Junior Hockey World Cup: ಕಿರಿಯರ ಹಾಕಿ ವಿಶ್ವಕಪ್‌ಗೆ ಈ ಬಾರಿ ಒಡಿಶಾ ಆತಿಥ್ಯ

By Suvarna News  |  First Published Sep 24, 2021, 11:32 AM IST

* ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಗೆ ಒಡಿಶಾ(Odisha) ಆತಿಥ್ಯ

* ಮುಂಬರುವ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಡೆಯಲಿದೆ ಪಂದ್ಯಗಳು

* ಟೂರ್ನಿಯ ಲೋಗೋ-ಟ್ರೋಫಿ ಅನಾವರಣ ಮಾಡಿದ ನವೀನ್ ಪಟ್ನಾಯಕ್


ಭುವನೇಶ್ವರ(ಸೆ.24): ಇದೇ ನವೆಂಬರ್ 24ರಿಂದ ಡಿಸೆಂಬರ್ 5ರ ತನಕ ನಡೆಯಲಿರುವ ಪುರುಷರ ಜೂನಿಯರ್‌ ಹಾಕಿ ವಿಶ್ವಕಪ್‌ಗೆ(Junior Hockey World Cup) ಒಡಿಶಾ ಆತಿಥ್ಯ ವಹಿಸಲಿದೆ. ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌(Naveen Patnaik) ಗುರುವಾರ ತಿಳಿಸಿದ್ದಾರೆ.

ಜೂನಿಯರ್‌ ವಿಶ್ವಕಪ್‌ಗೆ ನೆರವು ನೀಡುವಂತೆ ಹಾಕಿ ಇಂಡಿಯಾ(Hockey India) ಇತ್ತೀಚೆಗೆ ಕೇಳಿಕೊಂಡಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ, ಕೊರೋನಾ(Coronavirus)ದಂತಹ ಕಾಲದಲ್ಲಿ ಇಷ್ಟು ದೊಡ್ಡ ಪಂದ್ಯಾವಳಿಗೆ ಸಿದ್ಧತೆ ನಡೆಸುವುದು ಸವಾಲಿನ ಕೆಲಸ. ದೇಶದ ಪ್ರತಿಷ್ಠೆಯ ವಿಷಯವಾಗಿರುವ ಕಾರಣ ಇದಕ್ಕೆ ಸಮ್ಮತಿ ನೀಡಿಲಾಯಿತು ಎಂದಿದ್ದಾರೆ.

The FIH Odisha Hockey Men’s Junior World Cup Bhubaneswar 2021 is all set to take place between 24th November to 5th December 2021 and is going to be held at Bhubaneswar, Odisha. 👏🏑 pic.twitter.com/MNa302kpO4

— Hockey India (@TheHockeyIndia)

Tap to resize

Latest Videos

undefined

ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ಲೋಗೋ ಹಾಗೂ ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಒಡಿಶಾ(Odisha) ಮುಖ್ಯಮಂತ್ರಿ ನವೀನ್ ಪಟ್ನಾಯಕ್‌, ತವರಿನ ಅನುಕೂಲವನ್ನು ಬಳಸಿಕೊಂಡು ನಮ್ಮ ತಂಡವು ಮತ್ತೊಮ್ಮೆ ಚಾಂಪಿಯನ್‌ ಅಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

Hon'ble CM Sri unveiled the trophy and the logo of the Junior Hockey World Cup today at . and , the ❤️ story continues! pic.twitter.com/QmK4nhGGQ7

— Odisha Sports (@sports_odisha)

ಒಡಿಶಾ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಜೂನಿಯರ್ ಹಾಕಿ ವಿಶ್ವಕಪ್ ಆಯೋಜಿಸಲು ಒಲವು ತೋರಿದ್ದವು. ಇನ್ನು 2016ರಲ್ಲಿ ನಡೆದ ಕಳೆದ ಆವೃತ್ತಿಯರ ಕಿರಿಯರ ಹಾಕಿ ವಿಶ್ವಕಪ್ ಟೂರ್ನಿಗೆ ಲಖನೌ ಆತಿಥ್ಯವನ್ನು ವಹಿಸಿತ್ತು. ಲಖನೌದಲ್ಲಿ ನಡೆದ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ

ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತ, ಕೊರಿಯಾ, ಮಲೇಷಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಬೆಲ್ಜಿಯಂ, ಇಂಗ್ಲೆಂಡ್‌, ಫ್ರಾನ್ಸ್‌, ಜರ್ಮನಿ, ನೆದರ್‌ಲ್ಯಾಂಡ್‌, ಸ್ಪೇನ್‌, ಯುಎಸ್‌ಎ, ಕೆನಡಾ, ಚಿಲಿ ಹಾಗೂ ಅರ್ಜೀಂಟೀನಾ ತಂಡಗಳು ಪಾಲ್ಗೊಳ್ಳುತ್ತಿವೆ. ಆಸ್ಟ್ರೇಲಿಯಾವು ಕೋವಿಡ್‌ ಭೀತಿಯಿಂದ ಪ್ರವಾಸ ನಿರ್ಬಂಧ ವಿಧಿಸಿರುವುದರಿಂದ ಈ ಕ್ರೀಡಾಕೂಟದಿಂದ ಹಿಂದೆ ಸರಿದಿದೆ.

ಭಾರತ ಹಾಕಿಗೆ ಒಡಿಶಾ ಸರ್ಕಾರವೇ ಪ್ರಯೋಜಕತ್ವ ವಹಿಸಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್‌(Tokyo Olympics)ನಲ್ಲಿ ಹಾಕಿ ತಂಡದ ಅದ್ಭುತ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇನ್ನು ಒಡಿಶಾವು 2023ರ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಆತಿಥ್ಯದ ಹಕ್ಕು ಪಡೆದುಕೊಂಡಿದ್ದು, ಭುಬನೇಶ್ವರ್ ಹಾಗೂ ರೂರ್ಕೆಲಾದಲ್ಲಿ ಪಂದ್ಯಾವಳಿಗಳು ನಡೆಯಲಿವೆ.

click me!