
ಸಲಾಲ್ಹ(ಜೂ.02): ಕಿರಿಯರ ಹಾಕಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಪುರುಷರ ತಂಡ 4ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗುರುವಾರ ರಾತ್ರಿ ನಡೆದ ರೋಚಕ ಫೈನಲ್ನಲ್ಲಿ ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ 2-1 ಗೋಲುಗಳ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 4ನೇ ಬಾರಿ ಪ್ರಶಸ್ತಿ ಗೆಲ್ಲುವ ಪಾಕ್ ತಂಡದ ಕನಸು ಭಗ್ನಗೊಂಡಿತು.
13ನೇ ನಿಮಿಷದಲ್ಲಿ ಅಂಗದ್ಬಿರ್ ಸಿಂಗ್ ಬಾರಿಸಿದ ಅಕರ್ಷಕ ಗೋಲು ಭಾರತಕ್ಕೆ ಮುನ್ನಡೆ ಒದಗಿಸಿದರು. ಅರೈಜಿತ್ ಸಿಂಗ್ 20ನೇ ನಿಮಿಷದಲ್ಲಿ ಹೊಡೆದ ಗೋಲು ಭಾರತದ ಮುನ್ನಡೆ ಹೆಚ್ಚಿಸಿತಲ್ಲದೇ ಪಾಕ್ ಮತ್ತಷ್ಟುಒತ್ತಡದಲ್ಲಿ ಆಡುವಂತೆ ಮಾಡಿತು. ಆದರೆ 38ನೇ ನಿಮಿಷದಲ್ಲಿ ಪಾಕ್‌ನ ಅಲಿ ಬಶರತ್ ಗೋಲು ಬಾರಿಸಿದರೂ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಭಾರತ ಈ ಮೊದಲು 2004, 2008, 2015ರಲ್ಲಿ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ 1987, 1992 ಹಾಗೂ 1996ರಲ್ಲಿ ಚಾಂಪಿಯನ್ ಆಗಿತ್ತು.
ಹಾಕಿ ಇಂಡಿಯಾವು ಚಾಂಪಿಯನ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 2 ಲಕ್ಷ ರುಪಾಯಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ತಲಾ ಒಂದು ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಲಾಗಿದೆ.
ಪ್ರೊ ಲೀಗ್ ಹಾಕಿ: ಇಂದು ಭಾರತ-ಬೆಲ್ಜಿಯಂ ಫೈಟ್
ಲಂಡನ್: 2022-23ರ ಆವೃತ್ತಿಯ ಪುರುಷರ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಸತತ 2 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿರುವ ಭಾರತಕ್ಕೆ ಶುಕ್ರವಾರ ಮತ್ತೆ ಬೆಲ್ಜಿಯಂ ಸವಾಲು ಎದುರಾಗಲಿದೆ. ಕಳೆದ ವಾರ ಲಂಡನ್ನಲ್ಲೇ ನಡೆದಿದ್ದ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತ 1-2 ಗೋಲುಗಳಿಂದ ಸೋತಿತ್ತು.
Wrestlers Protest: 'ಕುಸ್ತಿಪಟುಗಳ ಪ್ರತಿಭಟನೆಯನ್ನು ಕೇಂದ್ರ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ'
ಕಳೆದ ವರ್ಷ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಸದ್ಯ 10 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 19 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿದೆ. ಬೆಲ್ಜಿಯಂ 7ನೇ ಸ್ಥಾನದಲ್ಲಿದೆ.
ಪಂದ್ಯ: ಸಂಜೆ 7.10ಕ್ಕೆ
ಇಂಡಿಯಾ ಜಿಪಿ ಟಿಕೆಟ್ 800ರಿಂದ 1.5 ಲಕ್ಷ ರುಪಾಯಿ
ನವದೆಹಲಿ: ಭಾರತದಲ್ಲಿ ಚೊಚ್ಚಲ ಬಾರಿ ನಡೆಯಲಿರುವ ಮೋಟೋ ಜಿಪಿ ಬೈಕ್ ರೇಸ್‌ಗೆ ಟಿಕೆಟ್ ಬೆಲೆ ಕನಿಷ್ಠ 800 ರುಪಾಯಿನಿಂದ ಗರಿಷ್ಠ 1.5 ಲಕ್ಷ ರುಪಾಯಿ ವರೆಗೂ ನಿಗಿದಿಪಡಿಸಲಾಗಿದೆ. ಸೆಪ್ಟೆಂಬರ್ 22ರಿಂದ 24ರ ವರೆಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ರೇಸ್ ನಡೆಯಲಿದ್ದು, ಶೀಘ್ರದಲ್ಲೇ ಟಿಕೆಟ್ ಮಾರಾಟ ಆರಂಭಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಇದು 2011ರಲ್ಲಿ ನಡೆದಿದ್ದ ಫಾರ್ಮುಲಾ 1 ಇಂಡಿಯನ್ ಗ್ರ್ಯಾನ್‌ಪ್ರಿ ಬಳಿಕ ಭಾರತದಲ್ಲಿ ನಡೆಯಲಿರುವ ಅತಿದೊಡ್ಡ ರೇಸ್. ಹೀಗಾಗಿ ಹೆಚ್ಚು ಜನರು ವೀಕ್ಷಿಸುವಂತಾಗಲು ಕಡಿಮೆ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.