ಪಂದ್ಯದ 6ನೇ ನಿಮಿಷದಲ್ಲೇ ಕಾನ ಉರಾಟ ಪೆನಾಲ್ಟಿ ಕಾರ್ನರ್ ಮೂಲಕ ಬಾರಿಸಿದ ಗೋಲು ಜಪಾನ್ ಗೆಲುವನ್ನು ಖಚಿತಪಡಿಸಿತು. ಆ ಬಳಿಕ ಭಾರತ ತೀವ್ರ ಪೈಪೋಟಿ ನೀಡಿದರೂ ಹೊರತಾಗಿಯೂ ಯಾವುದೇ ಗೋಲು ಬಾರಿಸಲಾಗಲಿಲ್ಲ. ಒಟ್ಟು 9 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನೂ ಪಡೆದರೂ, ಭಾರತ ಬಳಸಿಕೊಳ್ಳಲಿಲ್ಲ.
ರಾಂಚಿ(ಜ.20): ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದಿದ್ದ ಭಾರತ ಮಹಿಳಾ ಹಾಕಿ ತಂಡ, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ವಿಫಲವಾಗಿದೆ. ಶುಕ್ರವಾರ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ 3-4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜಪಾನ್ ವಿರುದ್ಧ 0-1 ಗೋಲುಗಳಿಂದ ಸೋಲುವುದರೊಂದಿಗೆ ಒಲಿಂಪಿಕ್ಸ್ ಕನಸು ಭಗ್ನಗೊಂಡಿತು. ಒಲಿಂಪಿಕ್ಸ್ ಟಿಕೆಟ್ ಸಿಗಬೇಕಿದ್ದರೆ ಟೂರ್ನಿಯಲ್ಲಿ ಅಗ್ರ-3 ಸ್ಥಾನ ಪಡೆಯಬೇಕಿತ್ತು.
ಪಂದ್ಯದ 6ನೇ ನಿಮಿಷದಲ್ಲೇ ಕಾನ ಉರಾಟ ಪೆನಾಲ್ಟಿ ಕಾರ್ನರ್ ಮೂಲಕ ಬಾರಿಸಿದ ಗೋಲು ಜಪಾನ್ ಗೆಲುವನ್ನು ಖಚಿತಪಡಿಸಿತು. ಆ ಬಳಿಕ ಭಾರತ ತೀವ್ರ ಪೈಪೋಟಿ ನೀಡಿದರೂ ಹೊರತಾಗಿಯೂ ಯಾವುದೇ ಗೋಲು ಬಾರಿಸಲಾಗಲಿಲ್ಲ. ಒಟ್ಟು 9 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನೂ ಪಡೆದರೂ, ಭಾರತ ಬಳಸಿಕೊಳ್ಳಲಿಲ್ಲ. ಸೋಲಿನ ಆಘಾತಕ್ಕೊಳಗಾದ ಭಾರತದ ಆಟಗಾರ್ತಿಯರು ಕಣ್ಣೀರಿಡುತ್ತಲೇ ಮೈದಾನದಿಂದ ಹೊರನಡೆದರು.
Australian Open 2024: ನೋವಾಕ್ ಜೋಕೋವಿಚ್ ಪ್ರಿ ಕ್ವಾರ್ಟರ್‌ಗೆ ಎಂಟ್ರಿ
ಇಂಡಿಯಾ ಓಪನ್‌ನಲ್ಲಿ ಸೆಮೀಸ್‌ಗೇರಿದ ಪ್ರಣಯ್
ನವದೆಹಲಿ: ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಟೆನಿಸಿಗ ಎಚ್.ಎಸ್.ಪ್ರಣಯ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್, ಶುಕ್ರವಾರ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ವ್ಯಾಂಗ್ ತ್ಸು ವೀ ವಿರುದ್ಧ 21-11, 17-21, 21-18 ಗೇಮ್‌ಗಳಲ್ಲಿ ರೋಚಕ ಜಯಭೇರಿ ಬಾರಿಸಿದರು. ಇದರೊಂದಿಗೆ ವ್ಯಾಂಗ್ ವಿರುದ್ಧದ ಗೆಲುವು-ಸೋಲಿನ ದಾಖಲೆಯನ್ನು ಪ್ರಣಯ್ 6-3ಕ್ಕೆ ಏರಿಸಿದರು. ಕಳೆದ ವರ್ಷ ಮಲೇಷ್ಯಾ ಮಾಸ್ಟರ್ಸ್ ಗೆದ್ದಿದ್ದ ಪ್ರಣಯ್ ಈ ವರ್ಷವನ್ನು ಪ್ರಶಸ್ತಿಯೊಂದಿಗೆ ಆರಂಭಿಸುವ ನಿರೀಕ್ಷೆಯಲ್ಲಿದ್ದು, ಸೆಮಿಫೈನಲ್‌ನಲ್ಲಿ ಶನಿವಾರ ಶಿಯು ಖಿ ವಿರುದ್ಧ ಸೆಣಸಾಡಲಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಕುಲ್ದೀಪ್ ಯಾದವ್ ಬಿಡಿಸಿದ ಶ್ರೀ ರಾಮನ ಚಿತ್ರ ವೈರಲ್..!
ಎಸ್‌ಎಫ್‌ಎ ಕೂಟ: 4ನೇ ದಿನ 1400 ಕ್ರೀಡಾಳುಗಳು ಭಾಗಿ
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ 4ನೇ ದಿನ ಬ್ಯಾಡ್ಮಿಂಟನ್, ಸ್ಕೇಟಿಂಗ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಟೆನಿಸ್, ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳ ಸ್ಪರ್ಧೆಗಳು ನಡೆದಿದ್ದು, ಸುಮಾರು 1400 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಡುಕೋಣೆ ದ್ರಾವಿಡ್ ಕ್ರೀಡಾ ಅಕಾಡೆಮಿಯಲ್ಲಿ ನಡೆದ ಸ್ಫರ್ಧೆಗಳಲ್ಲಿ ಅಕಾಡೆಮಿ ಸಂಸ್ಥಾಪಕ ಪ್ರಕಾಶ್ ಪಡುಕೋಣೆ ಉಪಸ್ಥಿತರಿದ್ದು, ಕ್ರೀಡಾಳುಗಳನ್ನು ಹುರಿದುಂಬಿಸಿದರು. 5ನೇ ದಿನವಾದ ಶನಿವಾರ ಅಂಡರ್-14, 16, 18 ವಿಭಾಗದ ಪುಟ್ಬಾಲ್, ವಾಲಿಬಾಲ್, ಟೆನಿಸ್, ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್ ಸ್ಪರ್ಧೆಗಳು ನಡೆಯಲಿವೆ.