ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; 2 ತಂಡದಲ್ಲೂ ಪ್ರಮುಖ ಬದಲಾವಣೆ

By Web DeskFirst Published Jul 2, 2019, 2:38 PM IST
Highlights

ವಿಶ್ವಕಪ್ ಟೂರ್ನಿಯ 40ನೇ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ.

ಬರ್ಮಿಂಗ್’ಹ್ಯಾಮ್[ಜು.02]: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ನಡುವಿನ ವಿಶ್ವಕಪ್ ಟೂರ್ನಿಯ 40ನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ.

ಭಾರತ ಕೇದಾರ್ ಜಾಧವ್ ಬದಲಿಗೆ ದಿನೇಶ್ ಕಾರ್ತಿಕ್, ಕುಲ್ದೀಪ್ ಯಾದವ್ ಬದಲಿಗೆ ಭುವನೇಶ್ವರ್ ಕುಮಾರ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಮಿರಾಜ್ ಬದಲಿಗೆ ರುಬೆಲ್ ಹಾಗೂ ಮೊಹಮ್ಮದುಲ್ಲಾ ಬದಲಿಗೆ ಶಬ್ಬೀರ್ ರೆಹಮಾನ್ ತಂಡಕೂಡಿಕೊಂಡಿದ್ದಾರೆ.  

 

ಬಾಂಗ್ಲಾ ಬಗ್ಗುಬಡಿದು ಸೆಮೀಸ್ ಪ್ರವೇಶಿಸುವ ವಿಶ್ವಾಸದಲ್ಲಿರುವ ಭಾರತಕ್ಕೆ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅಡ್ಡಿಯಾಗುವ ಸಾಧ್ಯತೆಯಿದೆ. ಈಗಾಗಲೇ ಟೂರ್ನಿಯಲ್ಲಿ 2 ಶತಕ ಮೂರು ಅರ್ಧಶತಕದೊಂದಿಗೆ 476 ರನ್ ಬಾರಿಸಿದ್ದು ಮಾತ್ರವಲ್ಲದೆ, ಬೌಲಿಂಗ್’ನಲ್ಲಿ 5 ವಿಕೆಟ್ ಪಡೆದು ಗಮನ ಸೆಳೆದಿದ್ದರು. ಇನ್ನು ರೋಹಿತ್ ಶರ್ಮಾ ಕೂಡಾ ಮತ್ತೊಂದು ಶತಕದ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಮೂರು ಶತಕದ ನೆರವಿನಿಂದ 440 ರನ್ ಬಾರಿಸಿ ಗಮನ ಸೆಳೆದಿದ್ದಾರೆ. 

ತಂಡಗಳು ಹೀಗಿವೆ:

Bhuvi comes back; DK gets his debut

Bangladesh bring in Rubel Hossian and Sabbir Rahman

Ball-by-ball: https://t.co/av5SHYfmPm
Live report: https://t.co/UiKfVtm63s | pic.twitter.com/2q6ph3GUv9

— ESPNcricinfo (@ESPNcricinfo)

 

click me!