ಲಂಕಾ-ಅಫ್ಘಾನ್ ವಿಶ್ವಕಪ್ ಪಂದ್ಯ: ಮಳೆಯಿಂದ 41 ಓವರ್‌ಗೆ ಸೀಮಿತ!

By Web DeskFirst Published Jun 4, 2019, 8:27 PM IST
Highlights

ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ  ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಇದೀಗ ಪಂದ್ಯ ಮತ್ತೆ ಆರಂಭಗೊಂಡಿದೆ. ಆದರೆ ಓವರ್ ಕಡಿತಗೊಳಿಸಲಾಗಿದೆ.

ಕಾರ್ಡಿಫ್(ಜೂ.04): ಮಳೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದ್ದ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ ಲೀಗ್ ಪಂದ್ಯ ಮತ್ತೆ ಆರಂಭಗೊಂಡಿದೆ. ನಿರಂತರ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿದೆ. ಹೀಗಾಗಿ ಪಂದ್ಯವನ್ನು 41 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ. ಇನ್ನಿಂಗ್ಸ್ ಬ್ರೇಕ್ ಸಮಯವನ್ನು 10 ನಿಮಿಷಕ್ಕೆ ಇಳಿಸಲಾಗಿದೆ.

 

The covers are off in Cardiff – we're going to have some cricket!

41 overs per side with a 10-minute innings break. Play will resume at 4pm. pic.twitter.com/CE38vRNyef

— Cricket World Cup (@cricketworldcup)

 

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಬೆಂಬಲಿಸಲು ಇಂಗ್ಲೆಂಡ್ ತೆರಳಿದ ವಿಶೇಷ ಅತಿಥಿ!

ಸದ್ಯ ಶ್ರೀಲಂಕಾ 33 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಸಿಡಿಸಿದೆ. ಇದೀಗ ಶ್ರೀಲಂಕಾ ತಂಡಕ್ಕೆ 8 ಓವರ್ ಬ್ಯಾಟಿಂಗ್ ಮಾಡೋ ಅವಕಾಶವಿದೆ. ಆದರೆ ಲಂಕಾ ಬಳಿಕ 2 ವಿಕೆಟ್ ಮಾತ್ರ ಉಳಿದಿದೆ. ಇತ್ತ ಅದ್ಬುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಇದೀಗ ಲಂಕಾ ನೀಡೋ  ಗುರಿಯನ್ನು 41 ಓವರ್‌ನಲ್ಲಿ ಚೇಸ್ ಮಾಡಬೇಕಿದೆ.

click me!