ನಾವು ಶಾಲಾ ದಿನಗಳಿಂದ ಹಾಕಿ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಎಂದು ಓದಿಕೊಳ್ಳುತ್ತಲೇ ಬಂದಿದ್ದೇವೆ. ಆದರೆ ವಾಸ್ತವದಲ್ಲಿ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯೇ ಅಲ್ಲ. ಹಾಗಿದ್ರೆ ಇಲ್ಲಿಯವರೆಗೂ ನಾವು ಅಂದುಕೊಂಡಿದ್ದು ತಪ್ಪಾ? ಏನಿದು ಹೊಸ ಸಂಗತಿ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಬೆಂಗಳೂರು: ಭಾರತದಲ್ಲೇ ಹುಟ್ಟಿಬೆಳೆದ ಹಾಕಿ ಕ್ರೀಡೆಯು ನಮ್ಮ ದೇಶದ ಜನಪ್ರಿಯ ಕ್ರೀಡೆಗಳಲ್ಲಿ ಒಂದು ಎನಿಸಿಕೊಂಡಿದೆ. ಇಲ್ಲಿಯವರೆಗೂ ನಾವೆಲ್ಲರೂ ಹಾಕಿಯನ್ನು ಭಾರತದ ರಾಷ್ಟ್ರೀಯ ಕ್ರೀಡೆ ಎಂದೇ ಓದುತ್ತಾ ಬಂದಿದ್ದೇವೆ. ಆದರೆ ನಮ್ಮ ತಿಳುವಳಿಕೆ ತಪ್ಪು. ಹಾಗಿದ್ರೆ ಸತ್ಯ ಏನು ಎನ್ನುವುದನ್ನು ನೋಡೋಣ ಬನ್ನಿ
ನಾವೆಲ್ಲರೂ ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಎಂದು ಓದುತ್ತಾ ಬೆಳೆದಿದ್ದೇವೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಭಾರತವು ಹಾಕಿ ಕ್ರೀಡೆಯಲ್ಲಿ ಒಲಿಂಪಿಕ್ಸ್‌ನಲ್ಲೂ ತನ್ನದೇ ಆದ ಹೆಜ್ಜೆಗುರುತನ್ನು ದಾಖಲಿಸಿದೆ. ಇತ್ತೀಚೆಗಷ್ಟೇ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಜತೆಗೆ 52 ವರ್ಷಗಳ ಬಳಿಕ ಸತತ ಎರಡು ಬಾರಿ ಒಲಿಂಪಿಕ್ಸ್ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಭಾರತ ಪುರುಷರ ಹಾಕಿ ತಂಡವು ಕಂಚಿನ ಪದಕ ಜಯಿಸಿತ್ತು.
undefined
ಇನ್ನು ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ತಂಡವು ಇದುವರೆಗೂ ಒಟ್ಟು 13 ಪದಕಗಳನ್ನು ಜಯಿಸಿದೆ. ಈ ಪೈಕಿ 8 ಬಾರಿ ಚಿನ್ನದ ಬೇಟೆಯಾಡುವಲ್ಲಿ ಭಾರತ ಹಾಕಿ ತಂಡವು ಯಶಸ್ವಿಯಾಗಿದ್ದರೆ, ಒಮ್ಮೆ ಬೆಳ್ಳಿ ಹಾಗೂ ನಾಲ್ಜು ಬಾರಿ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅತಿಹೆಚ್ಚು ಚಿನ್ನದ ಪದಕ ಗೆದ್ದ ದಾಖಲೆ ಇಂದಿಗೂ ಭಾರತದ ಹೆಸರಿನಲ್ಲಿ ಅಚ್ಚಳಿಯದೇ ಉಳಿದಿದೆ.
ರಾಹುಲ್ ದ್ರಾವಿಡ್ ಪತ್ನಿ ಯಾರು? ದಿ ವಾಲ್ ಖ್ಯಾತಿಯ ದ್ರಾವಿಡ್ ಪತ್ನಿ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳು
ಇಲ್ಲಿಯವರೆಗೆ ನಾವು ನಂಬಿಕೊಂಡು ಬಂದಿದ್ದ ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಎನ್ನುವ ಮಾತು ನಿಜವಲ್ಲ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಹಾಗಿದ್ರೆ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆ ಯಾವುದಿರಬಹುದು ಎಂದು ನೀವೂ ಆಲೋಚಿಸುತ್ತಿರಬಹುದು ಅಲ್ಲವೇ?.
ಹೌದು, ನೀವೆಲ್ಲರೂ ಅಂದುಕೊಂಡಿರುವ ಭಾರತದ ಅಧಿಕೃತ ರಾಷ್ಟ್ರೀಯ ಕ್ರೀಡೆ ಹಾಕಿ ಎನ್ನುವುದು ನಿಜವಲ್ಲ. ಅಂದಹಾಗೆ ನಿಮಗೆಲ್ಲರಿಗೂ ತಿಳಿದಿರಲಿ, ಭಾರತವು ತನ್ನ ದೇಶದ ಅಧಿಕೃತ ರಾಷ್ಟ್ರೀಯ ಕ್ರೀಡೆ ಎಂದು ಯಾವುದೇ ಕ್ರೀಡೆಯ ಹೆಸರನ್ನು ಘೋಷಿಸಿಲ್ಲ. ಆದರೆ ಹಾಕಿಯ ಜತೆ ನಮ್ಮ ದೇಶದ ಜನರಲ್ಲಿ ಐತಿಹಾಸಿಕ ಮಹತ್ವ ಪಡೆದಿರುವ ಕಾರಣ, ಎಲ್ಲರೂ ಸಾಕಷ್ಟು ಸಮಯದಿಂದ ಹಾಕಿಯನ್ನು ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯೆಂದು ತಪ್ಪಾಗಿ ಅರ್ಥೈಸಿಕೊಂಡು ಬಂದಿದ್ದಾರೆ.
ಕ್ರಿಕೆಟ್ ಅಂಪೈರ್ ಆಗೋದು ಇಷ್ಟು ಸುಲಭ ನಾ? ಒಂದು ಮ್ಯಾಚ್‌ಗೆ ಸಿಗುವ ಸಂಬಳ ಎಷ್ಟು? ಇಲ್ಲಿದೆ ಡೀಟೈಲ್ಸ್
ಭಾರತ ಸರ್ಕಾರವು ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ಗುರುತಿಸುತ್ತದೆ ಹಾಗೂ ಗೌರವಿಸುತ್ತದೆ. ಒಂದು ಕ್ರೀಡೆ ಶ್ರೇಷ್ಠ ಮತ್ತೊಂದು ಕ್ರೀಡೆ ಕನಿಷ್ಠ ಎಂದು ಪರಿಭಾವಿಸುವುದಿಲ್ಲ. ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ಕಾಣುತ್ತಿದೆ. ಇನ್ನೂ ಆಸಕ್ತಿದಾಯಕ ಸಂಗತಿಯೆಂದರೇ, 2020ರಲ್ಲಿ ಮಹಾರಾಷ್ಟ್ರದ ಮಯೂರೇಶ್ ಅಗರವಾಲ್ ಅವರು ಹಾಕಿಯನ್ನು ರಾಷ್ಟ್ರೀಯ ಕ್ರೀಡೆಯಾಗಿ ಯಾವಾಗ ಘೋಷಿಸಲಾಯಿತು ಎಂದು ತಿಳಿಯಲು ಮಾಹಿತಿ ಹಕ್ಕು ಕಾಯ್ದೆ(RTI)ಯಡಿ ಅರ್ಜಿ ಸಲ್ಲಿಸಿದ್ದರು. ಆಗ ಕ್ರೀಡಾ ಸಚಿವಾಲಯವು, ಭಾರತದಲ್ಲಿ ಯಾವುದೇ ಕ್ರೀಡೆಯನ್ನು ಅಧಿಕೃತ ರಾಷ್ಟ್ರೀಯ ಕ್ರೀಡೆಯೆಂದು ಗೊತ್ತುಪಡಿಸಿಲ್ಲ ಎನ್ನುವ ಸ್ಪಷ್ಟನೆ ನೀಡಿತ್ತು.
ಇನ್ನು ಇದೇ ವೇಳೆ ಕೇಂದ್ರ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯವು ಎಲ್ಲಾ ಜನಪ್ರಿಯ ಕ್ರೀಡೆಗಳನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಸರ್ಕಾರದ ಗುರಿಯಾಗಿದೆ, ನಮ್ಮ ದೇಶದಲ್ಲಿ ಒಂದೇ ರಾಷ್ಟ್ರೀಯ ಕ್ರೀಡೆಯನ್ನು ಗೊತ್ತುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.