* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಕೋಚ್ ಅಂಕಿತಾ ಸುರೇಶ್ ಹಾಗೂ ಅಂಪೈರ್ ರಘು ಪ್ರಸಾದ್‌ಗೆ ಸನ್ಮಾನ
* ಹಾಕಿ ಕರ್ನಾಟಕದ ವತಿಯಿಂದ ಸಾಧಕರಿಗೆ ಸನ್ಮಾನ
* ಹಾಕಿ ಕರ್ನಾಟಕದ ವತಿಯಿಂದ ಇಬ್ಬರಿಗೂ ತಲಾ 1 ಲಕ್ಷ ರು. ನಗದು ಬಹುಮಾನ
ಬೆಂಗಳೂರು(ಸೆ.16): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿರುವ ಕರ್ನಾಟಕದ ಅಂಕಿತಾ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ರಾಜ್ಯದ ರಘು ಪ್ರಸಾದ್ ಅವರನ್ನು ಹಾಕಿ ಕರ್ನಾಟಕದ ವತಿಯಿಂದ ಸನ್ಮಾನ ಮಾಡಲಾಯಿತು.
ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಒಲಿಂಪಿಕ್ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಹಾಕಿ ಕರ್ನಾಟಕದ ವತಿಯಿಂದ ಇಬ್ಬರಿಗೂ ತಲಾ 1 ಲಕ್ಷ ರು. ನಗದು ಬಹುಮಾನ ನೀಡಿ ಗೌರವಿಸಲಾಯಿತು.
undefined
ಕಾಮನ್‌ವೆಲ್ತ್ ಗೇಮ್ಸ್ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ
ಇದೇ ವೇಳೆ ಹಿರಿಯ ಹಾಕಿ ಆಟಗಾರ ಎಸ್.ವಿ.ಸುನಿಲ್ ಹಾಗೂ ಪುರುಷರ ಕಿರಿಯರ ತಂಡದ ಕೋಚ್ ಬಿ.ಜೆ.ಕಾರ್ಯಪ್ಪ ಅವರನ್ನು ಸನ್ಮಾನ ಮಾಡಲಾಯಿತು. ಇಬ್ಬರಿಗೂ ಕ್ರಮವಾಗಿ 2 ಲಕ್ಷ ರು. ಹಾಗೂ 1 ಲಕ್ಷ ರು. ನಗದು ಬಹುಮಾನ ಹಸ್ತಾಂತರಿಸಲಾಯಿತು. ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಕ್ರೀಡಾ ಸಾಧಕರನ್ನು ಸನ್ಮಾನಿಸಿದರು.
ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಗೋವಿಂದರಾಜು, ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆ ಆಯುಕ್ತ ವೆಂಕಟೇಶ್ ಕುಮಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.