ವಿರೋಧದ ನಡುವೆ ಟೀಂ ಇಂಡಿಯಾ ಕೇಸರಿ ಜರ್ನಿ ಅನಾವರಣ!

Published : Jun 28, 2019, 08:06 PM ISTUpdated : Jun 28, 2019, 08:07 PM IST
ವಿರೋಧದ ನಡುವೆ ಟೀಂ ಇಂಡಿಯಾ ಕೇಸರಿ ಜರ್ನಿ ಅನಾವರಣ!

ಸಾರಾಂಶ

ಕಾಂಗ್ರೆಸ್ ಸೇರಿದಂತೆ ಹಲವರ ವಿರೋಧದ ನಡುವೆ ಬಿಸಿಸಿಐ, ಟೀಂ ಇಂಡಿಯಾದ ಕೇಸರಿ ಜರ್ಸಿ ಅನಾವರಣ ಮಾಡಿದೆ. ನೂತನ ಜರ್ಸಿ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

ಸೌತ್ ಆಫ್ರಿಕಾ vs ಶ್ರೀಲಂಕಾ ಸ್ಕೋರ್ ಎಷ್ಟು?

ಲಂಡನ್(ಜೂ.28): ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನದ ಮೂಲಕ ಮುನ್ನುಗ್ಗುತ್ತಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ನೂತನ ಜರ್ಸಿ ಅನಾವರಣ ಮಾಡಿದೆ. ಹಲವರ ವಿರೋಧದ ನಡುವೆಯೂ ಬಿಸಿಸಿಐ ಕೇಸರಿ ಬಣ್ಣದ ಉಡುಪನ್ನು ಬಿಡುಗಡೆ ಮಾಡಿದೆ. ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಸೈನ್ಯ, ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಕೋಚ್ ಆಗಲು ಪಾಕ್ ಮಾಜಿ ಕ್ರಿಕೆಟಿಗನ ಬಯಕೆ!

ಬಿಸಿಸಿಐ ಕೇಸರಿ ಬಣ್ಣದ ಜರ್ಸಿ ಸುಳಿವು ನೀಡುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಹಲವು  ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿತ್ತು. ಕೇಂದ್ರ ಸರ್ಕಾರ ಟೀಂ ಇಂಡಿಯಾವನ್ನೂ ಕೇಸರಿಮಯ ಮಾಡುತ್ತಿದೆ ಎಂದು ಆರೋಪಿಸಿತ್ತು. ಆದರೆ ಆಸಲಿಗೆ ಐಸಿಸಿ ಪ್ರತಿ ತಂಡ ಎರಡನೇ ಜರ್ಸಿಗೆ ಬಣ್ಣಗಳನ್ನು ನೀಡಿದೆ. ಬಿಸಿಸಿಐಗೆ ಕೆಲ ಬಣ್ಣಗಳನ್ನು ನೀಡಿತ್ತು. ಇದರಲ್ಲಿ ಬಿಸಿಸಿಐ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದೆ. 

 

ಇದನ್ನೂ ಓದಿ: ಶೆಲ್ಡಾನ್ ಕಾಟ್ರೆಲ್‌ಗೆ ಆರ್ಮಿ ಸೆಂಡ್ ಆಫ್ ನೀಡಿದ ಶಮಿ!

ಜರ್ಸಿ ಮುಂಭಾಗದಲ್ಲಿ ಕಡು ನೀಲಿ ಬಣ್ಣವಿದ್ದು, ಉಳಿದ ಭಾಗಗಳು ಕೇಸರಿ ಬಣ್ಣದಿಂದ ಕೂಡಿದೆ. ಸದ್ಯ ಬ್ಲೂ ಜರ್ಸಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಕೇಸರಿ ಜರ್ಸಿ ಕೊಹ್ಲಿ ಸೈನ್ಯಕ್ಕೆ ಅದೃಷ್ಠ ತಂದುಕೊಡುತ್ತಾ ಅನ್ನೋ ಪ್ರಶ್ನೆ ಎದ್ದಿದೆ. 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!