ವಿಶ್ವಕಪ್ ಟೂರ್ನಿ ಸೆಮಿಫೈನಲ್ ಹೋರಾಟಕ್ಕೆ ನಾಲ್ಕು ತಂಡಗಳು ರೆಡಿಯಾಗಿದೆ. ಸೆಮಿಫೈನಲ್ ಹೋರಾಟದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸೋ ತಂಡ ಯಾವುದು? ಈ ಕುರಿತು ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಭವಿಷ್ಯ ನುಡಿದಿದ್ದಾರೆ.
ಮ್ಯಾಂಚೆಸ್ಟರ್(ಜು.07): ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಸೌತ್ ಆಫ್ರಿಕಾ ಗೆಲುವಿನೊಂದಿಗೆ ವಿಶ್ವಕಪ್ ಟೂರ್ನಿಗೆ ಗುಡ್ ಬೈ ಹೇಳಿದೆ. ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಬಳಿಕ , ಸೌತ್ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ವಿಶ್ವಕಪ್ ಸೆಮಿ ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧ ಆಸೀಸ್‌ಗೆ ಸೋಲು; ಸೆಮೀಸ್ ಎದುರಾಳಿ ಅದಲು-ಬದಲು!
ಡುಪ್ಲೆಸಿಸ್ ಪ್ರಕಾರ, ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ಮಣಿಸಲಿದೆ. ಇನ್ನು 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ತಂಡವನ್ನು ಮಣಿಸಲಿದೆ. ಈ ಮೂಲಕ ಭಾರತ ಹಾಗೂ ಇಂಗ್ಲೆಂಡ್ ಫೈನಲ್ ಪ್ರವೇಶಿಸಲಿದೆ ಎಂದು ಡುಪ್ಲೆಸಿಸ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ದಿಗ್ಗಜರ ದಾಖಲೆ ಪುಡಿ ಮಾಡಿದ ಧೋನಿ-ಜಡೇಜಾ ಜೋಡಿ!
ಜುಲೈ 09 - ಭಾರತ Vs ನ್ಯೂಜಿಲೆಂಡ್(ಮ್ಯಾಂಚೆಸ್ಟರ್)
ಜುಲೈ 11 - ಆಸ್ಟ್ರೇಲಿಯಾ Vs ಇಂಗ್ಲೆಂಡ್(ಬರ್ಮಿಂಗ್‌ಹ್ಯಾಮ್)
ಫೈನಲ್
ಜುಲೈ 14 - TBC vs TBC (ಲಾರ್ಡ್ಸ್)