ಮೊದಲ ವಿಶ್ವಕಪ್ ಪಂದ್ಯಕ್ಕಾಗಿ 15 ವರ್ಷ ಕಾದ ದಿನೇಶ್ ಕಾರ್ತಿಕ್!

By Web DeskFirst Published Jul 2, 2019, 4:28 PM IST
Highlights

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿಗೂ ಮೊದಲು ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಕಾರ್ತಿಕ್ ವಿಶ್ವಕಪ್ ಪಂದ್ಯ ಆಡುತ್ತಿರುವುದು ಇದೇ ಮೊದಲು. ವಿಶ್ವಕಪ್ ಪಂದ್ಯಕ್ಕಾಗಿ ಕಾರ್ತಿಕ್ ಬರೋಬ್ಬರಿ 15 ವರ್ಷ ಕಾದಿದ್ದಾರೆ. 

ಭಾರತ vs ಬಾಂಗ್ಲಾದೇಶ ಪಂದ್ಯದ ಸ್ಕೋರ್ ಎಷ್ಟು?

ಬರ್ಮಿಂಗ್‌ಹ್ಯಾಮ್(ಜು.02): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯಕ್ಕೆ ಟೀಂ ಇಂಡಿಯಾ 2 ಬದಲಾವಣೆ ಮಾಡಲಾಗಿದೆ. ಕೇದಾರ್ ಜಾಧವ್ ಬದಲು ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡಿದ್ದರೆ, ಕುಲ್ದೀಪ್ ಯಾದವ್ ಬದಲು ಭುವನೇಶ್ವರ್ ಕುಮಾರ್ ಅವಕಾಶ ಪಡೆದಿದ್ದಾರೆ. ಟೀಂ ಇಂಡಿಯಾದ ಬದಲಾವಣೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ ಕ್ರಿಕೆಟ್ ಕರಿಯರ್‌ಗೆ ಹೊಸ ತಿರುವು ನೀಡಿದೆ.

ಇದನ್ನೂ ಓದಿ: ಶಮಿ ಮುಸಲ್ಮಾನ ಎಂದು ಕ್ರೀಡೆಯಲ್ಲಿ ಧರ್ಮ ಎಳೆದ ಪಾಕ್ ಕ್ರಿಕೆಟಿಗ

ದಿನೇಶ್ ಕಾರ್ತಿಕ್ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ವಿಶ್ವಕಪ್ ಪಂದ್ಯ ಆಡುತ್ತಿರುವುದು ಇದೇ ಮೊದಲು. ದಿನೇಶ್ ಕಾರ್ತಿಕ್ ವಿಶ್ವಕಪ್ ಪಂದ್ಯ ಆಡಲು ಬರೋಬ್ಬರಿ 15 ವರ್ಷ ಕಾದಿದ್ದಾರೆ.2004ರಿಂದ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಕಾರ್ತಿಕ್ ಹಲವು ಏರಿಳಿತ ಕಂಡಿದ್ದಾರೆ. 15 ವರ್ಷಗಳ ಕರಿಯರರ್‌ನಲ್ಲಿ ಮೊದಲ ವಿಶ್ವಕಪ್ ಪಂದ್ಯ ಆಡೋ ಅವಕಾಶ ಸಿಕ್ಕಿದ್ದು 2019ರಲ್ಲಿ ಅನ್ನೋದು ವಿಶೇಷ.  

ಇದನ್ನೂ ಓದಿ:ಶಕೀಬ್ ಅಬ್ಬರಿಸಿದಾಗಲೆಲ್ಲಾ ಭಾರತಕ್ಕೆ ಸೋಲು..!

ಕಾರ್ತಿಕ್ ಡೆಬ್ಯೂ ಮಾಡಿದ 3ನೇ ವರ್ಷಕ್ಕೆ ವಿಶ್ವಕಪ್ ತಂಡಕ್ಕೆ ಆಯ್ಕೆಯಾದರು. 2007ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ಭಾರತ ತಂಡದಲ್ಲಿದ್ದರು. ಆದರೆ ಟೀಂ ಇಂಡಿಯಾ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇನ್ನು ಲೀಗ್ ಪಂದ್ಯಗಳಲ್ಲಿ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ ಕಾರ್ತಿಕ್‌ಗೆ ಅವಕಾಶ ಸಿಗಲಿಲ್ಲ

2007ರ ಬಳಿಕ 2011 ಹಾಗೂ 2015ರ ವಿಶ್ವಕಪ್ ಟೂರ್ನಿಗೆ ದಿನೇಶ್ ಕಾರ್ತಿಕ್ ಆಯ್ಕೆಯಾಗಿಲ್ಲ. 2019ರ ವಿಶ್ವಕಪ್ ಟೂರ್ನಿಗೆ ಮತ್ತೆ ಕಮ್‌ಬ್ಯಾಕ್ ಮಾಡಿದ ಕಾರ್ತಿಕ್ ಆರಂಭಿಕ 7 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ ಬಾಂಗ್ಲಾದೇಶ ವಿರುದ್ದದ ಪಂದ್ಯದದಲ್ಲಿ ಕಳಪೆ ಫಾರ್ಮ್‌ನಲ್ಲಿದ್ದ ಕೇದಾರ್ ಜಾಧವ್ ಬದಲು ಕಾರ್ತಿಕ್‌ಗೆ ಅವಕಾಶ ನೀಡಲಾಗಿದೆ. 
 

click me!