ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ದಕ್ಷಿಣ ಕೊರಿಯಾವನ್ನು ಬಗ್ಗುಬಡಿದ ಹರ್ಮನ್‌ಪ್ರೀತ್‌ ಸಿಂಗ್‌ ಪಡೆ

By Kannadaprabha News  |  First Published Sep 13, 2024, 10:52 AM IST

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 4ನೇ ಗೆಲುವು ಸಾಧಿಸಿದೆ. ದಕ್ಷಿಣ ಕೊರಿಯಾ ಎದುರು ಭಾರತ ಪುರುಷರ ಹಾಕಿ ತಂಡವು ಸುಲಭ ಗೆಲುವು ಸಾಧಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಹುಲುನ್‌ಬ್ಯುರ್‌(ಚೀನಾ): ಹಾಲಿ ಹಾಗೂ 4 ಬಾರಿ ಚಾಂಪಿಯನ್‌ ಭಾರತ ತಂಡ ಈ ಬಾರಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ 4ನೇ ಗೆಲುವು ಸಾಧಿಸಿದೆ. ಗುರುವಾರ ದಕ್ಷಿಣ ಕೊರಿಯಾ ವಿರುದ್ಧ ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ 3-1 ಗೋಲುಗಳ ಜಯ ತನ್ನದಾಗಿಸಿಕೊಂಡಿತು.

ಒಲಿಂಪಿಕ್ಸ್‌ ಕಂಚು ವಿಜೇತ ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಅರೈಜೀತ್‌ ಸಿಂಗ್‌ ಹಾಗೂ ಹರ್ಮನ್‌ಪ್ರೀತ್‌ ಆಸರೆಯಾದರು. ಅರೈಜೀತ್‌ 8ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಒದಗಿಸಿದರೆ, ಬಳಿಕ ಹರ್ಮನ್‌ 2 ಗೋಲು ದಾಖಲಿಸಿದರು. ಕೊರಿಯಾ 30ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ಬಾರಿಸಿತು.

Latest Videos

undefined

ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ಸ್‌ಗೆ ಪಿಎಂ ಮೋದಿ ಪ್ರೀತಿಯ ಆತಿಥ್ಯ

ಆರಂಭಿಕ 3 ಪಂದ್ಯಗಳಲ್ಲಿ ಕ್ರಮವಾಗಿ ಚೀನಾ ವಿರುದ್ಧ 3-0, ಜಪಾನ್‌ ವಿರುದ್ಧ 5-0 ಹಾಗೂ ಮಲೇಷ್ಯಾ ವಿರುದ್ಧ 8-1 ಗೋಲುಗಳಿಂದ ಗೆದ್ದು ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ, ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ಶನಿವಾರ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಸೋಮವಾರ ಸೆಮಿಫೈನಲ್‌ ಪಂದ್ಯ ನಡೆಯಲಿದ್ದು, ಭಾರತದ ಸೆಮೀಸ್‌ ಎದುರಾಳಿ ಯಾರು ಎಂಬುದು ಇನ್ನಷ್ಟೇ ಖಚಿತಗೊಳ್ಳಬೇಕಿದೆ.

ರಾಷ್ಟ್ರೀಯ ಈಜು: 12 ಬಂಗಾರ ಸೇರಿ 25 ಪದಕ ಗೆದ್ದ ಕರ್ನಾಟಕ

ಮಂಗಳೂರು: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಮತ್ತೆ ಕರ್ನಾಟಕ ಪ್ರಾಬಲ್ಯ ಸಾಧಿಸಿದೆ. ಗುರುವಾರ ಕರ್ನಾಟಕಕ್ಕೆ 3 ಚಿನ್ನ, 4 ಬೆಳ್ಳಿ ಹಾಗೂ 1 ಕಂಚು ಸೇರಿ 8 ಪದಕ ಲಭಿಸಿತು. 3 ದಿನಗಳಲ್ಲಿ ಕರ್ನಾಟಕ 9 ಚಿನ್ನ ಸೇರಿ ಬರೋಬ್ಬರಿ 25 ಪದಕ ಗೆದ್ದಿದೆ. ಕೂಟ ಶುಕ್ರವಾರ ಕೊನೆಗೊಳ್ಳಲಿದ್ದು, ರಾಜ್ಯಕ್ಕೆ ಮತ್ತಷ್ಟು ಪದಕ ಲಭಿಸುವ ನಿರೀಕ್ಷೆಯಿದೆ.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಯಶಸ್ಸಿನ ಹಿಂದಿನ ಗುಟ್ಟೇನು?

ಪುರುಷರ 1500 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ ಚಿನ್ನ, ದರ್ಶನ್‌ ಬೆಳ್ಳಿ, ಮಹಿಳೆಯರ 200 ಮೀ. ಬಟರ್‌ಫ್ಲೈನಲ್ಲಿ ಹಶಿಕಾ ರಾಮಚಂದ್ರ ಚಿನ್ನ, ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಆಕಾಶ್‌ ಮಣಿ ಬಂಗಾರದ ಸಾಧನೆ ಮಾಡಿದರು. ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿಹಿತಾ ನಯನಾ ಬೆಳ್ಳಿ, ಪುರುಷರ 50 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜು ಬೆಳ್ಳಿ, ಪುರುಷರ 4*100 ಮೀ. ಮೆಡ್ಲೆ ವಿಭಾಗದಲ್ಲಿ ಆಕಾಶ್‌, ವಿದಿತ್‌, ಕಾರ್ತಿಕೇಯನ್‌, ಶ್ರೀಹರಿ ಇದ್ದ ತಂಡಕ್ಕೆ ಬೆಳ್ಳಿ, ಮಹಿಳೆಯರ 800 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀ ಚರಣಿ ಕಂಚು ಜಯಿಸಿದರು.

click me!