ಕಾಮನ್‌ವೆಲ್ತ್ ಗೇಮ್ಸ್‌ 2022: ಭಾರತ ಹಾಕಿ ತಂಡದ ಸ್ಪರ್ಧೆ ಅನುಮಾನ

By Suvarna News  |  First Published Sep 4, 2021, 1:52 PM IST

* 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡ ಪಾಲ್ಗೊಳ್ಳುವುದು ಅನುಮಾನ

* ಬರ್ಮಿಂಗ್‌ ಹ್ಯಾಮ್‌ನಲ್ಲಿ 2022 ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟ ನಡೆಯಲಿದೆ.

* ಬರ್ಮಿಂಗ್‌ ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಆರ್ಚರಿ-ಶೂಟಿಂಗ್ ಸ್ಪರ್ಧೆಗಿಲ್ಲ ಅವಕಾಶ


ನವದೆಹಲಿ(ಸೆ.04): 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಹಾಕಿ ತಂಡಗಳು ಸ್ಪರ್ಧಿಸುವುದು ಅನುಮಾನ ಎಂದು ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಅಧ್ಯಕ್ಷ ನರೇಂದ್ರ ಬಾತ್ರಾ ತಿಳಿಸಿದ್ದಾರೆ. 

2022ರ ಏಷ್ಯನ್‌ ಗೇಮ್ಸ್‌ನ ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿರುವ ಕಾರಣ, ಅಲ್ಲಿ ಉತ್ತಮ ಪ್ರದರ್ಶನ ತೋರಿ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉದ್ದೇಶದಿಂದ ಈ ಚಿಂತನೆ ನಡೆಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಮುಖ್ಯಸ್ಥರೂ ಅಗಿರುವ ಬಾತ್ರಾ ಹೇಳಿದ್ದಾರೆ. 

Latest Videos

undefined

ಕಾಮನ್‌ವೆಲ್ತ್‌ ಗೇಮ್ಸ್‌ ಬರ್ಮಿಂಗ್ಯಾಮ್‌ನಲ್ಲಿ 2022ರ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿದ್ದು, ಏಷ್ಯನ್‌ ಗೇಮ್ಸ್‌ ಚೀನಾದ ಹಾಂಗ್‌ಝೊಯುನಲ್ಲಿ ಸೆಪ್ಟೆಂಬರ್ 10ರಿಂದ ಆರಂಭವಾಗಲಿದೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಬರೋಬ್ಬರಿ 41 ವರ್ಷಗಳ ಬಳಿಕ ಕಂಚಿನ ಪದಕ ಜಯಿಸಿತ್ತು. ಇನ್ನು ರಾಣಿ ರಾಂಪಾಲ್‌ ನೇತೃತ್ವದ ಭಾರತೀಯ ಮಹಿಳಾ ಹಾಕಿ ತಂಡವು ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿತ್ತಾದರೂ ಪದಕ ಗೆಲ್ಲಲು ವಿಫಲವಾಗಿತ್ತು.

ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ 2018ರಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 216 ಮಂದಿ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ ಪದಕ ಸಹಿತ ಒಟ್ಟು 66 ಪದಕಗಳನ್ನು ಗೆಲ್ಲುವುದರೊಂದಿಗೆ ಕ್ರೀಡಾಕೂಟದಲ್ಲಿ ಗರಿಷ್ಠ ಪದಕಗಳನ್ನು ಗೆದ್ದ ದೇಶಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದಿತ್ತು. ಆದರೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಶೂಟಿಂಗ್ ಹಾಗೂ ಆರ್ಚರಿ ಸ್ಪರ್ಧೆಯನ್ನು ಕೈಬಿಡಲಾಗಿದ್ದು, ಇದೀಗ ಹಾಕಿ ತಂಡ ಕೂಡಾ ಕ್ರೀಡಾಕೂಟದಿಂದ ಹಿಂದೆ ಸರಿಯುವ ಸಾಧ್ಯತೆ ಬಹುತೇಕ ದಟ್ಟವಾಗಿದ್ದರಿಂದ ಭಾರತೀಯ ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ ಸಂಖ್ಯೆ ಕಡಿಮೆ ಆಗಲಿದೆ.  

ಏಷ್ಯನ್‌ ವಾಲಿಬಾಲ್‌: ಭಾರತಕ್ಕೆ ರಾಜ್ಯದ ಕಾರ್ತಿಕ್‌ ನಾಯಕ

ಬೆಂಗಳೂರು: ಸೆಪ್ಟೆಂಬರ್ 12ರಿಂದ 19ರವರೆಗೂ ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಏಷ್ಯನ್‌ ಪುರುಷರ ವಾಲಿಬಾಲ್‌ ಚಾಂಪಿಯನ್‌ಶಿಪ್‌ಗೆ ಭಾರತದ ತಂಡ ಪ್ರಕಟವಾಗಿದ್ದು, ಕರ್ನಾಟಕದ ಕಾರ್ತಿಕ್‌ ಅಶೋಕ್‌ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮಿಡ್ಲ್‌ ಬ್ಲಾಕರ್‌ ಆಗಿರುವ ಕಾರ್ತಿಕ್‌ ನಾಯಕರಾಗಿ ಆಯ್ಕೆಯಾಗಿದ್ದಕ್ಕೆ ಕರ್ನಾಟಕ ವಾಲಿಬಾಲ್‌ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.

click me!