ಭಾರತ ಸೇರಿ 9 ತಂಡಗಳನ್ನು ಎಚ್ಚರಿಸಿದ ಪಾಕ್ ನಾಯಕ!

By Web DeskFirst Published Jun 8, 2019, 1:14 PM IST
Highlights

ಮಳೆಯಿಂದ ಪಂದ್ಯ ರದ್ದಾದ ಬೆನ್ನಲ್ಲೇ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ನಾಯಕ ನೀಡಿದ ಎಚ್ಚರಿಕೆ ಏನು? ಇಲ್ಲಿದೆ ವಿವರ.

ಓವಲ್(ಜೂ.08): ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿದ ಪಾಕಿಸ್ತಾನ ತಂಡಕ್ಕೆ 3ನೇ ಪಂದ್ಯ ರದ್ದಾಗೋ ಮೂಲಕ ನಿರಾಸೆಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಂಡಿದೆ. ಈ ಪಂದ್ಯದ ಬಳಿಕ ನಾಯಕ ಸರ್ಫರಾಜ್ ಅಹಮ್ಮದ್ ವಿಶ್ವಕಪ್ ಟೂರ್ನಿಯಲ್ಲಿರುವ ಇತರ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: 1992ರ ಹಾದಿಯಲ್ಲೇ ಸಾಗುತ್ತಿದೆ ಪಾಕಿಸ್ತಾನ- ಮತ್ತೊಮ್ಮೆ ಕಪ್ ಗೆಲ್ಲುತ್ತಾ?

ಇತರ ಎಲ್ಲಾ ತಂಡಗಳಿಗೆ ಪಾಕಿಸ್ತಾನ ತಂಡದ ಭಯ ಕಾಡುತ್ತಿದೆ. ಪಾಕ್ ಎದುರಿಸಲು ಎಲ್ಲರೂ ಹೆದರುತ್ತಿದ್ದಾರೆ ಎಂದು ಸರ್ಫರಾಜ್ ಹೇಳಿದ್ದಾರೆ. ಮುಂದಿನ ಪಂದ್ಯ ಆಸ್ಟ್ರೇಲಿಯಾ ವಿರುದ್ದ ಆಡಲಿದ್ದೇವೆ. ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿ ಗೆಲುವಿನ ಲಯಕ್ಕೆ ಮರಳಿದ್ದೇವೆ. ಹೀಗಾಗಿ ಆಸಿಸ್ ತಂಡವನ್ನೂ ಮಣಿಸಲಿದ್ದೇವೆ ಎಂದು ಸರ್ಫರಾಜ್ ವಿಶ್ವಾಸ ವ್ಯಕ್ತಪಡಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಮಳೆಯಿಂದ ಪಾಕಿಸ್ತಾನ-ಶ್ರೀಲಂಕಾ ಪಂದ್ಯ ರದ್ದು!

ಶ್ರೀಲಂಕಾ ವಿರುದ್ದದ ಪಂದ್ಯ ರದ್ದಾಗಿರೋದು ಬೇಸರ ತಂದಿದೆ. ಆದರೆ ಇನ್ನುಳಿದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡೋ ಮೂಲಕ ಸೆಮಿಫೈನಲ್ ಪ್ರವೇಶಿಸಲಿದ್ದೇವೆ. ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಎಲ್ಲರೂ ಗೆಲುವಿಗಾಗಿ ತುಡಿಯುತ್ತಿದ್ದಾರೆ ಎಂದು ಸರ್ಫರಾಜ್ ಹೇಳಿದ್ದಾರೆ.

click me!