
ನವದೆಹಲಿ(ಏ.05): ಕೊರೋನಾ ವಿರುದ್ಧ ಹೋರಾಟಕ್ಕೆ ಹಾಕಿ ಇಂಡಿಯಾ ಶನಿವಾರ ಹೆಚ್ಚುವರಿ 75 ಲಕ್ಷ ರು.ಗಳನ್ನು PM CARES ದೇಣಿಗೆಯಾಗಿ ನೀಡಿದೆ. ಏ.1ರಂದು ಸಂಸ್ಥೆ 25 ಲಕ್ಷ ರು.ಗಳನ್ನು ನೀಡಿತ್ತು.
‘ಭಾರತದ ಜನತೆ ಸದಾ ನಮಗೆ ಬೆಂಬಲ ನೀಡಿದ್ದಾರೆ. ಕೊರೋನಾ ಸೋಂಕನ್ನು ತಡೆಗಟ್ಟಲು ಇಡೀ ದೇಶಕ್ಕೆ ಒಟ್ಟಾಗಿ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಈ ಉದ್ದೇಶದಿಂದ ಕಾರ್ಯಕಾರಿ ಸಮಿತಿ ಹೆಚ್ಚುವರಿ ದೇಣಿಗೆ ನೀಡಲು ನಿರ್ಧರಿಸಿದೆ’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
ಕೊರೋನಾ ಸಂಕಷ್ಟ: ದೇಶಕ್ಕೆ ಬರೋಬ್ಬರಿ 51 ಕೋಟಿ ರುಪಾಯಿ ದೇಣಿಗೆ ನೀಡಿದ ಬಿಸಿಸಿಐ..!
ಹಾಕಿ ಇಂಡಿಯಾ ಯಾವಾಗಲೂ ಅಗತ್ಯವಿರುವ ಅಶಕ್ತರಿಗೆ ನೆರವಿನ ಹಸ್ತ ನೀಡುತ್ತಲೇ ಬಂದಿದೆ. ಕಾರ್ಯಕಾರಿ ಸಮಿತಿ ಒಮ್ಮತದಿಂದ ಸರ್ಕಾರಕ್ಕೆ ಒಂದು ಕೋಟಿ ರುಪಾಯಿ ಹಣ ನೀಡಲು ತೀರ್ಮಾನಿಸಿತು. ಈ ರೋಗದಿಂದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕೆ ನೆರವಾಗುವುದು ರಾಷ್ಟ್ರೀಯ ಹಿತಾದೃಷ್ಟಿಯಿಂದ ಒಳ್ಳೆಯದ್ದು ಎಂದು ಹಾಕಿ ಇಂಡಿಯಾ ಹಾಕಿ ಇಂಡಿಯಾದ ಕಾರ್ಯದರ್ಶಿ ರಾಜೀಂದರ್ ಸಿಂಗ್ ತಿಳಿಸಿದ್ದಾರೆ.
3 ವಾರ, 3 ಮೈದಾನ, ಖಾಲಿ ಕ್ರೀಡಾಂಗಣ; IPL ಆಯೋಜನೆಗೆ ಹೊಸ ಪ್ಲಾನ್!
ಇನ್ನು ಭಾರತದ ಗಾಲ್ಫ್ ಪಟು ಅನಿರ್ಬನ್ ಲಹರಿ ಪಿಎಂ ಕೇರ್ಸ್‌ಗೆ 7 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಪ್ಯಾರಾ ಶಟ್ಲರ್ ಪ್ರಮೋದ್ ಭಗತ್ ಒಂದು ಲಕ್ಷ ರುಪಾಯಿಗಳನ್ನು ಪಿಎಂ ಕೇರ್ಸ್‌ಗೆ ನೀಡಿದರೆ, ಪ್ಯಾರಾ ಹೈಜಂಪರ್ ಶರದ್ ಕುಮಾರ್ 2 ಲಕ್ಷ ರುಪಾಯಿಗಳನ್ನು ಓಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.