthday ! Have a great year.
All the very best for the next two games 👍 pic.twitter.com/d8STlRh9e9

— Sachin Tendulkar (@sachin_rt)

First played together in Bangladesh in 2004 & shortly saw him announce his arrival against Pak at Vizag when he scored 148, hasn’t looked back since and the legend of MS Dhoni has only grown by the year. Wishing a once in a lifetime player and captain , pic.twitter.com/nlPGj1Xord

— Mohammad Kaif (@MohammadKaif)

wish you a successful life , Great year ahead Nation is proud of you . pic.twitter.com/KNfEKyGi6F

— Sudarsan Pattnaik (@sudarsansand)

4 World Cups 🏆🏆🏆🏆
4 Different Looks 😎😎
Which one do you like the most? Take a pick 🎂🎂 pic.twitter.com/74F7tCpfBw

— BCCI (@BCCI)

Who can forget the 2011 World Cup winning six? 🙌 Happy Birthday, MS Dhoni! pic.twitter.com/M92m2ky2lH

— Cricket World Cup (@cricketworldcup)

ಸೆಹ್ವಾಗ್ ಮಾತ್ರವಲ್ಲದೇ ಟೀಂ ಇಂಡಿಯಾದ ಹಿರಿ-ಕಿರಿಯ ಆಟಗಾರರು ಧೋನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಪ್ರಸ್ತುತ ಧೋನಿ ವಿಶ್ವಕಪ್ ಆಡುತ್ತಿದ್ದು, ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಜುಲೈ 09ರಂದು ನಡೆಯಲಿರುವ ಮೊದಲ ಸೆಮೀಸ್ ಪಂದ್ಯದಲ್ಲಿ ಭಾರತ ತಂಡವು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 
  

click me!