ಭಾರತ ಹಾಕಿ ವಿಶ್ವಕಪ್‌ ಗೆದ್ದು 50 ವರ್ಷ; ಈವರೆಗೂ ದೇಶ ಗೆದ್ದಿರುವ ಏಕೈಕ ವಿಶ್ವಕಪ್‌!

Published : Mar 16, 2025, 09:28 AM ISTUpdated : Mar 16, 2025, 09:32 AM IST
ಭಾರತ ಹಾಕಿ ವಿಶ್ವಕಪ್‌ ಗೆದ್ದು 50 ವರ್ಷ; ಈವರೆಗೂ ದೇಶ ಗೆದ್ದಿರುವ ಏಕೈಕ ವಿಶ್ವಕಪ್‌!

ಸಾರಾಂಶ

1975ರಲ್ಲಿ ಭಾರತ ಹಾಕಿ ವಿಶ್ವಕಪ್ ಗೆದ್ದು 50 ವರ್ಷಗಳಾದ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಸಮಾರಂಭ ಆಯೋಜಿಸಿತ್ತು. 1975ರ ವಿಶ್ವಕಪ್ ವಿಜೇತ ತಂಡಕ್ಕೆ ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ತಂಡಕ್ಕೆ ಹಾಕಿ ಇಂಡಿಯಾ ಬಹುಮಾನ ವಿತರಿಸಿತು. ಹರ್ಮನ್‌ಪ್ರೀತ್ ಸಿಂಗ್ ಮತ್ತು ಸವಿತಾ ಪುನಿಯಾ ವರ್ಷದ ಶ್ರೇಷ್ಠ ಆಟಗಾರ/ಆಟಗಾರ್ತಿ ಪ್ರಶಸ್ತಿ ಪಡೆದರು.

ನವದೆಹಲಿ: ಭಾರತ ಹಾಕಿ ತಂಡ 8 ಬಾರಿ ಒಲಿಂಪಿಕ್ಸ್‌ ಚಿನ್ನ ಜಯಿಸಿದ್ದರೂ, ವಿಶ್ವಕಪ್‌ ಗೆದ್ದಿರುವ ಒಮ್ಮೆ ಮಾತ್ರ. ಅದು 1975ರಲ್ಲಿ. ಆ ವರ್ಷ ಮಾ.1ರಿಂದ 15ರ ವರೆಗೂ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಿತ್ತು. ಫೈನಲಲ್ಲಿ ಪಾಕಿಸ್ತಾನವನ್ನು 2-1 ಗೋಲುಗಳಲ್ಲಿ ಸೋಲಿಸಿ ಟ್ರೋಫಿ ಎತ್ತಿಹಿಡಿದಿತ್ತು.

ಶನಿವಾರಕ್ಕೆ (ಮಾ.15) ಭಾರತ ವಿಶ್ವಕಪ್‌ ಜಯಿಸಿ ಬರೋಬ್ಬರಿ 50 ವರ್ಷ. ಹೀಗಾಗಿ, ಹಾಕಿ ಇಂಡಿಯಾ ಈ ದಿನದಂದು ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.

1975ರ ವಿಶ್ವಕಪ್‌ ವಿಜೇತ ತಂಡದಲ್ಲಿದ್ದ ಸದಸ್ಯರಿಗೆ ಮೇಜರ್‌ ಧ್ಯಾನ್‌ಚಂದ್‌ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ತಂಡದಲ್ಲಿ ಧ್ಯಾನ್‌ಚಂದ್‌ರ ಪುತ್ರ ಅಶೋಕ್‌ ಕುಮಾರ್‌ ಸಹ ಇದ್ದರು.

ಇದೇ ವೇಳೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಿಗೆ ಹಾಕಿ ಇಂಡಿಯಾ ತಲಾ ₹15 ಲಕ್ಷ ಬಹುಮಾನ ವಿತರಿಸಿತು.

ಹರ್ಮನ್‌ಪ್ರೀತ್‌, ಸವಿತಾಗೆ ಹಾಕಿ ಇಂಡಿಯಾ ಪ್ರಶಸ್ತಿ

ನವದೆಹಲಿ: ಭಾರತದ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್ ಮತ್ತು ಹಿರಿಯ ಗೋಲ್‌ ಕೀಪರ್‌ ಸವಿತಾ ಪುನಿಯಾ ಹಾಕಿ ಇಂಡಿಯಾ ಕೊಡಮಾಡುವ ವರ್ಷದ ಶ್ರೇಷ್ಠ ಆಟಗಾರ/ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ. ಶನಿವಾರ ವಾರ್ಷಿಕ ಪ್ರಶಸ್ತಿಗಳನ್ನು ಹಾಕಿ ಇಂಡಿಯಾ ಪ್ರದಾನ ಮಾಡಿತು. 

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡವನ್ನು ಹರ್ಮನ್‌ಪ್ರೀತ್‌ ಮುನ್ನಡೆಸಿದ್ದರು. ಭಾರತ ಮಹಿಳಾ ತಂಡ ಜಾಗತಿಕ ಮಟ್ಟದಲ್ಲಿ ಸುಧಾರಿತ ಪ್ರದರ್ಶನ ತೋರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸವಿತಾ ಸತತ 2ನೇ ವರ್ಷ ವರ್ಷದ ಆಟಗಾರ್ತಿ ಪ್ರಶಸ್ತಿ ಪಡೆದರು. ಇದೇ ವೇಳೆ ಭಾರತೀಯ ಹಾಕಿ 100 ವರ್ಷಗಳನ್ನು ಪೂರೈಸಿದ್ದಕ್ಕೆ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೋಹರ್‌ ಕಪ್: ಹಾಕಿ ಪಂದ್ಯದಲ್ಲಿ ಭಾರತ-ಪಾಕ್‌ ಹ್ಯಾಂಡ್‌ಶೇಕ್‌!
ಕ್ರಿಕೆಟ್ ಆಯ್ತು, ಈಗ ಭಾರತ-ಪಾಕ್ ಹಾಕಿಯಲ್ಲೂ ನೋ ಹ್ಯಾಂಡ್ ಶೇಕ್ ?