ಗುರುವಾರದ ಸೆಮೀಸ್ ಪಂದ್ಯ ನಿಗದಿತ ಅವಧಿ ಮುಕ್ತಾಯಕ್ಕೆ 2-2 ಗೋಲುಗಳಿಂದ ಸಮಬಲಗೊಂಡಿತು. ಬಳಿಕ ಶೂಟೌಟ್‌ನ ಮೊದಲ 5 ಪ್ರಯತ್ನಗಳಲ್ಲಿ 3-3 ಟೈ ಆದ ಕಾರಣ ಸಡನ್ ಡೆತ್ ಮೊರೆ ಹೋಗಲಾಯಿತು. 2ನೇ ಪ್ರಯತ್ನದಲ್ಲಿ ಗೋಲು ಬಾರಿಸಿದ ಜರ್ಮನಿ ಫೈನಲ್ ಪ್ರವೇಶಿಸಿತು.
ರಾಂಚಿ: ಒಲಿಂಪಿಕ್ಸ್ ಅರ್ಹತಾ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಜರ್ಮನಿ ವಿರುದ್ಧದ ಸೆಮಿಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನ ಸಡನ್ ಡೆತ್‌ನಲ್ಲಿ ಸೋಲನುಭವಿಸಿದೆ. ಫೈನಲ್‌ಗೇರಿದ ಜರ್ಮನಿ ಒಲಿಂಪಿಕ್ಸ್‌ಗೂ ಅರ್ಹತೆ ಪಡೆಯಿತು. ಭಾರತ 3ನೇ ಸ್ಥಾನಕ್ಕಾಗಿ ಶುಕ್ರವಾರ ಜಪಾನ್ ವಿರುದ್ಧ ಆಡಲಿದ್ದು, ಗೆದ್ದರೆ ಒಲಿಂಪಿಕ್ಸ್ ಅರ್ಹತೆ ಸಿಗಲಿದ್ದು, ಸೋತರೆ ಒಲಿಂಪಿಕ್ಸ್ ಕನಸು ಭಗ್ನಗೊಳ್ಳಲಿದೆ.
ಗುರುವಾರದ ಸೆಮೀಸ್ ಪಂದ್ಯ ನಿಗದಿತ ಅವಧಿ ಮುಕ್ತಾಯಕ್ಕೆ 2-2 ಗೋಲುಗಳಿಂದ ಸಮಬಲಗೊಂಡಿತು. ಬಳಿಕ ಶೂಟೌಟ್‌ನ ಮೊದಲ 5 ಪ್ರಯತ್ನಗಳಲ್ಲಿ 3-3 ಟೈ ಆದ ಕಾರಣ ಸಡನ್ ಡೆತ್ ಮೊರೆ ಹೋಗಲಾಯಿತು. 2ನೇ ಪ್ರಯತ್ನದಲ್ಲಿ ಗೋಲು ಬಾರಿಸಿದ ಜರ್ಮನಿ ಫೈನಲ್ ಪ್ರವೇಶಿಸಿತು.
ಇಂದಿನಿಂದ ಖೇಲೋ ಇಂಡಿಯಾ ಯೂತ್ ಗೇಮ್ಸ್
ಚೆನೈ: 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ತಮಿಳುನಾಡಿನಲ್ಲಿ ಶುಕ್ರವಾರ ಚಾಲನೆ ಸಿಗಲಿದೆ. ಚೆನೈ, ಕೊಯಂಬತ್ತೂರ್, ಮಧುರೈ ಹಾಗೂ ತಿರುಚ್ಚಿಯಲ್ಲಿ ಜ.31ರ ವರೆಗೆ ಕೂಟ ಆಯೋಜನೆಗೊಳ್ಳಲಿದ್ದು, 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 5500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.
ಬೆಂಗ್ಳೂರು ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಟೂರ್ನಿಗೆ ಚಾಲನೆ
ಕರ್ನಾಟಕದಿಂದ 230 ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಟೆನಿಸ್, ಫುಟ್ಬಾಲ್, ಮಲ್ಲಕಂಬ, ಈಜು, ಹಾಕಿ ಸೇರಿದಂತೆ 26 ಕ್ರೀಡೆಗಳು ಈ ಬಾರಿ ಕೂಟದಲ್ಲಿದ್ದು, ಸ್ಕ್ಯ್ವಾಶ್ ಕೂಡಾ ಹೊಸದಾಗಿ ಸೇರ್ಪಡೆಗೊಂಡಿದೆ. 2021ರಲ್ಲಿ 3ನೇ ಸ್ಥಾನ ಪಡೆದಿದ್ದ ಕರ್ನಾಟಕ ಈ ಬಾರಿ ಅತ್ಯುತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದೆ.
ಎಎಫ್‌ಸಿ ಫುಟ್ಬಾಲ್: ಸತತ 2ನೇ ಪಂದ್ಯ ಸೋತ ಭಾರತ
ಅಲ್ ರಯ್ಯಾನ್(ಕತಾರ್): ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಸತತ 2ನೇ ಪಂದ್ಯದಲ್ಲೂ ಸೋಲನುಭವಿಸಿದೆ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿ ವೀರೋಚಿತ ಸೋಲು ಕಂಡಿದ್ದ ಭಾರತಕ್ಕೆ ಗುರುವಾರ ಉಜ್ಬೇಕಿಸ್ತಾನ ವಿರುದ್ಧ 0-3 ಹೀನಾಯ ಸೋಲು ಎದುರಾಯಿತು. ಇದರೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 102ನೇ ಸ್ಥಾನದಲ್ಲಿರುವ ಭಾರತ ‘ಬಿ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲೇ ಬಾಕಿಯಾಗಿದೆ. ಜ.23ರಂದು ಗುಂಪು ಹಂತದ ಕೊನೆ ಪಂದ್ಯದಲ್ಲಿ ಭಾರತ ತಂಡ ಸಿರಿಯಾ ವಿರುದ್ಧ ಸೆಣಸಾಡಲಿದ್ದು, ದೊಡ್ಡ ಅಂತರದಲ್ಲಿ ಗೆದ್ದರೆ ಮಾತ್ರ ಪ್ರಿ ಕ್ವಾರ್ಟರ್‌ಗೇರುವ ಸಾಧ್ಯತೆಯಿದೆ.
Super Over Mind Game: ರೋಹಿತ್ ಶರ್ಮಾರದ್ದು ಅಶ್ವಿನ್ ಲೆವೆಲ್ ಥಿಂಕಿಂಗ್ ಎಂದ ರಾಹುಲ್ ದ್ರಾವಿಡ್
ಸಾತ್ವಿಕ್-ಚಿರಾಗ್ ಶೆಟ್ಟಿ, ಪ್ರಣಯ್ ಕ್ವಾರ್ಟರ್‌ಗೆ
ನವದೆಹಲಿ: ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸಾತ್ವಿಕ್-ಚಿರಾಗ್ ಶೆಟ್ಟಿ, ಎಚ್ ಎಸ್ ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಡಬಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಅವರು ಚೈನೀಸ್ ತೈಪೆಯ ಲೂ ಚಿಂಗ್ ಯೂ-ಯಾಂಗ್ ಪೊ ಹಾನ್ ಜೋಡಿಯನ್ನು 21-14, 21-15ರಿಂದ ಸೋಲಿಸಿದರು. ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್ ಎಸ್ ಪ್ರಣಯ್ ಅವರು ಭಾರತದವರೇ ಆದ ಪ್ರಿಯಾನ್ಶು ರಾಜಾವತ್ ಅವರನ್ನು 20-22, 21-14, 21-14 ರಿಂದ ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಉಳಿದ ಎಲ್ಲಾ ವಿಭಾಗಗಳಲ್ಲೂ ಭಾರತೀಯರ ಅಭಿಯಾನ ಈಗಾಗಲೇ ಕೊನೆಗೊಂಡಿದೆ.