ರಷ್ಯಾ ವಿರುದ್ದ ಭರ್ಜರಿ ಗೆಲುವು, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹಾಕಿ ಇಂಡಿಯಾ!

By Web DeskFirst Published Nov 2, 2019, 10:19 PM IST
Highlights

ರಷ್ಯಾ ವಿರುದ್ಧ ಗೋಲುಗಳ ಸುರಿಮಳೆಗೈದ ಭಾರತ, ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದೆ. ದ್ವಿತೀಯ ಲೆಗ್‌ನಲ್ಲಿ ಭಾರತದ ಗೋಲಿನ ಹೊಡೆತಕ್ಕೆ ರಷ್ಯಾ ಸುಸ್ತಾಯಿತು. ಇಷ್ಟೇ ಅಲ್ಲ ಭಾರತದ ಒಲಿಂಪಿಕ್ಸ್ ಕನಸಿಗೆ ಅಡ್ಡಿಯಾಗಲಿಲ್ಲ.

ಭುವನೇಶ್ವರ(ನ.02): ಭಾರತೀಯ ಹಾಕಿ ಗತವೈಭವ ಮರುಕಳಿಸುತ್ತಿದೆ. ಶನಿವಾರ(ನ.02) ಭಾರತದ ಪುರುಷ ಹಾಗೂ ಮಹಿಳಾ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. ರಷ್ಯಾ ವಿರುದ್ಧದ ದ್ವಿತೀಯ ಲೆಗ್‌ನಲ್ಲಿ 7-1 ಅಂತರದಲ್ಲಿ ಗೆಲುವು ಸಾಧಿಸಿದ ಭಾರತದ ಪುರುಷರ ಹಾಕಿ ತಂಡ ಒಟ್ಟು 11-3 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ, 2020ರ ಟೋಕಿಯೋ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದೆ.

ಇದನ್ನೂ ಓದಿ: ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ!

ಶುಕ್ರವಾರ(ನ.01) ನಡೆದ ಮೊದಲ ಲೆಗ್‌ನಲ್ಲಿ ಭಾರತ, ರಷ್ಯಾವನ್ನು 4-2  ಅಂತರದಲ್ಲಿ ಮಣಿಸಿತ್ತು. ಇದೀಗ ದ್ವಿತೀಯ ಲೆಗ್‌ನಲ್ಲಿ ರಷ್ಯಾ ವಿರುದ್ದದ  7-1 ಅಂತರದಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಒಟ್ಟು 11-3 ಅಂತರದಲ್ಲಿ ಗೆಲುವು ಸಾಧಿಸಿ, ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿತು.

ಲಲಿತ್ ಉಪಾಧ್ಯಾಯ್, ಅಕ್ಷದೀಪ್ ಸಿಂಗ್, ನೀಲಕಂಠ ಶರ್ಮಾ, ರೂಪಿಂದರ್ ಸಿಂಗ್, ಅಮಿತ್ ರೋಹಿದಾಸ್ ಸಿಡಿಸಿದ ಗೋಲುಗಳಿಂದ ಭಾರತ ದ್ವಿತೀಯ ಲೆಗ್‌ನಲ್ಲಿ 7-1 ಅಂತರದ ಗೆಲುವು ಸಾಧಿಸಿತು.  ಭಾರತ ಮಹಿಳಾ ತಂಡ ಯುಎಸ್ಎ ವಿರುದ್ದ 6-5 ಸರಾಸರಿ ಗೋಲುಗಳ ಅಂತರದಲ್ಲಿ ಟೊಕಿಯೊ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆಯಿತು.

click me!