ಶಮಿ ಮುಸಲ್ಮಾನ ಎಂದು ಕ್ರೀಡೆಯಲ್ಲಿ ಧರ್ಮ ಎಳೆದ ಪಾಕ್ ಕ್ರಿಕೆಟಿಗ

By Web Desk  |  First Published Jul 2, 2019, 3:56 PM IST

ಕ್ರಿಕೆಟ್‌ನಲ್ಲಿ ಪ್ರದರ್ಶನ ಮುಖ್ಯ ಹೊರತು, ಧರ್ಮ, ಜಾತಿ ಮುಖ್ಯವಲ್ಲ. ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಇದೀಗ ಟೀಂ ಇಂಡಿಯಾ ಕ್ರಿಕೆಟಿಗರ ಪ್ರದರ್ಶನದಲ್ಲಿ ಧರ್ಮ ಎಳೆದುತಂದು ಟೀಕೆಗೆ ಗುರಿಯಾಗಿದ್ದಾ


ಭಾರತ vs ಬಾಂಗ್ಲಾದೇಶ ಪಂದ್ಯದ ಸ್ಕೋರ್ ಎಷ್ಟು?

ಇಸ್ಲಾಮಾಬಾದ್(ಜು.02): ಟೀಂ ಇಂಡಿಯಾ ಪ್ರತಿನಿಧಿಸೋ ಪ್ರತಿಯೊಬ್ಬ ಕ್ರಿಕೆಟಿಗರು ಎಲ್ಲಾ ಭಾರತೀಯರ ಹೆಮ್ಮೆ. ಇಲ್ಲಿ ಯಾರೂ ಕೂಡ  ಧರ್ಮ, ಜಾತಿ ನೋಡುವುದಿಲ್ಲ. ಎದುರಾಳಿ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕು ಅನ್ನೋ  ಹಂಬಲ ಇಟ್ಟುಕೊಂಡಿರುತ್ತಾರೆ. ಆದರೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಸಲ್ಮಾನ, ಹೀಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ಭಾರತೀಯ ಕ್ರಿಕೆಟಿಗರ ಕ್ರೀಡಾ ಸ್ಫೂರ್ತಿ ಪ್ರಶ್ನಿಸಿದ ವಕಾರ್ ಯೂನಿಸ್‌ಗೆ ಮಂಗಳಾರತಿ!

ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿತ್ತು. ಇದರ ಬೆನ್ನಲ್ಲೇ ಹಲವು ಕ್ರಿಕೆಟಿಗರು ಟೀಂ ಇಂಡಿಯಾ ವಿರುದ್ಧ ಹರಿಹಾಯ್ದಿದ್ದರು. ಇದೀಗ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಕೂಡ ಭಾರತದ ಪ್ರದರ್ಶನವನ್ನು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಮೊಹಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿ ತಮ್ಮ ಜಬಾಬ್ದಾರಿ ನಿರ್ವಹಿಸಿದ್ದಾರೆ. ಶಮಿ ಒರ್ವ ಮುಸಲ್ಮಾನ, ಹೀಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಸಲ್ಮಾನ ಶ್ರೇಷ್ಠ ಬೌಲಿಂಗ್ ದಾಳಿ ಸಂಘಟಿಸಿರುವುದು ಹೆಮ್ಮೆ ಎಂದಿದ್ದಾರೆ.

 

Don't understand why religion has to be mentioned when looking at the performance of the Indian bowling attack 🙄 pic.twitter.com/A3INMEEBP7

— Saj Sadiq (@Saj_PakPassion)

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಖಾಸಗಿತನಕ್ಕೆ ಅಡ್ಡಿ- 3 ಅತಿಥಿಗಳಿಗೆ ವಾರ್ನಿಂಗ್!

ಕ್ರಿಕೆಟ್‌ನಲ್ಲಿ ಧರ್ಮವನ್ನು ಎಳೆದುತಂದ ಅಬ್ದುಲ್ ರಜಾಕ್ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸ್ವತಃ ಪಾಕಿಸ್ತಾನ ಅಭಿಮಾನಿಗಳು ಕೂಡ ರಜಾಕ್ ಹೇಳಿಕೆಯನ್ನು ಟೀಕಿಸಿದ್ದಾರೆ. ಇತ್ತೀಚೆಗಷ್ಟೇ ಅಬ್ದುಲ್ ರಜಾಕ್, ಹಾರ್ದಿಕ್ ಪಾಂಡ್ಯಾಗೆ ಕೋಚ್ ಆಗೋ ಹಂಬಲ ವ್ಯಕ್ತಪಡಿಸಿ ಸುದ್ದಿಯಾಗಿದ್ದರು.

click me!