ಶತಕ ಸಿಡಿಸಿ ಸೋಲಿನ ಮುನ್ಸೂಚನೆ ನೀಡಿದ ಮ್ಯಾಥ್ಯೂಸ್?

Published : Jul 06, 2019, 06:48 PM IST
ಶತಕ ಸಿಡಿಸಿ ಸೋಲಿನ ಮುನ್ಸೂಚನೆ ನೀಡಿದ ಮ್ಯಾಥ್ಯೂಸ್?

ಸಾರಾಂಶ

ಭಾರತ ವಿರುದ್ಧದ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಆ್ಯಂಜಲೋ ಮ್ಯಾಥ್ಯೂಸ್ ಸೆಂಚುರಿ ಸಿಡಿಸಿದ್ದಾರೆ. ಮ್ಯಾಥ್ಯೂಸ್ ಶತಕ ಸಿಡಿಸಿ ಸೋಲಿನ ಮುನ್ಸೂಚನೆ ನೀಡಿದ್ದಾರೆ ಅನ್ನೋ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆತಂಕಕ್ಕೆ ಕಾರಣವೇನು? ಇಲ್ಲಿದೆ ವಿವರ.

ಲೀಡ್ಸ್(ಜು.06): ವಿಶ್ವಕಪ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಶ್ರೀಲಂಕಾ ಹಿರಿಯ ಕ್ರಿಕೆಟಿಗ ಆ್ಯಂಜಲೋ ಮ್ಯಾಥ್ಯೂಸ್ ಟೂರ್ನಿ ಅಂತಿಮ ಹಂತದಲ್ಲಿ ಫಾರ್ಮ್‌ಗೆ ಮರಳಿದ್ದಾರೆ. ಭಾರತ ವಿರುದ್ದ ಭರ್ಜರಿ ಶತಕ ಸಿಡಿಸಿ ಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾದರು. ಆದರೆ ಮ್ಯಾಥ್ಯೂಸ್ ಸೆಂಚುರಿ ಸಿಡಿಸುತ್ತಿದ್ದಂತೆ, ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಇದಕ್ಕೆ ಕಾರಣ ಮ್ಯಾಥ್ಯೂಸ್ ಶತಕ ಸಿಡಿಸಿದಾಗೆಲ್ಲಾ ಶ್ರೀಲಂಕಾ ಸೋಲು ಅನುಭವಿಸಿದೆ.

ಆ್ಯಂಜಲೋ ಮ್ಯಾಥ್ಯೂಸ್ ಏಕದಿನ ಕ್ರಿಕೆಟ್‌ನಲ್ಲಿ 3 ಸೆಂಚುರಿ ಪೂರೈಸಿದರು. ಮ್ಯಾಥ್ಯೂಸ್ 3 ಸೆಂಚುರಿಗಳು ಭಾರತದ ವಿರುದ್ಧವೇ ಸಿಡಿಸಿದ್ದಾರೆ. ಈ ಹಿಂದೆ 2 ಸೆಂಚುರಿ ಸಿಡಿಸಿದಾಗಲೂ ಶ್ರೀಲಂಕಾ ಸೋಲು ಕಂಡಿದೆ. ಹೀಗಾಗಿ ಈ ಬಾರಿಯೂ ಸೋಲು ಅನುಭವಿಸಲಿದೆ ಅನ್ನೋ ಆತಂಕ ಶುರುವಾಗಿದೆ. 2 ಬಾರಿ ಶತಕ ಸಿಡಿಸಿದ ಮ್ಯಾಥ್ಯೂಸ್ ಅಜೇಯರಾಗಿ ಉಳಿದಿದ್ದರು. ಆದರೆ ಈ ಬಾರಿ 113 ರನ್ ಸಿಡಿಸಿ ಔಟಾಗಿದ್ದಾರೆ. 

ಮಾಥ್ಯೂಸ್ ಶತಕ-ಲಂಕಾಗೆ ಸೋಲು!
139* v ಭಾರತ(ರಾಂಚಿ,2014) ಲಂಕಾಗೆ 3 ವಿಕೆಟ್ ಸೋಲು
111* v ಭಾರತ (ಮೊಹಾಲಿ,2017) ಲಂಕಾಗೆ 141 ರನ್ ಸೋಲು
113 v ಭಾರತ(ಲೀಡ್ಸ್,2019*) ?

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!