ವಿಶ್ವಕಪ್ 2019: ಟೀಂ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ!

Published : Jun 04, 2019, 07:04 PM ISTUpdated : Jun 04, 2019, 07:08 PM IST
ವಿಶ್ವಕಪ್ 2019: ಟೀಂ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ!

ಸಾರಾಂಶ

ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾಗೆ ವಿಶೇಷ ಅತಿಥಿಯ ಬೆಂಬಲ ಸಿಕ್ಕಿದೆ. ಭಾರತ ತಂಡವನ್ನು ಬೆಂಬಲಿಸಲು ಇಂಗ್ಲೆಂಡ್‌ಗೆ ತೆರಳಿದ ಸ್ಪೆಷಲ್ ಗೆಸ್ಟ್ ಯಾರು? ಇಲ್ಲಿದೆ ವಿವರ.  

ಸೌಥಾಂಪ್ಟನ್(ಜೂ.04):  ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.  ಜೂನ್ 5 ರಂದು ಸೌತ್ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ. ಇದಕ್ಕಾಗಿ ಭಾರತ ಭರ್ಜರಿ ಅಭ್ಯಾಸ ನಡೆಸಿದೆ. ಇದೀಗ ಟೀಂ ಇಂಡಿಯಾವನ್ನು ಬೆಂಬಲಿಸಲು ವಿಶೇಷ ಅತಿಥಿ ಇಂಗ್ಲೆಂಡ್ ತೆರಳಿದ್ದಾರೆ.

ಇದನ್ನೂ ಓದಿ: ವಾಸೀಂ ಅಕ್ರಂಗೆ ಪರ್ಫೆಕ್ಟ್ Birthday ಗಿಫ್ಟ್ ಕೊಟ್ಟ ಪಾಕಿಸ್ತಾನ

ಟೀಂ ಇಂಡಿಯಾಗೆ ಸಪೂರ್ಟ್ ಮಾಡಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ, ಎಂ.ಎಸ್.ಧೋನಿ ಪುತ್ರಿ ಝಿವಾ ಧೋನಿ. ಧೋನಿ ಹಾಗೂ ಭಾರತ ತಂಡವನ್ನು ಬೆಂಬಲಿಸಲು ಝಿವಾ ಧೋನಿ ಇಂಗ್ಲೆಂಡ್ ತೆರಳಿದ್ದಾರೆ. ಸೌತ್ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಝಿವಾ ಧೋನಿ, ಟೀಂ ಇಂಡಿಯಾ ಹಾಗೂ  ಧೋನಿಗೆ ಸಪೂರ್ಟ್ ಮಾಡಲಿದ್ದಾರೆ. 

 

 

ಇದನ್ನೂ ಓದಿ: ಆ ’ಒಂದು’ ಸಮಸ್ಯೆಯಿಂದ ಹೊರಬರುತ್ತಾ ದಕ್ಷಿಣ ಆಫ್ರಿಕಾ..?

ಝಿವಾ ಧೋನಿ ಲಂಡನ್‌ನ ನಗರದಲ್ಲಿನ ಫೋಟೋವನ್ನು ಧೋನಿ ಪತ್ನಿ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪ್ರತಿ ಪಂದ್ಯಕ್ಕೂ ಹಾಜರಾಗಿದ್ದ  ಝಿವಾ ಇದೀಗ ವಿಶ್ವಕಪ್ ಟೂರ್ನಿಯ ಎಲ್ಲಾ ಪಂದ್ಯಗಳಿಗೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!