ಸೋಲಿನ ಬೆನ್ನಲ್ಲೇ ಕೊಹ್ಲಿ,ಶಾಸ್ತ್ರಿಗೆ ಬಿಸಿಸಿಐ ಬುಲಾವ್!

By Web DeskFirst Published Jul 13, 2019, 10:42 PM IST
Highlights

ವಿಶ್ವಕಪ್ ಟೂರ್ನಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್‌ಗೆ ಬಿಸಿಸಿಐ ಬುಲಾವ್ ನೀಡಿದೆ. ಬಿಸಿಸಿಐ ಮೂವರಿಗೆ ಕರೆ ಮಾಡಿದ್ದು ಯಾಕೆ? ಇಲ್ಲಿದೆ ವಿವರ.

ಮುಂಬೈ(ಜು.13): ವಿಶ್ವಕಪ್ ಟ್ರೋಫಿ ಗೆಲ್ಲೋ ಅವಕಾಶ ಕೈಚೆಲ್ಲಿರುವ ಟೀಂ ಇಂಡಿಯಾ ಕೋಟ್ಯಂತರ ಭಾರತೀಯರ ಕನಸು ನುಚ್ಚುನೂರು ಮಾಡಿದೆ. ಸೋಲಿನ  ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿಗೆ ಬಿಸಿಸಿಐ ಬುಲಾವ್ ನೀಡಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನದ ಕುರಿತು ಪರಾಮರ್ಶೆ ನಡೆಸಲು ಬಿಸಿಸಿಐ ಸಭೆ ಕರೆದಿದೆ.

ಇದನ್ನೂ ಓದಿ: ಭಾರತೀಯ ಅಭಿಮಾನಿಗಳಿಗೆ ನ್ಯೂಜಿಲೆಂಡ್ ಕ್ರಿಕೆಟಿಗನ ಮನವಿ!

ಸುಪ್ರೀಂ ಕೋರ್ಟ್ ಆಯ್ಕೆ ಮಾಡಿದ ಬಿಸಿಸಿಐ ಕಮಿಟಿ( COA) ಪರಾಮರ್ಶೆ ನಡೆಸಲು ಮೀಟಿಂಗ್ ಆಯೋಜಿಸಿದೆ. ಈ ಮಿಟಿಂಗ್‌‌ಗಾಗಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್‌ಗೂ ಕರೆ ನೀಡಿದೆ. ನಾಯಕ ವಿರಾಟ್ ಕೊಹ್ಲಿ ತವರಿಗೆ ವಾಪಾಸ್ಸಾದ ಬೆನ್ನಲ್ಲೇ ಮೀಟಿಂಗ್ ಆಯೋಜಿಸಲಾಗುವುದು. ಹೀಗಾಗಿ ಸದ್ಯ ದಿನಾಂಕ ನಿಗದಿ ಮಾಡಿಲ್ಲ ಎಂದು ಬಿಸಿಸಿಐ COA ವಿನೋದ್ ರೈ ಹೇಳಿದ್ದಾರೆ.

ಇದನ್ನೂ ಓದಿ: ರೋಹಿತ್‌ಗೆ ಏಕದಿನ,ಟಿ20 ನಾಯಕತ್ವ; ಕೊಹ್ಲಿಗೆ ಟೆಸ್ಟ್ ಮಾತ್ರ?

ಕೊಹ್ಲಿ,ಶಾಸ್ತ್ರಿ ಹಾಗೂ ಪ್ರಸಾದ್‌ಗೆ ಕೆಲ ಪ್ರಶ್ನೆಗಳಿವೆ. ಇದಕ್ಕೆ ಅವರು ಉತ್ತರಿಸಬೇಕಿದೆ. ಇದಕ್ಕಿಂತ ಹೆಚ್ಚು ಯಾವುದೇ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ವಿನೋದ್ ರೈ ಹೇಳಿದ್ದಾರೆ. ಇದೇ ಸಭೆಯಲ್ಲಿ ಅಂಬಾಟಿ ರಾಯುಡು ದಿಢೀರ್ ನಿವೃತ್ತಿ ಕೂಡ ಪ್ರಸ್ತಾಪವಾಗೋ ಸಾಧ್ಯತೆ ಇದೆ.

click me!