Women's Hockey World Cup 2022‌: ಭಾರತಕ್ಕೆ ಇಂಗ್ಲೆಂಡ್‌ ಮೊದಲ ಎದುರಾಳಿ

By Suvarna News  |  First Published Mar 2, 2022, 1:03 PM IST

* ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟ

* ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿ ಜುಲೈ 1ರಿಂದ 17ರ ವರೆಗೆ ನಿಗದಿ

* ಭಾರತದ ಎಲ್ಲಾ ಪಂದ್ಯಗಳಿಗೆ ನೆದರ್ಲೆಂಡ್ಸ್‌ನ ಆಮ್ಸ್‌ಟೆಲ್ವೀನ್‌ ಕ್ರೀಡಾಂಗಣ ಆತಿಥ್ಯ


ಭುವನೇಶ್ವರ(ಮಾ.02): ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ( Women's Hockey World Cup 2022‌) ಭಾರತ ಮಹಿಳಾ ತಂಡ ಜುಲೈ 3ಕ್ಕೆ ಇಂಗ್ಲೆಂಡ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌(ಎಫ್‌ಐಎಚ್‌) ಮಂಗಳವಾರ ಪ್ರಕಟಿಸಿದ್ದು, ಭಾರತ ತಂಡ ‘ಬಿ’ ಗುಂಪಿನಲ್ಲಿ ನ್ಯೂಜಿಲೆಂಡ್‌, ಇಂಗ್ಲೆಂಡ್‌, ಚೀನಾ ಜೊತೆ ಸ್ಥಾನ ಪಡೆದಿದೆ.  ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿ ಜುಲೈ 1ರಿಂದ 17ರ ವರೆಗೆ ನಿಗದಿಯಾಗಿದ್ದು, ಭಾರತ ಜುಲೈ 5ಕ್ಕೆ ಚೀನಾ ಹಾಗೂ ಜುಲೈ 7ಕ್ಕೆ ನ್ಯೂಜಿಲೆಂಡನ್ನು ಎದುರಿಸಲಿದೆ. ಭಾರತದ ಎಲ್ಲಾ ಪಂದ್ಯಗಳಿಗೆ ನೆದರ್ಲೆಂಡ್ಸ್‌ನ ಆಮ್ಸ್‌ಟೆಲ್ವೀನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ನಾವು ಯಾವ ತಂಡದ ವಿರುದ್ದ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದ್ದೇವೆ ಎನ್ನುವುದು ಮುಖ್ಯವಾಗುವುದಿಲ್ಲ. ಹಾಗೆಯೇ ನಾವು ಮೊದಲಿಗೆ ಯಾವ ಬಲಿಷ್ಠ ತಂಡವನ್ನು ಎದುರಿಸುತ್ತೇವೆ ಎನ್ನುವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಯಾವುದೇ ತಂಡವನ್ನು ಎದುರಿಸುವಾಗಲೂ ನಮ್ಮ ಮನಸ್ಥಿತಿ ಪಂದ್ಯವನ್ನು ಗೆಲ್ಲಬೇಕು ಎಂದು ಅಂದುಕೊಂಡೆ ಕಣಕ್ಕಿಳಿಯುತ್ತೇವೆ. ನಮ್ಮ ಗುರಿಯೇನಿದ್ದರೂ ಪ್ರತಿ ಪಂದ್ಯವನ್ನು ಗೆಲ್ಲಬೇಕು ಎನ್ನುವುದೇ ಆಗಿರುತ್ತದೆ ಎಂದು ಭಾರತ ಹಾಕಿ ತಂಡದ ಆಟಗಾರ್ತಿ ಸುಶೀಲಾ ಚಾನು ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ತಿಳಿಸಿದ್ದಾರೆ. 

Tap to resize

Latest Videos

undefined

ನಾವು ಇತ್ತೀಚೆಗೆ ಮಸ್ಕಟ್‌ನಲ್ಲಿ ನಡೆದ 2022ರ ಮಹಿಳಾ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಚೀನಾ, ಒಮಾನ್‌ ತಂಡಗಳನ್ನು ಎದುರಿಸಿದ್ದೇವೆ. ಇದು ನಮಗೆ ಎಫ್‌ಐಎಚ್‌ ಮಹಿಳಾ ಹಾಕಿ ವಿಶ್ವಕಪ್‌ ಟೂರ್ನಿ ಮತ್ತಷ್ಟು ಆತ್ಮವಿಶ್ವಾಸದಿಂದ ಪಾಲ್ಗೊಳ್ಳಲು ನೆರವಾಗಲಿದೆ. 2021-22ರ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಮುಂದಿನ ತಿಂಗಳು ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದೇವೆ. ನಾವು 2020ರಲ್ಲಿ ನ್ಯೂಜಿಲೆಂಡ್ ವಿರುದ್ದ ಕೂಡಾ ಸೆಣಸಾಡಿದ್ದೇವೆ. ಈ ಎಲ್ಲಾ ತಂಡಗಳು ಉತ್ತಮ ಪ್ರದರ್ಶನವನ್ನು ತೋರಿವೆ. ಹೀಗಾಗಿ ಮುಂಬರುವ ಸವಾಲುಗಳನ್ನು ನಾವು ಯಾವ ರೀತಿ ಎದುರಿಸಬೇಕೆಂದು ನಮಗೆ ಗೊತ್ತಿದೆ ಎಂದು ಅನುಭವಿ ಹಾಕಿ ಆಟಗಾರ್ತಿ ಸುಶೀಲಾ ಚಾನು ತಿಳಿಸಿದ್ದಾರೆ. 

Russia Ukraine Crisis: ರಷ್ಯಾಗೆ ಕ್ರೀಡಾ ಲೋಕದಿಂದ ಮತ್ತಷ್ಟು ನಿರ್ಬಂಧ

ನಮ್ಮ ಮಹಿಳಾ ಹಾಕಿ ತಂಡವು ಕಳೆದ ಕೆಲ ವರ್ಷಗಳಿಂದಲೂ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡಿದೆ. ಇದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಎರಡು ಮೂರು ವರ್ಷಗಳ ಹಿಂದೆ ನಾವು ಬಲಿಷ್ಠ ತಂಡವನ್ನು ಎದುರಿಸುವಾಗ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿದ್ದೆವು. ಆದರೆ ಇದೀಗ ನಮ್ಮ ತಂಡದಲ್ಲಿ ಯಾವುದೇ ಭಯವಿಲ್ಲ. ನಾವೀಗ ಎಂತಹದ್ದೇ ಕಠಿಣ ಸವಾಲನ್ನು ಸ್ವೀಕರಿಸಲು ಸಿದ್ದರಿದ್ದೇವೆ. ಒಂದು ವೇಳೆ ಎದುರಾಳಿ ತಂಡವೇ ಮೊದಲು ಗೋಲು ಬಾರಿಸಿದರೂ ಸಹಾ ನಾವು ಒತ್ತಡಕ್ಕೆ ಒಳಗಾಗುವುದಿಲ್ಲ. ಯಾಕೆಂದರೆ ನಾವೂ ಕೂಡಾ ಕಮ್‌ಬ್ಯಾಕ್ ಮಾಡುವಷ್ಟು ಕೌಶಲ್ಯವನ್ನು ಹೊಂದಿದ್ದೇವೆ ಎಂದು ಭಾರತದ ಹಾಕಿ ಆಟಗಾರ್ತಿ ನವನೀತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ. 

ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಸೌರಭ್‌ಗೆ ಚಿನ್ನ

ಕೈರೋ: ಈಜಿಪ್ಟ್‌ನ ಕೈರೋದಲ್ಲಿ ನಡೆಯುತ್ತಿರುವ ವರ್ಷದ ಮೊದಲ ಶೂಟಿಂಗ್‌ ವಿಶ್ವಕಪ್‌ನಲ್ಲಿ (Shooting World Cup) ಭಾರತದ ಸೌರಭ್‌ ಚೌಧರಿ ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ 19 ವರ್ಷದ ಸೌರಭ್‌ ಜರ್ಮನಿಯ ಮಿಚೆಲ್‌ ಶ್ವಾಲ್ಡ್‌ರನ್ನು ಹಿಂದಿಕ್ಕಿ ಬಂಗಾರಕ್ಕೆ ಕೊರಳೊಡ್ಡಿದರು.

ಕಿರಿಯರ ಒಲಿಂಪಿಕ್ಸ್‌ನ ಚಿನ್ನ ವಿಜೇತ ಸೌರಭ್‌ ಅರ್ಹತಾ ಸುತ್ತಿನಲ್ಲಿ 584 ಅಂಕದೊಂದಿಗೆ 3ನೇ ಸ್ಥಾನ ಪಡೆದಿದ್ದರು. ಇನ್ನು, ತಮ್ಮ ದೇಶದ ಬಾವುಟಕ್ಕೆ ಅವಕಾಶವಿಲ್ಲದಿದ್ದರೂ ಸ್ಪರ್ಧಿಸಿದ ರಷ್ಯಾದ ಆರ್ಟೆಮ್‌ ಚೆರ್‌ನೌಸವ್‌ ಕಂಚು ಗೆದ್ದರು.

ಜಿಮ್ನಾಸ್ಟಿಕ್ಸ್‌ ಪಟು ದೀಪಾ ಅಮಾನತು: ಆಘಾತ!

ನವವದೆಹಲಿ: 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ 4ನೇ ಸ್ಥಾನ ಪಡೆದಿದ್ದ ಭಾರತದ ತಾರಾ ಜಿಮ್ನಾಸ್ಟಿಕ್ಸ್‌ ಪಟು ದೀಪಾ ಕರ್ಮಕಾರ್‌ರನ್ನು (Dipa Karmakar) ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್‌ ಫೆಡರೇಷನ್‌(ಎಫ್‌ಐಜಿ) ಅಮಾನತುಗೊಳಿಸಿದೆ. ಆದರೆ ಯಾವ ಕಾರಣಕ್ಕೆ ಅಮಾನತು ಮಾಡಲಾಗಿದೆ ಎನ್ನುವುದನ್ನು ಜಾಗತಿಕ ಒಕ್ಕೂಟವು ತಿಳಿಸಿಲ್ಲ. 

ಗಾಯದ ಸಮಸ್ಯೆಯಿಂದಾಗಿ 28 ವರ್ಷದ ದೀಪಾ ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಪಾಲ್ಗೊಂಡಿರಲಿಲ್ಲ. ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ರಾಷ್ಟ್ರೀಯ ಶಿಬಿರದಲ್ಲೂ ಪಾಲ್ಗೊಂಡಿಲ್ಲ. ಈ ಬೆಳವಣಿಗೆ ಬಗ್ಗೆ ದೀಪಾ ಕರ್ಮಕಾರ್‌ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

click me!