ವಿಶ್ವಕಪ್ 2019: ಸೌತ್ ಆಫ್ರಿಕಾಗೆ ಸುಲಭ ಗುರಿ ನೀಡಿದ ಶ್ರೀಲಂಕಾ!

By Web DeskFirst Published Jun 28, 2019, 6:48 PM IST
Highlights

ಸೌತ್ ಆಫ್ರಿಕಾ ತಂಡದ ಕರಾರುವಕ್ ದಾಳಿಗೆ ತತ್ತರಿಸಿದ ಶ್ರೀಲಂಕಾ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಗಿದೆ. ಹರಿಗಣಗಳ ವಿರುದ್ಧ ಶ್ರೀಲಂಕಾ 203 ರನ್ ಸಿಡಿಸಿ, ಸಾಧಾರಣ ಮೊತ್ತ ಟಾರ್ಗೆಟ್ ನೀಡಿದೆ. 

ಚೆಸ್ಟರ್-ಲೆ-ಸ್ಟ್ರೀಟ್(ಜೂ.28): ಸೌತ್ ಆಫ್ರಿಕಾ ದಾಳಿಗೆ ತತ್ತರಿಸಿದ ಶ್ರೀಲಂಕಾ ವಿಶ್ವಕಪ್  ಟೂರ್ನಿಯ 35ನೇ ಲೀಗ್ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಕುಸಿದಿದೆ. ಕುಸಾಲ್ ಪರೇರಾ ಹಾಗೂ ಆವಿಶ್ಕಾ ಫರ್ನಾಂಡೋ ಸಿಡಿಸಿದ 67  ರನ್ ಜೊತೆಯಾಟ ಹೊರತು ಪಡಿಸಿದರೆ ಉಳಿದ ಲಂಕಾ ಬ್ಯಾಟ್ಸ್‌ಮನ್‌ಗಳ್ಯಾರು ಕನಿಷ್ಠ ರನ್ ಕಾಣಿಕೆ ನೀಡಲಿಲ್ಲ. ಹೀಗಾಗಿ ಶ್ರೀಲಂಕಾ 203 ರನ್‌ಗೆ ಆಲೌಟ್ ಆಗಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ತಂಡಕ್ಕೆ ಸೌತ್ ಆಫ್ರಿಕಾ ಶಾಕ್ ನೀಡಿತು. ನಾಯಕ ದಿಮುತ್ ಕರುಣಾರತ್ನೆ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲಿಲ್ಲಿದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎಸೆತದಲ್ಲಿ ವಿಕೆಟ್ ಕಳೆದುಕೊಂಡ ಮೊದಲ ನಾಯಕ ಅನ್ನೋ ಅಪಖ್ಯಾತಿಗೆ ಗುರಿಯಾದರು. ಕುಸಾಲ್ ಪರೇರಾ ಹಾಗೂ ಆವಿಶ್ಕಾ ಫರ್ನಾಂಡೋ 67 ರನ್ ಜೊತೆಯಾಟ ನೀಡಿದರು. ಕುಸಾಲ್ ಹಾಗೂ ಫರ್ನಾಂಡೋ ತಲಾ 30 ರನ್ ಸಿಡಿಸಿ ಔಟಾದರು.

ಆ್ಯಂಜಲೋ ಮ್ಯಾಥ್ಯೂಸ್ 11, ಕುಸಾಲ್ ಮೆಂಡೀಸ್ 23, ಧನಂಜಯ್ ಡಿಸಿಲ್ವ 24 ರನ್ ಹಾಗೂ ಜೀವನ್ ಮೆಂಡೀಸ್ 18 ರನ್ ಸಿಡಿಸಿ ನಿರ್ಗಮಿಸಿದರು. ತಿಸರಾ ಪರೇರಾ 21 ರನ್ ಸಿಡಿಸಿ ಔಟಾದರು. ಲಸಿತ್ ಮಲಿಂಗ ವಿಕೆಟ್ ಪತನದೊಂದಿಗೆ ಶ್ರೀಲಂಕಾ 49.3 ಓವರ್‌ಗಳಲ್ಲಿ 203 ರನ್‌ಗೆ  ಆಲೌಟ್ ಆಯಿತು.
 

click me!