ವಿಲನ್ ಈಗ ಹೀರೋ; ಹೀರೋ ಆಗಿದ್ದವ ಝಿರೋ: ಇದು ವಿಶ್ವಕಪ್ ಕತೆ!

By Web DeskFirst Published Jul 15, 2019, 3:17 PM IST
Highlights

ಈ ವಿಶ್ವಕಪ್ ಟೂರ್ನಿ ಹಲವು ಕ್ರಿಕೆಟಿಗರ ಕರಿಯರ್‌ಗೆ ಹೊಸ ತಿರುವು ನೀಡಿದರೆ, ಕೆಲವರ ಕರಿಯರ್ ಅಂತ್ಯಗೊಳಿಸಿದೆ. ಇಷ್ಟೇ ಅಲ್ಲ ತಂಡ ಹಾಗೂ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದ ಕ್ರಿಕೆಟಿಗ ಹೀರೋ ಆಗಿದ್ದರೆ, ಹೀರೋ ಆಗಿ ಮಿಂಚಿದ ಕ್ರಿಕೆಟಿಗ ಇದೀಗ ಝೀರೋ ಆಗಿದ್ದಾರೆ. ಹೀರೋ-ವಿಲನ್ ರೋಚಕ ಕತೆ ಇಲ್ಲಿದೆ.
 

ಲಾರ್ಡ್ಸ್(ಜು.15): ವಿಶ್ವಕಪ್ ಫೈನಲ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯ. ಪಂದ್ಯ ಟೈ ಗೊಂಡು ಸೂಪರ್ ಓವರ್ ಮೊರೆ ಹೋದಾಗಲೂ ಮತ್ತೆ ಟೈ. ಆದರೆ ಗರಿಷ್ಠ ಬೌಂಡರಿ ಆಧಾರದಲ್ಲಿ ಆತಿಥೇಯ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ವಿಶ್ವಕಪ್ ಟೂರ್ನಿಯಲ್ಲಿ ತಂಡ  ಹಾಗೂ ಅಭಿಮಾನಿಗಳ ವಿಲನ್ ಆಗಿದ್ದ ಕ್ರಿಕೆಟಿಗ ಹೀರೋ ಆದರೆ, ಹೀರೋ ಆಗಿ ಮಿಂಚಿದ ಕ್ರಿಕೆಟಿಗ ವಿಲನ್ ಆಗಿ ಬದಲಾಗಿದ್ದಾರೆ.

ಇದನ್ನೂ ಓದಿ: ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

ಇಂಗ್ಲೆಂಡ್ ವಿಶ್ವಕಪ್ ಟ್ರೋಫಿ ಗೆಲ್ಲಲು ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಜೇಯ 84 ರನ್ ಸಿಡಿಸೋ ಮೂಲಕ ಸೋಲಿನ ಹಾದಿ ಹಿಡಿದಿದ್ದ ತಂಡಕ್ಕೆ ಗೆಲುವಿನ ಗಿಫ್ಟ್ ನೀಡಿದರು. ಸೂಪರ್ ಓವರ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಇಂಗ್ಲೆಂಡ್ ಪಾಲಿಗೆ ವಿಲನ್ ಆಗಿದ್ದ ಸ್ಟೋಕ್ಸ್ ಹೀರೋ ಆಗಿದ್ದಾರೆ. 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪಾಲಿಗೆ ವಿಲನ್ ಆಗಿದ್ದರು.

ಇದನ್ನೂ ಓದಿ: ನಿಜವಾಯ್ತು ಟಾಸ್ ಭವಿಷ್ಯ: ಟೀಂ ಇಂಡಿಯಾ ಮುಂದಿನ ಚಾಂಪಿಯನ್..?

ವೆಸ್ಟ್ ಇಂಡೀಸ್ ದೈತ್ಯ ಕಾರ್ಲೋಸ್ ಬ್ರಾಥ್ವೈಟ್, ಬೆನ್ ಸ್ಟೋಕ್ಸ್ ಓವರ್‌ನ 4 ಎಸೆತದಲ್ಲಿ ಸತತ 4  ಸಿಕ್ಸರ್ ಸಿಡಿಸೋ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ 4 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಆ ಪಂದ್ಯದಲ್ಲಿ ಸ್ಟೋಕ್ಸ್ ಇಂಗ್ಲೆಂಡ್ ತಂಡ ಹಾಗೂ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದರು. ಇದೇ ಸ್ಟೋಕ್ಸ್ ಇದೀಗ ಪ್ರತಿಷ್ಠಿತ ವಿಶ್ವಕಪ್ ಗೆಲ್ಲಿಸಿಕೊಟ್ಟು ಹೀರೋ ಆಗಿ ಮಿಂಚಿದ್ದಾರೆ.

ಹೀರೋ ಆಗಿ ಇದೀಗ ವಿಲನ್ ಆದ ಕುಖ್ಯಾತಿಗೆ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಗುರಿಯಾಗಿದ್ದಾರೆ. ಭಾರತ ವಿರುದ್ಧದ ಪಂದ್ಯದಲ್ಲಿ ಎಂ.ಎಸ್.ಧೋನಿಯನ್ನು ರನೌಟ್ ಮಾಡಿ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ಇಷ್ಟೇ ಅಲ್ಲ ನ್ಯೂಜಿಲೆಂಡ್ ಫೈನಲ್ ಪ್ರವೇಶಕ್ಕೆ ಇದೇ ರನೌಟ್ ಸಹಕಾರಿಯಾಯಿತು. ಸೆಮಿಫೈನಲ್ ಪಂದ್ಯದಲ್ಲಿ ಹೀರೋ ಆಗಿ ಮಿಂಚಿದ ಗಪ್ಟಿಲ್, ಫೈನಲ್ ಪಂದ್ಯದ ಸೂಪರ್ ಓವರ್‌ನಲ್ಲಿ 2 ರನ್ ಸಿಡಿಸಲು ಸಾಧ್ಯವಾಗದೆ ರನೌಟ್‌ಗೆ ಬಲಿಯಾದರು. ಧೋನಿ ರನೌಟ್ ಮಾಡಿದ ಗಪ್ಟಿಲ್ ಕೊನೆಗೆ ರನೌಟ್ ಮೂಲಕವೇ ಔಟಾದರು. ಇಷ್ಟೇ ಅಲ್ಲ ನ್ಯೂಜಿಲೆಂಡ್ ವಿರೋಚಿತ ಸೋಲು ಕಂಡಿತು. 
 

click me!