
ಮುಂಬೈ(ಜು.06): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗುತ್ತಲೆ ಇದ್ದಾರೆ. ಟ್ವಿಟರ್‌ನಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇದ್ದಾರೆ. ಈಗಾಗಲೇ ರವೀಂದ್ರ ಜಡೇಜಾ ಕೈಯಿಂದ ಮಂಗಳಾರತಿ ಮಾಡಿಸಿಕೊಂಡಿದ್ದರು. ಇದೀಗ ರವೀಂದ್ರ ಜಡೇಜಾ ವಿಕೆಟ್ ಪಡೆದ ಬೆನ್ನಲ್ಲೇ ಮತ್ತೆ ಮಂಜ್ರೇಕರ್ ಟ್ರೋಲ್ ಆಗಿದ್ದಾರೆ.
ಇದನ್ನೂ ಓದಿ: ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?
ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಅವಕಾಶ ಪಡೆದ ರವೀಂದ್ರ ಜಡೇಜಾ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿ ಮಿಂಚಿದರು. 4ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ಜಡೇಜಾಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಮಂಜ್ರೇಕರ್ ಟ್ರೋಲ್ ಮಾಡಿದ್ದಾರೆ.