ವಿಶ್ವಕಪ್ 2019: ನ್ಯೂಜಿಲೆಂಡ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಬಾಂಗ್ಲಾ!

By Chethan KumarFirst Published Jun 5, 2019, 9:43 PM IST
Highlights

ವಿಶ್ವಕಪ್ ಟೂರ್ನಿಯ 9ನೇ ಲೀಗ್ ಪಂದ್ಯ ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಶಾಕ್ ನೀಡಿರುವ ಬಾಂಗ್ಲಾದೇಶ ಇದೀಗ ನ್ಯೂಜಿಲೆಂಡ್ ತಂಡಕ್ಕೆ ಆಘಾತ ನೀಡಲು ಸಜ್ಜಾಗಿದೆ. ಕಿವೀಸ್ ಬೌಲಿಂಗ್ ದಾಳಿ ನಡುವೆಯೂ ಬಾಂಗ್ಲಾದೇಶ ಹೋರಾಟ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಓವಲ್(ಜೂ.05):ನ್ಯೂಜಿಲೆಂಡ್ ಅತ್ಯುತ್ತಮ ಬೌಲಿಂಗ್ ದಾಳಿ ನಡುವೆಯೂ ಬಾಂಗ್ಲಾದೇಶ ದಿಟ್ಟ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ವಿಶ್ವಕಪ್ ಟೂರ್ನಿಯ 9ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ  49.2 ಓವರ್‌ಗಳಲ್ಲಿ 244 ರನ್‌ಗೆ ಆಲೌಟ್ ಆಗಿದೆ.  ಈ ಮೂಲಕ ನ್ಯೂಜಿಲೆಂಡ್‌ಗೆ 245 ರನ್ ಟಾರ್ಗೆಟ್ ನೀಡಿದೆ.

ಇದನ್ನೂ ಓದಿ: ಐಸಿಸಿ ಭಾರತದ ಅಭಿಮಾನಿಯಂತೆ ವರ್ತಿಸುತ್ತಿದೆ-ಕ್ರಿಕೆಟ್ ಸಂಸ್ಥೆ ಕಾಲೆಳೆದ ಟ್ವಿಟರಿಗರು!

ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಡೀಸೆಂಟ್ ಆರಂಭ ಪಡೆಯಿತು. ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ 45 ರನ್ ಜೊತೆಯಾಟ ನೀಡಿದರು. ಸರ್ಕಾರ್ 25 ರನ್ ಸಿಡಿಸಿ ಔಟಾದರೆ, ತಮೀಮ್ 24 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ಶಕೀಹ್ ಅಲ್ ಹಸನ್ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು.

ಇದನ್ನೂ ಓದಿ: 2019-20: ಟೀಂ ಇಂಡಿಯಾ ತವರಿನ ಸರಣಿಯ ವೇಳಾಪಟ್ಟಿ ಪ್ರಕಟ!

ಮುಶ್ಫಿಕರ್ ರಹೀಮ್ 19 ರನ್ ಸಿಡಿಸಿ ನಿರ್ಗಮಿಸಿದರು. ಶಕೀಬ್ 64 ರನ್ ಕಾಣಿಕೆ ನೀಡಿದರು. ಮೊಹಮ್ಮದ್ ಮಿಥುನ್ 26, ಮೊಹಮ್ಮದುಲ್ಲಾ 20 ರನ್ ಸಿಡಿಸಿ ಔಟಾದರು. ಮ್ಯಾಟ್ ಹೆನ್ರಿ ದಾಳಿಗೆ ಕುಸಿದ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ 244 ರನ್‌ಗೆ ಆಲೌಟ್ ಆಯಿತು. ಮ್ಯಾಟ್ ಹೆನ್ರಿ 4 ವಿಕೆಟ್ ಕಬಳಿಸಿದರು.

click me!