Asian Games 2023 ದಕ್ಷಿಣ ಕೊರಿಯ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ..!

By Naveen Kodase  |  First Published Oct 4, 2023, 5:18 PM IST

ಭಾರತ ಪರ ಹಾರ್ದಿಕ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಧ್ಯಾಯ್, ಅಮಿತ್ ರೋಹಿದಾಸ್ ಹಾಗೂ ಅಭಿಷೇಕ್ ಬಾರಿಸಿದ ಆಕರ್ಷಕ ಗೋಲುಗಳು ತಂಡವನ್ನು ಸುಲಭವಾಗಿ ಫೈನಲ್‌ಗೇರುವಂತೆ ಮಾಡಿದವು. ಭಾರತದ ಪ್ರಬಲ ಎದುರಾಳಿ ಎಂದೇ ಬಿಂಬಿತವಾಗಿದ್ದ ದಕ್ಷಿಣ ಕೊರಿಯ ಎದುರು ಮೊದಲ ಕ್ವಾರ್ಟರ್‌ನಲ್ಲೇ ಆಕ್ರಮಣಕಾರಿ ಆಟವಾಡುವ ಮೂಲಕ ಮುನ್ನಡೆ ಗಳಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 3 ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. 


ಹಾಂಗ್ಝೂ(ಅ.04): ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಚಿನ್ನದ ಪದಕ ಗೆಲ್ಲುವ ಕನಸಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. ಸೆಮಿಫೈನಲ್‌ನಲ್ಲಿ ಭಾರತ ಹಾಕಿ ತಂಡವು 5-3 ಗೋಲುಗಳ ಅಂತರದಲ್ಲಿ ದಕ್ಷಿಣ ಕೊರಿಯವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.

ಭಾರತ ಪರ ಹಾರ್ದಿಕ್ ಸಿಂಗ್, ಮನ್ದೀಪ್ ಸಿಂಗ್, ಲಲಿತ್ ಉಪಧ್ಯಾಯ್, ಅಮಿತ್ ರೋಹಿದಾಸ್ ಹಾಗೂ ಅಭಿಷೇಕ್ ಬಾರಿಸಿದ ಆಕರ್ಷಕ ಗೋಲುಗಳು ತಂಡವನ್ನು ಸುಲಭವಾಗಿ ಫೈನಲ್‌ಗೇರುವಂತೆ ಮಾಡಿದವು. ಭಾರತದ ಪ್ರಬಲ ಎದುರಾಳಿ ಎಂದೇ ಬಿಂಬಿತವಾಗಿದ್ದ ದಕ್ಷಿಣ ಕೊರಿಯ ಎದುರು ಮೊದಲ ಕ್ವಾರ್ಟರ್‌ನಲ್ಲೇ ಆಕ್ರಮಣಕಾರಿ ಆಟವಾಡುವ ಮೂಲಕ ಮುನ್ನಡೆ ಗಳಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 3 ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. 

INDIA, your team is through to the GRAND FINALE of , with 63 goals scored, 8 goals conceded in 6 matches, there's just 1 last battle to be won to take shot at the gold medal glory! Let's go, ! 🇮🇳 … pic.twitter.com/lrpuJKM1t5

— Hockey India (@TheHockeyIndia)

Latest Videos

undefined

ಮೊದಲ ಕ್ವಾರ್ಟರ್‌ನ 5ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಗೋಲು ಬಾರಿಸುವ ಮೂಲಕ ಆರಂಭದಲ್ಲೇ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಇನ್ನು 11ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ನೀಡಿದ ಪಾಸ್‌ ಅನ್ನು ಮನ್ದೀಪ್ ಸಿಂಗ್ ಗೋಲು ಪೆಟ್ಟಿಗೆ ಸೇರಿಸಿ ಅಂತರವನ್ನು 2-0ಗೆ ಹೆಚ್ಚಿಸಿದರು. ಇನ್ನು ಮೊದಲ ಕ್ವಾರ್ಟರ್ ಮುಕ್ತಾಯಕ್ಕೆ ಕೆಲವೇ ಸೆಕೆಂಡ್‌ಗಳು ಬಾಕಿ ಇರುವಾಗ ಹರ್ಮನ್‌ಪ್ರೀತ್ ಸಿಂಗ್ ನೀಡಿದ ಪಾಸ್‌ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಲಲಿತ್ ಯಶಸ್ವಿಯಾದರು.

Asian Games 2023 ಇಂದು ನೀರಜ್‌ ಸ್ಪರ್ಧೆ: ಬಂಗಾರವೇ ಟಾರ್ಗೆಟ್‌

ಇನ್ನು ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ದಕ್ಷಿಣ ಕೊರಿಯ ಪರ ಜುಂಗ್ ಮಂಜಿ ಗೋಲು ಬಾರಿಸಿದರು. ಇನ್ನು 20ನೇ ನಿಮಿಷದಲ್ಲಿ ಕೊರಿಯಾದ ಪರ ಜುಂಗ್ ಮಂಜಿ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಇನ್ನು ಎರಡನೇ ಕ್ವಾರ್ಟರ್‌ನ 24ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್‌ ಗೋಲು ಬಾರಿಸಿ ಭಾರತದ ಅಂತರವನ್ನು 4-2ಕ್ಕೆ ಹೆಚ್ಚಿಸಿದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 4-2 ಗೋಲುಗಳ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

Asian Games ಭಾರತ ಪರ ಪಾದಾರ್ಪಣೆ ಮಾಡಿ ರಾಷ್ಟ್ರಗೀತೆ ಹಾಡುವಾಗ ಆನಂದ ಭಾಷ್ಪ ಸುರಿಸಿದ ಆರ್ ಸಾಯಿ ಕಿಶೋರ್..!

ಇನ್ನು ಮೂರನೇ ಕ್ವಾರ್ಟರ್‌ನಲ್ಲಿ ಗುರ್ಜಂತ್ ಆಕರ್ಷಕ ಗೋಲು ಸಿಡಿಸಿದರು. ಇದಾದ ಬಳಿಕ ಜುಂಗ್ ಮಂಜಿ ಮತ್ತೊಂದು ಗೋಲು ಬಾರಿಸಿದರು. ಆ ಬಳಿಕ ದಕ್ಷಿಣ ಕೊರಿಯ ಪ್ರಬಲ ಪೈಪೋಟಿ ನೀಡಿತಾದರೂ ಭಾರತ ಗೋಲು ಬಾರಿಸಲು ಅವಕಾಶ ನೀಡಲಿಲ್ಲ.
 

click me!