FIH Pro League ನ್ಯೂಜಿಲೆಂಡ್ ವಿರುದ್ದ ರೋಚಕ ಗೆಲುವು ದಾಖಲಿಸಿ ಶುಭಾರಂಭ ಮಾಡಿದ ಭಾರತ

By Kannadaprabha NewsFirst Published Oct 29, 2022, 9:16 AM IST
Highlights

ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಶುಭಾರಂಭ
ಸತತ 3 ಗೋಲು ಬಾರಿಸಿ ಮುನ್ನಡೆಯಲ್ಲಿದ್ದ ಕಿವೀಸ್‌ಗೆ ಶಾಕ್ ನೀಡಿದ ಭಾರತ
ಭಾರತ ತನ್ನ ಪಾಲಿನ ಎರಡನೇ ಪಂದ್ಯದಲ್ಲಿ ಸ್ಪೇನ್ ಸವಾಲು

ಭುವನೇಶ್ವರ್‌(ಅ.29): 2022​-23ರ ಪ್ರೊ ಲೀಗ್‌ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಶುಕ್ರವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ 4-3 ಗೋಲುಗಳಿಂದ ರೋಚಕ ಗೆಲುವು ಸಾಧಿಸಿತು. ಮಂದೀಪ್‌ 13ನೇ ನಿಮಿಷದಲ್ಲಿ ಭಾರತ ಪರ ಮೊದಲ ಗೋಲು ಬಾರಿಸಿದರು. ಆದರೆ ನ್ಯೂಜಿಲೆಂಡ್‌ ಸತತ 3 ಗೋಲು ಬಾರಿಸಿ ಮುನ್ನಡೆ ಪಡೆಯಿತು. ಬಳಿಕ 41ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌, 51 ಹಾಗೂ 56ನೇ ನಿಮಿಷದಲ್ಲಿ ಮನ್‌ಪ್ರೀತ್‌ ಗೋಲು ಬಾರಿಸಿ ಜಯಕ್ಕೆ ಕಾರಣರಾದರು.

ಅರಂಭದಲ್ಲಿ 1-3 ಗೋಲುಗಳಿಂದ ಹಿನ್ನೆಡೆ ಅನುಭವಿಸಿದ್ದ ಭಾರತ ಹಾಕಿ ತಂಡವು, ಮೂರನೇ ಕ್ವಾರ್ಟರ್ ಅಂತ್ಯದ ವೇಳಗೆ 2-3 ಗೋಲುಗಳ ಹಿನ್ನೆಡೆ ಅನುಭವಿಸಿತ್ತು. ಆದರೆ ಮನ್‌ದೀಪ್ ಸಿಂಗ್ ಕೊನೆಯ 10 ನಿಮಿಷದಲ್ಲಿ ಎರಡು ಗೋಲುಗಳನ್ನು ಬಾರಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇನ್ನು ಕೊನೆಯ 34 ಸೆಕೆಂಡ್‌ಗಳಲ್ಲಿ ಭಾರತ ಮೂರು ಪೆನಾಲ್ಟಿಕಾರ್ನರ್ ರಕ್ಷಿಸಿಕೊಳ್ಳುವಲ್ಲಿಯೂ ಯಶಸ್ವಿಯಾಯಿತು. ಈ ಮೂಲಕ ಭಾರತ ರೋಚಕವಾಗಿಯೇ ಶುಭಾರಂಭ ಮಾಡಿದೆ.  ಭಾರತ ಭಾನುವಾರ ತನ್ನ 2ನೇ ಪಂದ್ಯವನ್ನು ಸ್ಪೇನ್‌ ವಿರುದ್ಧ ಆಡಲಿದೆ.

Yesss!! India beat NZ 4-3. What a match to start the . Down 1-3 & 2-3 at end of 3rd Quarter. 2 goals from Mandeep in the last 10 mins. 3 PCs saved in the last 34 secs. Great heart & immense fight back from 🇮🇳

— Viren Rasquinha (@virenrasquinha)

ಜೋಹರ್‌ ಕಪ್‌: ಭಾರತ 7ನೇ ಬಾರಿ ಫೈನಲ್‌ಗೆ

ಜೋಹರ್‌ ಬಹ್ರು(ಮಲೇಷ್ಯಾ): ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ಸತತ 3ನೇ ಹಾಗೂ ಒಟ್ಟಾರೆ 7ನೆ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಶನಿವಾರ ಆಸ್ಪ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಶುಕ್ರವಾರ ಗ್ರೇಟ್‌ ಬ್ರಿಟನ್‌ ವಿರುದ್ಧದ ಪಂದ್ಯದಲ್ಲಿ ಭಾರತ 5-5 ಗೋಲುಗಳ ಡ್ರಾ ಸಾಧಿಸಿತು. ಮಲೇಷ್ಯಾ-ಜಪಾನ್‌ ಪಂದ್ಯ ಡ್ರಾ ಹಾಗೂ ದ.ಆಫ್ರಿಕಾ ವಿರುದ್ಧ ಆಸ್ಪ್ರೇಲಿಯಾ ಗೆದ್ದಿದ್ದು ಭಾರತ ಫೈನಲ್‌ಗೇರಲು ನೆರವಾಯಿತು.

ಪ್ರೊ ಕಬಡ್ಡಿ: ತಲೈವಾಸ್‌ಗೆ 2ನೇ ಜಯ

ಪುಣೆ: 9ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 2ನೇ ಹಂತದ ಪಂದ್ಯಗಳು ಶುಕ್ರವಾರ ಪುಣೆಯಲ್ಲಿ ಆರಂಭವಾಗಿದ್ದು, ಆರಂಭಿಕ ಪಂದ್ಯದಲ್ಲಿ ಜೈಪುರ ಪಿಂಕ್‌ಪ್ಯಾಂಥ​ರ್ಸ್‌ ವಿರುದ್ಧ ತಮಿಳ್‌ ತಲೈವಾಸ್‌ 38-27 ಅಂಕಗಳಿಂದ ಗೆಲುವು ಸಾಧಿಸಿದೆ. ತಲೈವಾಸ್‌ 7 ಪಂದ್ಯಗಳಲ್ಲಿ 2ನೇ ಜಯ ಕಂಡರೆ, ಜೈಪುರಕ್ಕೆ ಇದು ಸತತ 2ನೇ ಸೋಲು.

ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!

ಆರಂಭದಲ್ಲೇ ಜೈಪುರ ಮೇಲೆ ಸವಾರಿ ಮಾಡಿದ ತಲೈವಾಸ್‌ ಮೊದಲಾರ್ಧದಲ್ಲಿ 20-8 ಅಂಕಗಳಿಂದ ಮುನ್ನಡೆ ಗಳಿಸಿತ್ತು. ಕೊನೆ 10 ನಿಮಿಷದಲ್ಲಿ ಜೈಪುರ ತೀವ್ರ ಹೋರಾಟ ಪ್ರದರ್ಶಿಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ನರೇಂದ್ರ 13 ರೈಡ್‌ ಅಂಕದೊಂದಿಗೆ ತಲೈವಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಶುಕ್ರವಾರದ ಹರ್ಯಾಣ ಸ್ಟೀಲರ್ಸ್‌-ಪುಣೇರಿ ಪಲ್ಟನ್‌ ಪಂದ್ಯ 27-27 ಅಂಕಗಳಿಂದ ಟೈ ಆಯಿತು.

ಇಂದಿನ ಪಂದ್ಯಗಳು: 
ಬೆಂಗಳೂರು ಬುಲ್ಸ್‌-ದಬಾಂಗ್‌ ಡೆಲ್ಲಿ, ಸಂಜೆ 7.30ಕ್ಕೆ
ತೆಲುಗು ಟೈಟಾನ್ಸ್‌-ಗುಜರಾತ್‌, ರಾತ್ರಿ 8.30ಕ್ಕೆ
ಯು ಮುಂಬಾ-ಬೆಂಗಾಲ್‌, ರಾತ್ರಿ 9.30ಕ್ಕೆ

ಇಂದು ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್‌ ಟೂರ್ನಿ

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಬಿಎ)ಯು ಸ್ಟೇಟ್‌ ಅಸೋಸಿಯೇಷನ್‌ ಕಪ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಅನ್ನು ಅ.29ರಿಂದ ನ.5ರ ವರೆಗೆ ಆಯೋಜಿಸುತ್ತಿದೆ. ಪಂದ್ಯಗಳು ನಗರದ ಕಂಠೀರವ ಕ್ರೀಡಾಂಗಣದದಲ್ಲಿ ನಡೆಯಲಿದ್ದು, ಪುರುಷರ ವಿಭಾಗದಲ್ಲಿ 72, ಮಹಿಳಾ ವಿಭಾಗದಲ್ಲಿ 36 ತಂಡಗಳು ಪಾಲ್ಗೊಳ್ಳಲಿವೆ ಎಂದು ಕೆಎಸ್‌ಬಿಬಿಎ ತಿಳಿಸಿದೆ.

click me!