FIH Pro League: ಭಾರತಕ್ಕೆ ಇಂದು ಅರ್ಜೆಂಟೀನಾ ಸವಾಲು

By Kannadaprabha News  |  First Published Mar 19, 2022, 9:15 AM IST

* FIH Pro League ಟೂರ್ನಿಯಲ್ಲಿಂದು ಭಾರತಕ್ಕೆ ಅರ್ಜಿಂಟೀನಾ ಸವಾಲು

* ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಪುರುಷರ ತಂಡ

* ಕಳೆದ ಪಂದ್ಯದಲ್ಲಿ ಸ್ಪೇನ್ ವಿರುದ್ದ ಸೋಲು ಕಂಡಿರುವ ಭಾರತ


ಭುವನೇಶ್ವರ(ಮಾ.19): ಭಾರತ ಪುರುಷರ ಹಾಕಿ ತಂಡ (Indian Men's Hockey Team) ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ (FIH Pro League) ಶನಿವಾರ ಮತ್ತು ಭಾನುವಾರ(ಮಾ.19, 20) ಅರ್ಜೆಂಟೀನಾ ಸವಾಲನ್ನು ಎದುರಿಸಲಿದೆ. ಕಳೆದ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಸೋಲಂಡ ಹೊರತಾಗಿಯೂ ತನ್ನ ಬೆಂಚ್‌ ಸಾಮರ್ಥ್ಯ ಪರೀಕ್ಷಿಸುವ ಉದ್ದೇಶದಿಂದ ಕೆಲ ಹೊಸ ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಲಿದೆ.

ಆಡಿರುವ ಒಟ್ಟು 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲುಗಳೊಂದಿಗೆ 12 ಅಂಕ ಕಲೆಹಾಕಿರುವ ಭಾರತ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ವರ್ಷ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆಯಲ್ಲಿರುವ ಭಾರತ, ತನ್ನ ಲಯ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

Tap to resize

Latest Videos

undefined

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಮಾರ್ಚ್‌ 20ರಂದು ಐಎಸ್‌ಎಲ್‌ ಫೈನಲ್‌: ಶೇ.100 ಪ್ರೇಕ್ಷಕರಿಗೆ ಪ್ರವೇಶ

ಗೋವಾ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) (Indian Super League) 8ನೇ ಆವೃತ್ತಿಯ ಫೈನಲ್‌ ಪಂದ್ಯ ಭಾನುವಾರ (ಮಾ.19) ನಡೆಯಲಿದ್ದು, ಇಲ್ಲಿನ ಜವಾಹರ್‌ ಲಾಲ್‌ ನೆಹರು ಕ್ರೀಡಾಂಗಣಕ್ಕೆ ಶೇ.100ರಷ್ಟುಪ್ರೇಕ್ಷಕರಿಗೆ ಪ್ರವೇಶ ನೀಡಲು ಗೋವಾ ಸರ್ಕಾರ ಒಪ್ಪಿಗೆ ನೀಡಿದೆ. ಫೈನಲ್‌ನಲ್ಲಿ ಕೇರಳ ಬ್ಲಾಸ್ಟ​ರ್ಸ್‌ ಹಾಗೂ ಹೈದರಾಬಾದ್‌ ಎಫ್‌ಸಿ ತಂಡಗಳು ಸೆಣಸಲಿವೆ. ಕ್ರೀಡಾಂಗಣವು 19000 ಆಸನ ಸಾಮರ್ಥ್ಯ ಹೊಂದಿದ್ದು, ಈಗಾಗಲೇ ಫೈನಲ್‌ ಪಂದ್ಯದ ಟಿಕೆಟ್‌ಗಳು ಸೋಲ್ಡೌಟ್‌ ಆಗಿವೆ ಎನ್ನಲಾಗಿದೆ. 

ಕೋವಿಡ್‌ ಭೀತಿ (COVID 19) ಹಿನ್ನೆಲೆಯಲ್ಲಿ ಬಯೋಬಬಲ್‌ನೊಳಗೆ ಪಂದ್ಯಾವಳಿ ನಡೆಯುತ್ತಿದ್ದು, ಟೂರ್ನಿ ಆರಂಭದಿಂದಲೂ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಸೆಮಿಫೈನಲ್‌ನಲ್ಲಿ ಕೇರಳ ತಂಡ ಜಮ್ಷೆಡ್‌ಪುರ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿದರೆ, ಹೈದರಾಬಾದ್‌ ತಂಡ ಎಟಿಕೆ ಮೋಹನ್‌ ಬಗಾನ್‌ ವಿರುದ್ಧ ಜಯಗಳಿಸಿತ್ತು.

ಐಎನ್‌ಬಿಎಲ್‌: ಕ್ರೀಡಾ ಹಾಸ್ಟೆಲ್‌, ಬ್ಯಾಂಕ್‌ ಆಫ್‌ ಬರೋಡಾಗೆ ಜಯ

ಬೆಂಗಳೂರು: ಚೊಚ್ಚಲ ಆವೃತ್ತಿಯ 3*3 ಇಂಡಿಯನ್‌ ನ್ಯಾಷನಲ್‌ ಬಾಸ್ಕೆಟ್‌ಬಾಲ್‌ ಲೀಗ್‌(ಐಎನ್‌ಬಿಎಲ್‌)ಗೆ ಶುಕ್ರವಾರ ಚಾಲನೆ ದೊರೆತಿದ್ದು, ಕ್ರೀಡಾ ಹಾಸ್ಟೆಲ್‌ ಹಾಗೂ ಬ್ಯಾಂಕ್‌ ಆಫ್‌ ಬರೋಡ ತಂಡಗಳು ಶುಭಾರಂಭ ಮಾಡಿವೆ. 

INBL ಟೂರ್ನಿಯಲ್ಲಿ 500ಕ್ಕೂ ಹೆಚ್ಚು ಆಟಗಾರರು, 120 ತಂಡಗಳು ಭಾಗಿ!

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನ ಪುರುಷರ ವಿಭಾಗದಲ್ಲಿ ಬ್ಯಾಂಕ್‌ ಆಫ್‌ ಬರೋಡಾ ತಂಡ ಐಐಐಟಿಬಿ ಬಾಲಿನ್‌ ತಂಡದ ವಿರುದ್ಧ 21-4ರಲ್ಲಿ ಗೆದ್ದರೆ, ಕ್ರೀಡಾ ಹಾಸ್ಟೆಲ್‌ ತಂಡ ಫ್ಲೇಮ್‌ ಥ್ರೋವ​ರ್ಸ್‌ ವಿರುದ್ಧ 21-10ರಲ್ಲಿ ಜಯಿಸಿತು. ಮಹಿಳಾ ವಿಭಾಗದಲ್ಲಿ ಆಲ್‌ ಸ್ಟಾ​ರ್ಸ್‌, ಎಂವೈಎಸ್‌ ಸ್ಪಾರ್ಕ​ರ್ಸ್‌ ತಂಡಗಳು ಶುಭಾರಂಭ ಮಾಡಿದವು. ಪುರುಷರ ವಿಭಾಗದಲ್ಲಿ 54, ಮಹಿಳಾ ವಿಭಾಗದಲ್ಲಿ 16 ತಂಡಗಳು ಸ್ಪರ್ಧಿಸುತ್ತಿವೆ. ಅಂಡರ್‌ -18 ವಿಭಾಗದಲ್ಲೂ ಟೂರ್ನಿ ನಡೆಯುತ್ತಿದೆ.

ಮಹಿಳಾ ವಿಶ್ವಕಪ್‌: ಬಾಂಗ್ಲಾ ವಿರುದ್ಧ ವಿಂಡೀಸ್‌ಗೆ ಗೆಲುವು

ಮೌಂಟ್‌ ಮಾಂಗನುಯಿ: ಬ್ಯಾಟಿಂಗ್‌ ಕುಸಿತದಿಂದ ಚೇತರಿಸಿಕೊಂಡ ವೆಸ್ಟ್‌ಇಂಡೀಸ್‌, ಬೌಲಿಂಗ್‌ನಲ್ಲೂ ಆಕರ್ಷಕ ಪ್ರದರ್ಶನ ತೋರಿ ಬಾಂಗ್ಲಾದೇಶ ವಿರುದ್ಧ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. 70ಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌, ಶೆಮೈನ್‌ ಕ್ಯಾಂಬೆಲ್‌(53)ರ ಅಜೇಯ ಅರ್ಧಶತಕದ ನೆರವಿನಿಂದ 50 ಓವರಲ್ಲಿ 9 ವಿಕೆಟ್‌ಗೆ 140 ರನ್‌ ಕಲೆಹಾಕಿತು.

60ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾ, ಹೋರಾಟ ಬಿಡದೆ ಪಂದ್ಯವನ್ನು ಕೊನೆ ಓವರ್‌ ವರೆಗೂ ಕೊಂಡೊಯಿತು. ಆದರೆ 49.3 ಓವರಲ್ಲಿ 136 ರನ್‌ಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. 5 ಪಂದ್ಯಗಳಲ್ಲಿ 3 ಗೆಲುವು ಕಂಡಿರುವ ವಿಂಡೀಸ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಬಾಂಗ್ಲಾ 7ನೇ ಸ್ಥಾನದಲ್ಲಿದೆ. 

click me!