ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಭಾರತೀಯ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿದೆ. ಯುಎಸ್ಎ ವಿರುದ್ದ ನಡೆದ ಮಹತ್ವದ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಮಹತ್ವಗ ಗೋಲು ಸಡಿಸಿ, ಅರ್ಹತೆ ಪಡೆದುಕೊಂಡಿತು.
ಭುಬನೇಶ್ವರ್(ನ.02): ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ರಚಿಸಿದೆ. ಭುಬನೇಶ್ವರ್‌ದಲ್ಲಿ ನಡೆದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಸ್ಎ ತಂಡವನ್ನು ಮಣಿಸಿದ ಭಾರತ ಮಹಿಳಾ ತಂಡ 2020ರ ಟೊಕಿಯೊ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದೆ.
ಇದನ್ನೂ ಓದಿ: 2020ರ ಒಲಿಂಪಿಕ್ಸ್‌ಗಿಲ್ಲ ಪಾಕಿಸ್ತಾನ ಹಾಕಿ ತಂಡ!
ಶುಕ್ರವಾರ ನಡೆದ ಮೊದಲ ಲೆಗ್ ಪಂದ್ಯದಲ್ಲಿ ಭಾರತ 5-1 ಅಂತರದಲ್ಲಿ ಯುಎಸ್‍ಎ ತಂಡವನ್ನು ಮಣಿಸಿತ್ತು. ದ್ವಿತೀಯ ಲೆಗ್‌ನಲ್ಲಿ ಭಾರತ ಹಿನ್ನಡೆ ಸಾಧಿಸಿದರೂ, ಗೋಲುಗಳ ಸರಾಸರಿ ಆಧಾರದಲ್ಲಿ ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿದೆ.
ದ್ವಿತೀಯ ಲೆಗ್‌ನ ಮೊದಲಾರ್ಧದಲ್ಲಿ ಯುಎಸ್‌ಎ 4 ಗೋಲು ಸಿಡಿಸಿತು. ದ್ವಿತೀಯಾರ್ಧದಲ್ಲಿ ಭಾರತದ ರಾಣಿ ರಾಂಪಾಲ್ 1 ಗೋಲು ಸಿಡಿಸಿ ಫಲಿತಾಂಶವನ್ನೇ ಬದಲಿಸಿದರು. ಮೊದಲ ಲೆಗ್‌ನಲ್ಲಿ 5 ಗೋಲು ಹಾಗೂ ದ್ವಿತೀಯ ಲೆಗ್‌ನಲ್ಲಿ 1 ಗೋಲು ಸಿಡಿಸೋ ಮೂಲಕ ಭಾರತ ಒಟ್ಟು 6 ಗೋಲು ಬಾರಿಸಿತು. ಇನ್ನು ಯುಎಸ್‌ಎ ಮೊದಲ ಲೆಗ್‌ನಲ್ಲಿ 1 ಹಾಗೂ ದ್ವಿತೀಯ ಲೆಗ್‌ನಲ್ಲಿ 4 ಸೇರಿದಂತೆ ಒಟ್ಟು 5 ಗೋಲು ಸಿಡಿಸಿತು. ಈ ಮೂಲಕ ಭಾರತ ಕೇವಲ 1 ಗೋಲಿನ ಅಂತರದಲ್ಲಿ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು.