ವಿಶ್ವಕಪ್ 2019: ಶ್ರೀಲಂಕಾ 201 ರನ್‌ಗೆ ಆಲೌಟ್- ಅಫ್ಘಾನ್‌ಗೆ 187 ರನ್ ಟಾರ್ಗೆಟ್!

By Web DeskFirst Published Jun 4, 2019, 8:46 PM IST
Highlights

ವಿಶ್ವಕಪ್ ಟೂರ್ನಿಗೆ 7ನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತತ್ತರಿಸಿದೆ. ಮಳೆಯಿಂದಾಗಿ 41 ಓವರ್‌ಗೆ ಸೀಮಿತವಾಗಿದ್ದ ಪಂದ್ಯದಲ್ಲಿ ಆಫ್ಘಾನಿಸ್ತಾನ ಅದ್ಬುತ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ 201 ರನ್‌ಗೆ ಆಲೌಟ್ ಆಗಿದೆ. 

ಕಾರ್ಡಿಫ್(ಜೂ.04): ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಬಲಿಷ್ಠ ತಂಡಗಳಿಗೆ ನಡುಕ ಹುಟ್ಟಿಸುತ್ತಿದೆ. ಇದೀಗ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅದ್ಬುತ ಬೌಲಿಂಗ್ ಮೂಲಕ ಲಂಕಾ ತಂಡವನ್ನು ರನ್‌ಗೆ ಆಲೌಟ್ ಮಾಡಿದೆ. ಮಳೆಯಿಂದಾಗಿ 41 ಓವರ್‌ಗೆ ಪಂದ್ಯವನ್ನು ಸೀಮಿತಗೊಳಿಸಲಾಗಿದೆ. ಕುಸಾಲ್ ಪರೇರಾ ಏಕಾಂಗಿ ಹೋರಾಟ ನೀಡಿದರೂ ಶ್ರೀಲಂಕಾ 36.5 ಓವರ್‌ಗಳಲ್ಲಿ 201 ರನ್‌ಗೆ ಆಲೌಟ್ ಆಗಿದೆ. ಡಕ್‌ವರ್ತ್ ನಿಯಮದನ್ವಯ ಅಫ್ಘಾನಿಸ್ತಾನಕ್ಕೆ 187 ರನ್ ಟಾರ್ಗೆಟ್ ನೀಡಲಾಗಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ದಿಮುತ್ ಕರುಣಾರತ್ನೆ ಹಾಗೂ ಕುಸಾಲ್ ಪರೇರಾ ಮೊದಲ ವಿಕೆಟ್‌ಗೆ 92 ರನ್ ಜೊತೆಯಾಟ ನೀಡಿದರು. ಕರುಣಾರತ್ನೆ 30 ರನ್ ಸಿಡಿಸಿ ಔಟಾದರು. ಇನ್ನು ಪರೇರಾ ಜೊತೆ ಸೇರಿದ ಲಹೀರು ತಿರುಮನ್ನೆ 25 ರನ್ ಸಿಡಿಸಿ ಔಟಾದರು.

ತಿರಿಮನ್ನೆ ವಿಕೆಟ್ ಪತನದೊಂದಿದೆ ಶ್ರೀಲಂಕಾ ಪೆವಿಲಿಯನ್ ಪರೇಡ್ ಆರಂಭಗೊಂಡಿತು. ಕುಸಾಲ್ ಪರೇರಾ ಹೋರಾಟ ಮುಂದುವರಿಸಿದರು. ಆದರೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಕುಸಾಲ್ ಮೆಂಡೀಸ್, ಆಂಜಲೋ ಮೆಂಡೀಸ್, ಧನಂಜಯ ಡಿಸಿಲ್ವ, ತಿಸರಾ ಪರೇರಾ, ಇಸುರು ಉದಾನ ಬಹುಬೇಗನೆ ಔಟಾದರು.

ಕುಸಾಲ್ ಪರೇರಾ 78 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಲಿಸಲಾಯಿತು. 33 ಓವರ್‌ಗಳಿಗೆ 8 ವಿಕೆಟ್ ಕಳೆದುಕೊಂಡ ಶ್ರೀಲಂಕಾ 182 ರನ್ ಸಿಡಿಸಿತು. ನಿರಂತರ ಮಳೆಯಿಂದಾಗಿಪಂದ್ಯವವನ್ನು 41 ಓವರ್‌ಗಳಿಗೆ ಸಿಮೀತಗೊಳಿಸಲಾಯಿತು. ಲಸಿತ್ ಮಲಿಂಗ ಹಾಗೂ ನುವಾನ್ ಪ್ರದೀಪ್ ವಿಕೆಟ್ ಪತನದೊಂದಿದೆ ಶ್ರೀಲಂಕಾ 36.5 ಓವರ್‍‌ಗಳಲ್ಲಿ 201 ರನ್‌ಗೆ ಆಲೌಟ್ ಆಯಿತು.ಡಕ್‌ವರ್ತ್ ನಿಯಮದನ್ವಯ ಅಫ್ಘಾನಿಸ್ತಾನ ಗೆಲುವಿಗೆ 187 ರನ್ ಟಾರ್ಗೆಟ್ ನೀಡಲಾಗಿದೆ. 

click me!