ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ಎಸ್‌ ವಿ ಸುನಿಲ್‌ ಗುಡ್‌ಬೈ

By Suvarna News  |  First Published Oct 2, 2021, 11:18 AM IST

* ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಎಸ್‌ ವಿ ಸುನಿಲ್

* 14 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಪರ ಆಡಿದ ಸುನಿಲ್‌

* 2007ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಸುನಿಲ್


ಬೆಂಗಳೂರು(ಅ.02): ಭಾರತದ ಹಿರಿಯ ಹಾಕಿ ಆಟಗಾರ, ಕನ್ನಡಿಗ ಎಸ್‌.ವಿ.ಸುನಿಲ್‌ (SV Sunil) ಶುಕ್ರವಾರ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದರು. 14 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಪರ ಆಡಿದ ಸುನಿಲ್‌ರನ್ನು ಹಾಕಿ ಇಂಡಿಯಾ (Hockey India) ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿರಲಿಲ್ಲ.

2007ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಸುನಿಲ್‌, 264 ಅಂ.ರಾ.ಪಂದ್ಯಗಳಲ್ಲಿ 72 ಗೋಲುಗಳನ್ನು ಬಾರಿಸಿದ್ದಾರೆ. 2012, 2016ರ ಒಲಿಂಪಿಕ್ಸ್‌ಗಳಲ್ಲಿ ಆಡಿದ್ದ ಸುನಿಲ್‌, 2011ರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಿನ್ನ, 2012ರಲ್ಲಿ ಇದೇ ಟೂರ್ನಿಯಲ್ಲಿ ಬೆಳ್ಳಿ ಗೆದ್ದ ಭಾರತ ತಂಡದಲ್ಲಿದ್ದರು. 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ, 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚು, 2017ರ ಏಷ್ಯಾ ಕಪ್‌ನಲ್ಲಿ ಚಿನ್ನ, 2016 ಹಾಗೂ 2018ರ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಐತಿಹಾಸಿಕ ಬೆಳ್ಳಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಸುನಿಲ್‌ 2017ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

Making A Statement… pic.twitter.com/eg9Al6J5ut

— SV Sunil | ಎಸ್.ವಿ. ಸುನಿಲ್ (@SVSunil24)

2️⃣6️⃣4️⃣Caps
7️⃣2️⃣Goals
🏅 Arjuna Award Winner

The Indian Hockey Team Forward has decided to walk away from 11a side Hockey after an illustrious career. 👏

SV Sunil, Thanks for your illustrious contribution to Indian Hockey. 🙌 pic.twitter.com/nBuj8A75Wg

— Hockey India (@TheHockeyIndia)

Tap to resize

Latest Videos

undefined

ಈ ಮೊದಲು ಗುರುವಾರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತ ಹಾಕಿ ತಂಡ ಐತಿಹಾಸಿಕ ಕಂಚು ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಆಟಗಾರರಾದ ರೂಪಿಂದರ್‌ ಪಾಲ್‌ ಸಿಂಗ್‌ ಹಾಗೂ ಬೀರೇಂದ್ರ ಲಾಕ್ರಾ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದರು. ಯುವಕರಿಗೆ ಆದ್ಯತೆ ನೀಡಿ, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ತಂಡ ಸಿದ್ಧಗೊಳಿಸುವ ಉದ್ದೇಶದಿಂದ ಮುಂಬರುವ ರಾಷ್ಟ್ರೀಯ ಶಿಬಿರಕ್ಕೆ ಇಬ್ಬರನ್ನೂ ಆಯ್ಕೆ ಮಾಡಲಾಗುವುದಿಲ್ಲ ಎಂದು ಹಾಕಿ ಇಂಡಿಯಾ ತಿಳಿಸಿದ ಬಳಿಕ ನಿವೃತ್ತಿ ನಿರ್ಧಾರ ಕೈಗೊಂಡರು ಎಂದು ಮೂಲಗಳು ತಿಳಿಸಿವೆ.

ಹಾಕಿಗೆ ಗುಡ್‌ ಬೈ ಹೇಳಿದ ಒಲಿಂಪಿಕ್ಸ್‌ ಹೀರೋ ರೂಪಿಂದರ್ ಪಾಲ್ ಸಿಂಗ್

ಪಂಜಾಬ್‌ನ 30 ವರ್ಷದ ರೂಪಿಂದರ್‌ 13 ವರ್ಷಗಳಲ್ಲಿ ಭಾರತದ ಪರ 233 ಪಂದ್ಯಗಳನ್ನು ಆಡಿದ್ದಾರೆ. ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 4 ಗೋಲು ಬಾರಿಸಿದ್ದರು. 2014 ವಿಶ್ವಕಪ್‌ ತಂಡಕ್ಕೆ ರೂಪಿಂದರ್‌ ಉಪನಾಯಕರಾಗಿ ಆಯ್ಕೆಯಾಗಿದ್ದರು. ಇನ್ನು ಒಡಿಶಾ ಮೂಲದ 31 ವರ್ಷದ ಲಾಕ್ರಾ ದೇಶದ ಪರ 201 ಪಂದ್ಯಗಳಲ್ಲಿ ಆಡಿದ್ದಾರೆ. ರೂಪಿಂದರ್‌ ಹಾಗೂ ಲಾಕ್ರಾ ಇಬ್ಬರೂ 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಹಾಗೂ 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದರು.

click me!