FIH Hockey Pro League : ಭಾರತ ಮಹಿಳಾ ತಂಡಕ್ಕೆ ಭರ್ಜರಿ ಗೆಲುವು

By Kannadaprabha News  |  First Published Jun 19, 2022, 9:22 AM IST

ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾಗೆ ಸೋಲುಣಿಸಿದ ಭಾರತ ಮಹಿಳಾ ಹಾಕಿ ತಂಡ
ಒಲಿಂಪಿಕ್ಸ್ ಚಾಂಪಿಯನ್‌ ಅರ್ಜೆಂಟೀನಾ ವಿರುದ್ದ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಗೆಲುವು 
ಭಾರತ ತಂಡವು ನೆದರ್ಲೆಂಡ್ಸ್ ವಿರುದ್ದ ಶೂಟೌಟ್‌ನಲ್ಲಿ 1-4 ಗೋಲುಗಳಿಂದ ಸೋಲು


ಆಮ್ಸ್‌ಟೆರ್ಡಮ್‌(ಜೂ.19): ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ (FIH Hockey Pro League) ಶನಿವಾರ ಭಾರತ ಮಹಿಳಾ ಹಾಕಿ ತಂಡವು (Indian Women's Hockey Team) ಒಲಿಂಪಿಕ್ಸ್ ಚಾಂಪಿಯನ್‌ ಅರ್ಜೆಂಟೀನಾ ವಿರುದ್ದ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ಗೆಲುವು ದಾಖಲಿಸಿತು. ನಿಗದಿತ ಸಮಯದಲ್ಲಿ ಪಂದ್ಯವು 3-3 ಗೋಲುಗಳಿಂದ ಸಮಬಲಗೊಂಡಿತ್ತು. ಇನ್ನು ಎರಡನೇ ಪಂದ್ಯವು ಭಾನುವಾರವಾದ ಇಂದು ನಡೆಯಲಿದೆ. ಇನ್ನು ಭಾರತ ಪುರುಷರ ಹಾಕಿ ತಂಡವು ನೆದರ್ಲೆಂಡ್ಸ್ ವಿರುದ್ದದ ಪಂದ್ಯ 2-2ರಿಂದ ಸಮಬಲಗೊಳಿಸಿದ ಬಳಿಕ ಶೂಟೌಟ್‌ನಲ್ಲಿ 1-4 ಗೋಲುಗಳಿಂದ ಸೋಲನನ್ನುಭವಿಸಿತು. ಇನ್ನು ಎರಡನೇ ಪಂದ್ಯವು ಭಾನುವಾರ ನಡೆಯಲಿದೆ.

5 ರಾಷ್ಟ್ರಗಳ ಅ-23 ಹಾಕಿ ಟೂರ್ನಿ ಇಂದು ಆರಂಭ

Tap to resize

Latest Videos

undefined

ಡಬ್ಲಿನ್‌(ಐರ್ಲೆಂಡ್‌): 5 ರಾಷ್ಟ್ರಗಳ ಅಂಡರ್‌-23 ಹಾಕಿ ಟೂರ್ನಿ ಭಾನುವಾರ ಡಬ್ಲಿನ್‌ನಲ್ಲಿ ಆರಂಭವಾಗಲಿದ್ದು, ಭಾರತ ತಂಡ ಆತಿಥೇಯ ಐರ್ಲೆಂಡ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಭಾರತ ತಂಡವನ್ನು ವೈಷ್ಣವಿ ಪಾಲ್ಕೆ ಮುನ್ನಡೆಸಲಿದ್ದು, 2ನೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು ಜೂನ್ 20ಕ್ಕೆ ಎದುರಿಸಲಿದೆ. ಬಳಿಕ ಜೂನ್ 22 ಹಾಗೂ 23ಕ್ಕೆ ಕ್ರಮವಾಗಿ ಉಕ್ರೇನ್‌ ಮತ್ತು ಅಮೆರಿಕ ವಿರುದ್ಧ ಸೆಣಸಾಡಲಿದೆ. ರೌಂಡ್‌ ರಾಬಿನ್‌ ಮಾದರಿಯ ಟೂರ್ನಿಯಲ್ಲಿ ಅಗ್ರ 2 ತಂಡಗಳು ಫೈನಲ್‌ ಪ್ರವೇಶಿಸಲಿದ್ದು, 3 ಮತ್ತು 4ನೇ ಸ್ಥಾನ ಪಡೆದ ತಂಡಗಳು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿವೆ. ಈ ಎರಡೂ ಪಂದ್ಯಗಳು ಜೂನ್ 26ಕ್ಕೆ ನಿಗದಿಯಾಗಿದೆ.

ಅ-17 ಫಿಫಾ ವಿಶ್ವಕಪ್‌ ಸಿದ್ಧತೆ: 2 ಟೂರ್ನಿಯಲ್ಲಿ ಆಡಲಿರುವ ಭಾರತ ತಂಡ

ನವದೆಹಲಿ: ಮುಂಬರುವ ಫಿಫಾ ಅಂಡರ್‌-17 ಫುಟ್ಬಾಲ್‌ ವಿಶ್ವಕಪ್‌ನ ಸಿದ್ಧತೆಗಾಗಿ ಭಾರತದ ಕಿರಿಯ ಮಹಿಳೆಯರ ತಂಡ ಇಟಲಿ ಹಾಗೂ ನಾರ್ವೆಗೆ ಪ್ರವಾಸ ಕೈಗೊಳ್ಳಲಿದ್ದು, ಎರಡು ಫುಟ್ಬಾಲ್‌ ಟೂರ್ನಿಗಳಲ್ಲಿ ಆಡಲಿದೆ. ಇಟಲಿಯಲ್ಲಿ ಜೂನ್ 22ರಿಂದ 26ರ ವರೆಗೆ ಲೀಗ್‌ ನಿಗದಿಯಾಗಿದ್ದು, ನಾರ್ವೆಯಲ್ಲಿ ಅಂಡರ್‌-16 ಓಪನ್‌ ನಾರ್ಡಿಕ್‌ ಟೂರ್ನಿ ಜುಲೈ 1ರಿಂದ 17ರ ವರೆಗೆ ನಡೆಯಲಿದೆ. 

Asia Cup Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತ ಹಾಕಿ ತಂಡ

ಇಟಲಿಯ ಟೂರ್ನಿಯಲ್ಲಿ ಭಾರತ ಜೂನ್‌ 22ಕ್ಕೆ ಆತಿಥೇಯ ಇಟಲಿ ವಿರುದ್ಧವೇ ಆಡಲಿದೆ. ಈ ಟೂರ್ನಿಯಲ್ಲಿ ಚಿಲಿ, ಮೆಕ್ಸಿಕೋ ಕೂಡಾ ಪಾಲ್ಗೊಳ್ಳಲಿವೆ. ಇನ್ನು, ನಾರ್ವೆಯ ಟೂರ್ನಿಯಲ್ಲಿ 8 ತಂಡಗಳಿದ್ದು, ಪ್ರತೀ ತಂಡಗಳು ಒಂದು ಬಾರಿ ಮುಖಾಮುಖಿಯಾಗಲಿದೆ. ಭಾರತ ಜು.1ಕ್ಕೆ ನೆದರ್ಲೆಂಡ್‌್ಸ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಏಷ್ಯನ್‌ ಸೈಕ್ಲಿಸ್ಟ್‌ ಕೂಟ: 10 ಪದಕ ಗೆದ್ದ ಭಾರತ

ನವದೆಹಲಿ: 41ನೇ ಹಿರಿಯರ, 28ನೇ ಕಿರಿಯರ ಹಾಗೂ 10ನೇ ಪ್ಯಾರಾ ಏಷ್ಯನ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನ ಮೊದಲ ದಿನವೇ ಆತಿಥೇಯ ಭಾರತ ಚಿನ್ನ ಸೇರಿದಂತೆ 10 ಪದಕಗಳನ್ನು ಗೆದ್ದಿದೆ. ಈ ಪೈಕಿ 1 ಬೆಳ್ಳಿ, 6 ಕಂಚು ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ ಬಂದರೆ, 1 ಚಿನ್ನ, 1 ಬೆಳ್ಳಿ, 1 ಕಂಚು ಪ್ಯಾರಾ ಕೂಟದಲ್ಲಿ ಭಾರತ ಗೆದ್ದಿತು. ಕಿರಿಯರ ವಿಭಾಗದಲ್ಲಿ ಮಹಿಳೆಯರ 4 ಕಿ.ಮೀ. ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪಡೆಯಿತು. ಪ್ಯಾರಾ ಕೂಟದಲ್ಲಿ ಸಿ1-ಸಿ5 500 ಮೀ. ಟ್ರಯಲ್‌ ವಿಭಾಗದಲ್ಲಿ ಜ್ಯೋತಿ ಚಿನ್ನ ಗೆದ್ದರು.

click me!