Hockey World Cup: ಪ್ರಶಸ್ತಿ ಸುತ್ತಿಗೇರಿದ ಜರ್ಮನಿ, ಬೆಲ್ಜಿಯಂ..!

By Naveen Kodase  |  First Published Jan 28, 2023, 9:00 AM IST

ಹಾಕಿ ವಿಶ್ವಕಪ್ ಸೆಮೀಸ್‌ನಲ್ಲಿ ಆಸ್ಟ್ರೇಲಿಯಾ ಎದುರು ಜರ್ಮನಿಗೆ ರೋಚಕ ಜಯ
ಕೊನೆಯ ಆರು ಸೆಕೆಂಡ್ ಬಾಕಿ ಇದ್ದಾಗ ಗೋಲು ಬಾರಿಸಿ ಫೈನಲ್ ಪ್ರವೇಶಿಸಿದ ಜರ್ಮನಿ
ಹಾಲಿ ಚಾಂಪಿಯನ್‌ ಬೆಲ್ಜಿಯಂಗೆ ಪೆನಾಲ್ಟಿಶೂಟೌಟ್‌ನಲ್ಲಿ ರೋಚಕ ಜಯ


ಭುವನೇಶ್ವರ(ಜ.28): ಎಫ್‌ಐಎಚ್‌ ಪುರುಷರ ಹಾಕಿ ವಿಶ್ವಕಪ್‌ ಅಂತಿಮ ಘಟ್ಟತಲುಪಿದ್ದು, ಪ್ರಶಸ್ತಿಗಾಗಿ ಜರ್ಮನಿ ಹಾಗೂ ಹಾಲಿ ಚಾಂಪಿಯನ್‌ ಬೆಲ್ಜಿಯಂ ಸೆಣಸಲಿವೆ. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಜರ್ಮನಿ ಕೊನೆ ಕ್ಷಣದಲ್ಲಿ ಗೋಲು ಬಾರಿಸಿ ರೋಚಕ ಗೆಲುವು ಸಾಧಿಸಿದರೆ, ನೆದರ್‌ಲೆಂಡ್‌್ಸ ವಿರುದ್ಧ ಬೆಲ್ಜಿಯಂ ಪೆನಾಲ್ಟಿಶೂಟೌಟ್‌ನಲ್ಲಿ ಜಯಭೇರಿ ಬಾರಿಸಿ ಫೈನಲ್‌ಗೇರಿತು. ಭಾನುವಾರ ಈ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಗೊಂಜಾಲೊ ಹ್ಯಾಟ್ರಿಕ್‌: 11ನೇ ನಿಮಿಷದಲ್ಲಿ ಹೇವರ್ಡ್‌, 26ನೇ ನಿಮಿಷದಲ್ಲಿ ನೇಥನ್‌ ಬಾರಿಸಿದ ಗೋಲುಗಳಿಂದ ಮೊದಲಾರ್ಧದಲ್ಲಿ ಆಸ್ಪ್ರೇಲಿಯಾ 2-0 ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಜರ್ಮನಿ, ಸಿಕ್ಕ ಪೆನಾಲ್ಟಿಕಾರ್ನರ್‌ ಅವಕಾಶಗಳನ್ನು ಉಪಯೋಗಿಸಿಕೊಂಡಿತು. 42, 51ನೇ ನಿಮಿಷದಲ್ಲಿ ಗೊಂಜಾಲೊ ಪೀಲತ್‌ ಗೋಲು ಗಳಿಸಿ ಜರ್ಮನಿ ಸಮಬಲ ಸಾಧಿಸಲು ನೆರವಾದರು. 57ನೇ ನಿಮಿಷದಲ್ಲಿ ಬ್ಲೇಕ್‌ ಗೋವ​ರ್‍ಸ್ ಆಸ್ಪ್ರೇಲಿಯಾ ಮತ್ತೆ ಮುನ್ನಡೆ ಪಡೆಯುವಂತೆ ಮಾಡಿದರು. 58ನೇ ನಿಮಿಷದಲ್ಲಿ ಮತ್ತೊಂದು ಪೆನಾಲ್ಟಿಕಾರ್ನರನ್ನು ಗೋಲಾಗಿಸಿದ ಗೊಂಜಾಲೊ ಜರ್ಮನಿ ಪಂದ್ಯದಲ್ಲಿ ಉಳಿಯಲು ನೆರವಾದರು. ಪಂದ್ಯ ಮುಕ್ತಾಯಗೊಳ್ಳಲು ಕೇವಲ 6 ಸೆಕೆಂಡ್‌ ಬಾಕಿ ಇದ್ದಾಗ ವೆಲ್ಲೆನ್‌ ನಿಕ್ಲಾಸ್‌ ಬಾರಿಸಿದ ಆಕರ್ಷಕ ಗೋಲು ಜರ್ಮನಿಯ ಗೆಲುವುಗೆ ಕಾರಣವಾಯಿತು.

Tap to resize

Latest Videos

undefined

Australian Open: ವೃತ್ತಿಜೀವನದ ಕೊನೇ ಗ್ರ್ಯಾಂಡ್‌ ಸ್ಲಾಂ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡ ಸಾನಿಯಾ ಮಿರ್ಜಾ!

ಈ ಜಯದೊಂದಿಗೆ 2010ರ ಬಳಿಕ ಜರ್ಮನಿ ಮೊದಲ ಬಾರಿಗೆ ಫೈನಲ್‌ ಪ್ರವೇಶಿಸಿತು. ಜೊತೆಗೆ ಟೋಕಿಯೋ ಒಲಿಂಪಿಕ್ಸ್‌ ಸೆಮಿಫೈನಲ್‌ ಸೋಲಿಗೆ ಸೇಡು ತೀರಿಸಿಕೊಂಡಿತು. 3 ಬಾರಿ ಚಾಂಪಿಯನ್‌ ಆಸ್ಪ್ರೇಲಿಯಾ ಸತತ 2ನೇ ಬಾರಿ ಫೈನಲ್‌ಗೇರಲು ವಿಫಲವಾಯಿತು.

ಶೂಟೌಟಲ್ಲಿ ಬೆಲ್ಜಿಯಂಗೆ 3-2 ಗೋಲುಗಳ ಜಯ

30 ವರ್ಷ ದಾಟಿದ 11 ಆಟಗಾರರಿರುವ ಬೆಲ್ಜಿಯಂ ತಂಡ 25ಕ್ಕೂ ಕಡಿಮೆ ವಯಸ್ಸಿನ 8 ಆಟಗಾರರಿದ್ದ ಯುವ ನೆದರ್‌ಲೆಂಡ್‌್ಸ ತಂಡದ ವಿರುದ್ಧ 60 ನಿಮಿಷಗಳ ಮುಕ್ತಾಯಕ್ಕೆ 2-2ರಲ್ಲಿ ಸಮಬಲ ಸಾಧಿಸಿತು. ಫಲಿತಾಂಶಕ್ಕಾಗಿ ಪೆನಾಲ್ಟಿಶೂಟೌಟ್‌ ಮೊರೆ ಹೋಗಲಾಯಿತು. ಬೆಲ್ಜಿಯಂ ಮೊದಲ 3 ಯತ್ನದಲ್ಲಿ ಗೋಲು ಬಾರಿಸಿ 4ನೇ ಯತ್ನ ವ್ಯರ್ಥ ಮಾಡಿತು. ಡಚ್‌ನ 2, 3ನೇ ಯತ್ನದಲ್ಲಷ್ಟೇ ಗೋಲು ದಾಖಲಾಯಿತು. ಉಳಿದ 3 ಯತ್ನ ವ್ಯರ್ಥವಾದ ಪರಿಣಾಮ ಸತತ 3ನೇ ಬಾರಿ ಫೈನಲ್‌ಗೇರಲು ವಿಫಲವಾಯಿತು. ಭಾನುವಾರ 3ನೇ ಸ್ಥಾನಕ್ಕಾಗಿ ನಡೆವ ಪಂದ್ಯದಲ್ಲಿ ಆಸ್ಪ್ರೇಲಿಯಾ ಹಾಗೂ ನೆದರ್‌ಲೆಂಡ್‌್ಸ ಸೆಣಸಲಿವೆ.

9-12 ಪಂದ್ಯ: ಭಾರತಕ್ಕೆ ಇಂದು ದ.ಆಫ್ರಿಕಾ ಸವಾಲು

9ರಿಂದ 12ನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಶನಿವಾರ ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರಾಗಲಿದೆ. ಜಪಾನ್‌ ವಿರುದ್ಧ ಉತ್ತಮ ಆಟವಾಡಿದ ಭಾರತ ಮತ್ತೊಂದು ಜಯದೊಂದಿಗೆ 9ನೇ ಸ್ಥಾನಕ್ಕೆ ತೃಪ್ತಿಪಡುವ ಗುರಿ ಹೊಂದಿದೆ.

ಪಂದ್ಯ: ಸಂಜೆ 7ರಿಂದ

click me!