ಕೊರೋನಾ ಭೀತಿ: ಭಾರತ ಹಾಕಿ ತಂಡದ ಚೀನಾ ಪ್ರವಾಸ ರದ್ದು!

By Suvarna News  |  First Published Feb 8, 2020, 8:11 AM IST

ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದೆ. ವೈರಸ್ ನಿಯಂತ್ರಿಸಲು ಚೀನಾ ಹರಸಾಹಸ ಪಡುತ್ತಿದ್ದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ವೈರಸ್ ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಭಾರತ ಮಹಿಳಾ ಹಾಕಿ ತಂಡದ ಚೀನಾ ಪ್ರವಾಸ ರದ್ದುಗೊಂಡಿದೆ. 


ನವದೆಹಲಿ(ಫೆ.08): ಚೀನಾದಲ್ಲಿ ಕೊರೋನಾ ವೈರಸ್‌ನಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾದಲ್ಲಿ ಬಹುತೇಕ ಕಂಪನಿಗಳು ಸ್ಥಗಿತಗೊಂಡಿವೆ. ಕಾರ್ಯಕ್ರಮಗಳು ನಡೆಯುತ್ತಿಲ್ಲ. ಜನರು ಹೊರಗೆ ಬರುತ್ತಿಲ್ಲ. ಇದರ ಬೆನ್ನಲ್ಲೇ ಭಾರತ ಮಹಿಳಾ ಹಾಕಿ ತಂಡ ಮಹತ್ವದ ಸರಣಿಗಾಗಿ ಚೀನಾ ಪ್ರವಾಸವನ್ನು ರದ್ದು ಮಾಡಿದೆ.

ಇದನ್ನೂ ಓದಿ: FIH ಪ್ರೋ ಲೀಗ್ ಹಾಕಿ: ಭಾರತಕ್ಕೆ ಬೆಲ್ಜಿಯಂ ಸವಾಲು

Tap to resize

Latest Videos

ಕೊರೋನಾ ವೈರಸ್‌ ವಿಪರೀತವಾಗಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಮಹಿಳಾ ಹಾಕಿ ತಂಡದ ಚೀನಾ ಪ್ರವಾಸ ರದ್ದಾಗಿದೆ. ಒಲಿಂಪಿಕ್‌ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಮಹತ್ವದ ಸರಣಿ ಇದ್ದಾಗಿದ್ದರೂ, ತಂಡದ ಸುರಕ್ಷತೆ ದೃಷ್ಟಿಯಿಂದ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಭಾರತ ತಂಡದ ನಾಯಕಿ ರಾಣಿ ತಿಳಿಸಿದ್ದಾರೆ. 

ಇದನ್ನೂ ಓದಿ: ರಾಣಿ ರಾಂಪಾಲ್‌ಗೆ ಒಲಿದ ವಿಶ್ವ ಗೇಮ್ಸ್‌ ಪ್ರಶಸ್ತಿ

ಭಾರತ ವನಿತೆಯರು ಮಾಚ್‌ರ್‍ 14-25ರ ವರೆಗೆ ಚೀನಾ ಪ್ರವಾಸ ಕೈಗೊಳ್ಳಬೇಕಿತ್ತು. ಈ ಅವಧಿಯಲ್ಲಿ ಬೇರಾರ‍ಯವುದಾದರೂ ತಂಡದ ವಿರುದ್ಧ ಸರಣಿ ಆಯೋಜಿಸಲು ಹಾಕಿ ಇಂಡಿಯಾ ಪ್ರಯತ್ನಿಸುತ್ತಿದೆ.

click me!