ಭಾರತ ಹಾಕಿ ತಂಡದ ನೂತನ ಆಯ್ಕೆ ಸಮಿತಿ ನೇಮಕ
ಕರ್ನಾಟಕದ ಮೂವರು ಮಾಜಿ ಆಟಗಾರರಿಗೆ ಸ್ಥಾನ
ಈ ಸಮಿತಿಗೆ ಮಾಜಿ ಆಟಗಾರ ಆರ್‌ಪಿ ಸಿಂಗ್ ಮುಖ್ಯಸ್ಥರಾಗಿ ಆಯ್ಕೆ
ನವದೆಹಲಿ(ಏ.15): ಭಾರತ ಹಾಕಿ ತಂಡದ ನೂತನ ಆಯ್ಕೆ ಸಮಿತಿಯನ್ನು ಹಾಕಿ ಇಂಡಿಯಾ ಗುರುವಾರ ನೇಮಕಗೊಳಿಸಿದ್ದು, ಕರ್ನಾಟಕದ ಮೂವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತದ ಮಾಜಿ ಆಟಗಾರರಾದ ಕೊಡಗಿನ ಎಂ.ಎಂ.ಸೋಮಯ್ಯ, ಬಿ.ಪಿ.ಗೋವಿಂದ ಹಾಗೂ ವಿ.ಆರ್.ರಘುನಾಥ್ 14 ಮಂದಿಯ ಸಮಿತಿಯಲ್ಲಿದ್ದಾರೆ.
ಈ ಸಮಿತಿಗೆ ಮಾಜಿ ಆಟಗಾರ ಆರ್‌ಪಿ ಸಿಂಗ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಶನಿವಾರದಿಂದ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಮೂಲಕ ನೂತನ ಸಮಿತಿ ಕಾರ್ಯಾರಂಭಿಸಲಿದೆ.
undefined
ಮಹಿಳಾ ಟೆನಿಸ್: ಸತತ 2ನೇ ಸೋಲುಂಡ ಭಾರತ
ತಾಷ್ಕೆಂಟ್: ವಿಶ್ವ ಮಹಿಳಾ ತಂಡಗಳ(ಬಿಲ್ಲಿ ಜೀನ್ ಕಿಂಗ್ ಕಪ್) ಚಾಂಪಿಯನ್‌ಶಿಪ್‌ನ ಏಷ್ಯಾ-ಓಷಿಯಾನಿಯಾ ಗುಂಪು-1ರಲ್ಲಿ ಭಾರತ ಸತತ 2ನೇ ಸೋಲನುಭವಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆದು ವಿಶ್ವ ಗುಂಪು ಪ್ಲೇ-ಆಫ್ಗೇರುವ ಭಾರತದ ಸಾಧ್ಯತೆ ಕ್ಷೀಣಿಸಿದೆ. ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ ಶುಕ್ರವಾರ ಜಪಾನ್ ವಿರುದ್ಧ 0-3 ಅಂತರದಲ್ಲಿ ಪರಾಭವಗೊಂಡಿತು. ಜಪಾನ್ 4 ಪಂದ್ಯಗಳನ್ನೂ ಗೆದ್ದು ಅಗ್ರಸ್ಥಾನಕ್ಕೇರಿದ್ದು, 3 ಪಂದ್ಯ ಗೆದ್ದಿರುವ ಚೀನಾ 2ನೇ ಸ್ಥಾನದಲ್ಲಿದೆ. ಭಾರತ ಕೊನೆ ಪಂದ್ಯದಲ್ಲಿ ಶನಿವಾರ ಕೊರಿಯಾ ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದು 3-4ನೇ ಸ್ಥಾನ ಪಡೆದರೆ ಗುಂಪು-1ರಲ್ಲೇ ಉಳಿಯಲಿದೆ.
ಲೈಂಗಿಕ ದೌರ್ಜನ್ಯ ಆರೋಪಿ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್‌ಗೆ ಕ್ಲೀನ್‌ಚಿಟ್..?
ಇಂದು ಬೆಂಗಳೂರಲ್ಲಿ ಗ್ರ್ಯಾನ್ ಪ್ರಿ-4 ಅಥ್ಲೆಟಿಕ್
ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್(ಎಎಫ್‌ಐ) ಆಯೋಜಸುವ ಇಂಡಿಯನ್ ಗ್ರ್ಯಾನ್ ಪ್ರಿ-4 ಕೂಟ ಶನಿವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತದ ತಾರಾ ಅಥ್ಲೀಟ್‌ಗಳಾದ ಹಿಮಾ ದಾಸ್, ತಜೀಂದರ್ ಪಾಲ್ ಸಿಂಗ್, ಡಿ.ಪಿ. ಮನು, ದಾನೇಶ್ವರಿ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ. ಈ ಕೂಟವು ಅಂ.ರಾ. ಕೂಟಗಳಿಗೆ ಸಿದ್ಧತೆ, ಆಯ್ಕೆಗೆ ಅನುಕೂಲವಾಗಲಿದೆ.
ಪ್ರಿಯಾನ್ಶು ರಾಜಾವತ್ ವಿಶ್ವ ನಂ.38
ನವದೆಹಲಿ: ಇತ್ತೀಚೆಗೆ ಆರ್ಲಿಯಾನ್ಸ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಭಾರತದ ಯುವ ಶಟ್ಲರ್ ಪ್ರಿಯಾನ್ಶು ರಾಜಾವತ್ ಬ್ಯಾಡ್ಮಿಂಟನ್ ವಿಶ್ವ ಶ್ರೇಯಾಂಕದಲ್ಲಿ ಜೀವನಶ್ರೇಷ್ಠ 38ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪರಿಷ್ಕೃತ ಪಟ್ಟಿಯಲ್ಲಿ ಅವರು 20 ಸ್ಥಾನ ಏರಿಕೆ ಕಂಡಿದ್ದಾರೆ. ಇದೇ ವೇಳೆ ಪಿ.ವಿ.ಸಿಂಧು ಮತ್ತೆ ಅಗ್ರ 10ರಿಂದ ಹೊರಬಿದ್ದಿದ್ದು, 11ನೇ ಸ್ಥಾನದಲ್ಲಿದ್ದಾರೆ.