UKನಲ್ಲಿ ಭಾರತೀಯ ಹೈಕಮಿಶನ್ ಭೇಟಿಯಾದ ಟೀಂ ಇಂಡಿಯಾ!

Published : Jun 08, 2019, 12:55 PM IST
UKನಲ್ಲಿ ಭಾರತೀಯ ಹೈಕಮಿಶನ್ ಭೇಟಿಯಾದ ಟೀಂ ಇಂಡಿಯಾ!

ಸಾರಾಂಶ

ಓವಲ್‌ನಲ್ಲಿ ಸುರಿಯುತ್ತಿರುವ ಮಳೆಯಿಂದ ಟೀಂ ಇಂಡಿಯಾ ಅಭ್ಯಾಸ ರದ್ದಾಗಿದೆ. ಸಿಕ್ಕಿರೋ ಬಿಡುವಿನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಶನ್ ಭೇಟಿಯಾಗಿದೆ. 

ಲಂಡನ್(ಜೂ.08): ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯದ ಬಳಿಕ ಕೆಲ ದಿನಗಳ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ 2ನೇ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸಿದೆ. ಇದರ ನಡುವೆ ಟೀಂ ಇಂಡಿಯಾ ಲಂಡನ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ರಾಯಭಾರಿ ಕಚೇರಿಯಲ್ಲಿ ಮಹತ್ವದ ಕ್ಷಣಗಳನ್ನು ಕಳೆದಿದೆ.

ಇದನ್ನೂ ಓದಿ: 1992ರ ಹಾದಿಯಲ್ಲೇ ಸಾಗುತ್ತಿದೆ ಪಾಕಿಸ್ತಾನ- ಮತ್ತೊಮ್ಮೆ ಕಪ್ ಗೆಲ್ಲುತ್ತಾ?

ಟೀಂ ಇಂಡಿಯಾ ಕ್ರಿಕೆಟಿಗರು, ಕೋಚ್, ಸಪೋರ್ಟ್ ಸ್ಟಾಫ್ ಸೇರಿದಂತ ಸಂಪೂರ್ಣ ತಂಡ ಹೈಕಮಿಶನ್ ಭೇಟಿಯಾಗಿ ಮಾತುಕತೆ ನಡೆಸಿತು. ಬಿಸಿಸಿಐ ಟೀಂ ಇಂಡಿಯಾ ಭೇಟಿ ಫೋಟೋಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

 

 

ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲಿ ಹೀಗೆ ಮಿಂಚುತ್ತಾರೆ ಲೆಫ್ಟಿನೆಂಟ್ ಕರ್ನಲ್ ಎಂ. ಎಸ್ ಧೋನಿ!

ಸೌತ್ಆಫ್ರಿಕಾ ವಿರುದ್ದದ ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೀಗ ಜೂನ್ 9 ರಂದು ಆಸ್ಟ್ರೇಲಿಯಾ ವಿರುದ್ದದ ಪಂದ್ಯ ಆಡಲಿದೆ. ಓವಲ್‌ನಲ್ಲಿ ಮಳೆಯಾಗುತ್ತಿರುವುದರಿಂದ ಟೀಂ ಇಂಡಿಯಾ ಅಭ್ಯಾಸ ಕೂಡ ರದ್ದಾಗಿದೆ. ಇದೀಗ ಜೂನ್ 9 ರಂದು ಪಂದ್ಯಕ್ಕೆ ಮಳೆ ಅಡ್ಡಿಯಾಗೋ ಆತಂಕ ಎದುರಾಗಿದೆ.

 

 

PREV
click me!

Recommended Stories

ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಮೌನ ಮುರಿದ ಅಂಪೈರ್ ಧರ್ಮಸೇನಾ!
ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!