ಬೆಂಗಳೂರಿನಲ್ಲಿ 6ನೇ ಆವೃತ್ತಿಯ 'ಚೈರೋಸ್ ಭೀಮಯ್ಯ ಹಾಕಿ ಕಪ್ 2025' ಇಂದಿನಿಂದ ಆರಂಭವಾಗಲಿದೆ. ಒಟ್ಟು 20 ತಂಡಗಳು ಭಾಗವಹಿಸಲಿದ್ದು, ಜನವರಿ 12 ರಂದು ಅಂತಿಮ ಪಂದ್ಯ ನಡೆಯಲಿದೆ.
ಬೆಂಗಳೂರು: ಬಹು ನಿರೀಕ್ಷಿತ 6ನೇ ಆವೃತ್ತಿಯ 'ಚೈರೋಸ್ ಭೀಮಯ್ಯ ಹಾಕಿ ಕಪ್ 2025' ಇಂದಿನಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಹಾಕಿ ಅರೆನಾನಲ್ಲಿ ನಡೆಯಲಿದೆ. ಕರ್ನಾಟಕ ಹಾಕಿ ಅಸೋಸಿಯೇಷನ್ ಹಾಗೂ ಕೂರ್ಗ್ ಚಾಲೆಂಜರ್ಸ್ ಚಿಕ್‌ಪೆಟ್ ಅಸೋಸಿಯೇಷನ್ (CCCA) ಸಹಯೋಗದಲ್ಲಿ ಈ ಅಂತರ್-ರಾಜ್ಯ ಪಂದ್ಯಾವಳಿ 5-ಎ-ಸೈಡ್ ಮಾದರಿಯಲ್ಲಿ ಭಾರತೀಯ ಹಾಕಿ ಪಂದ್ಯಾವಳಿ ನಡೆಯಲಿದೆ.
ಹಾಕಿ ಕಪ್ ಪಂದ್ಯಾವಳಿಯಲ್ಲಿ ಒಟ್ಟು 180 ಆಟಗಾರರನ್ನೊಳಗೊಂಡ ಒಟ್ಟು 20 ತಂಡಗಳು ಭಾಗವಹಿಸಲಿವೆ. ಇಂದಿನಿಂದ ಜನವರಿ 12ರವರೆಗೆ ಪಂದ್ಯಾವಳಿ ನಡೆಯಲಿದ್ದು, ಭಾನುವಾರ ವಿಜೇತರನ್ನು ಘೋಷಿಸಲಾಗುತ್ತದೆ. ಮಾಜಿ ಭಾರತೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ವಿ.ಎಸ್. ವಿನಯ, ಅಮರ್ ಐಯಮ್ಮ, ನಿತಿನ್ ತಿಮ್ಮಯ್ಯ ಮತ್ತು ನಿಕ್ಕಿನ್ ತಿಮ್ಮಯ್ಯ ಅವರು ಸಹ ಭಾಗವಹಿಸಲಿದ್ದಾರೆ.
'ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ'; ಹಿಂದಿ ಹೇರಲು ಹೊರಟವರಿಗೆ ಅಶ್ವಿನ್ ಚಾಟಿ ಏಟು
ಜನವರಿ 12 ರಂದು ಅಂತಿಮ ಸುತ್ತು ನಡೆಯಲಿದ್ದು, ಬಳಿಕ ವಿಜೇತ ತಂಡ ಪದ್ಮಶ್ರೀ ಮತ್ತು ಮಾಜಿ ಭಾರತೀಯ ಹಾಕಿ ಆಟಗಾರ ಎಂ.ಪಿ. ಗಣೇಶ್ ಹಾಗೂ ಧನರಾಜ್ ಪಿಳ್ಳೈ ವಿತರಿಸಲಿದ್ದಾರೆ. 'ಜನವರಿ 10 ರಿಂದ 12 ರವರೆಗೆ ಬೆಂಗಳೂರಿನಲ್ಲಿ 5-ಎ-ಸೈಡ್ ಚೇರೋಸ್ ಭೀಮಯ್ಯ ಹಾಕಿ ಕಪ್‌ನ 6 ನೇ ಆವೃತ್ತಿ ಘೋಷಿಸಲಾಗಿದೆ, ಈ ಪಂದ್ಯಾವಳಿಯು ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಬೆಂಬಲಿಸಲು ಮತ್ತು ಭಾರತದಾದ್ಯಂತದ ಆಟಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ನಮ್ಮ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ಈ ಅದ್ಭುತ ಕ್ರೀಡೆಯ ಬೆಳವಣಿಗೆ ಉತ್ತೇಜಿಸುತ್ತದೆ ಎಂದು ಸಿಸಿಸಿಎ ಅಧ್ಯಕ್ಷ ಶ್ರೀ ಕೆ.ಡಿ. ಗಣಪತಿ ಹೇಳಿದ್ದಾರೆ.
ಕ್ಯೂನೆಟ್ ಇಂಡಿಯಾ ವಲಯದ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ನಿಶ್ಚಲ್ ಸಿ ಮಾತನಾಡಿ, ಭಾರತೀಯ ನೆಲದ ದೇಸಿ ಆಟವಾದ ಹಾಕಿ ಆಟವನ್ನು ಬೆಳೆಸುವ ಅಗತ್ಯವಿದೆ. ಹೀಗಾಗಿ ಹಾಕಿ ಆಟಕ್ಕೆ ನಮ್ಮ ಪ್ರಾಯೋಜಿಕ್ವತ ಸದಾ ಇರಲಿದೆ. ಹಾಕಿ ಆಟವನ್ನು ಜಾಗತಿಕವಾಗಿ ಪ್ರಸಿದ್ಧಿ ಆಟವನ್ನಾಗಿ ಮಾಡುವತ್ತ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.