ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಫೈಟ್..!

By Kannadaprabha NewsFirst Published Aug 9, 2023, 2:18 PM IST
Highlights

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಸೆಮೀಸ್ ಸ್ಥಾನ ಖಚಿತಪಡಿಸಿಕೊಂಡಿರುವ ಭಾರತ ಇಂದು ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯಲಿದೆ

ಚೆನ್ನೈ(ಆ.09): ಈಗಾಗಲೇ 3 ಗೆಲುವಿನೊಂದಿಗೆ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿರುವ 3 ಬಾರಿಯ ಚಾಂಪಿಯನ್ ಭಾರತ ತಂಡ, ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಬುಧವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಸೆಣಸಾಡಲಿದೆ.

ಆತಿಥೇಯ ಭಾರತ ಟೂರ್ನಿಯಲ್ಲಿ 4 ಪಂದ್ಯಗಳನ್ನಾಡಿದ್ದು, ಜಪಾನ್ ವಿರುದ್ದದ ಡ್ರಾ ಹೊರತುಪಡಿಸಿ ಉಳಿದ 3 ಪಂದ್ಯಗಳಲ್ಲಿ ಚೀನಾ, ಮಲೇಷ್ಯಾ, ದಕ್ಷಿಣ ಕೊರಿಯಾ ವಿರುದ್ದ ಗೆದ್ದಿದೆ. ಒಟ್ಟು 10 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಅತ್ತ ಪಾಕಿಸ್ತಾನ ತಂಡವು ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಜಯ, ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿ ಮತ್ತೊಂದು ಪಂದ್ಯದಲ್ಲಿ ಸೋಲನನ್ನುಭವಿಸಿ ಕೇವಲ 5 ಅಂಕ ಪಡೆದಿದೆ. ಹೀಗಾಗಿ ಪಾಕಿಸ್ತಾನ ತಂಡಕ್ಕೆ ಸೆಮೀಸ್‌ ಸ್ಥಾನ ಖಚಿತಪಡಿಸಿಕೊಳ್ಳಬೇಕಾದರೆ ಭಾರತ ವಿರುದ್ದ ಕನಿಷ್ಠ ಡ್ರಾ ಆದರೂ ಸಾಧಿಸಬೇಕು. 

ಒಂದು ವೇಳೆ ಭಾರತ ಎದುರು ಪಾಕಿಸ್ತಾನ ಸೋತರೆ, ಅತ್ತ ಚೀನಾ(01 ಅಂಕ) ವಿರುದ್ದದ ಪಂದ್ಯದಲ್ಲಿ ಜಪಾನ್(02 ಅಂಕ) ಗೆಲ್ಲಬಾರದು. ಒಂದು ವೇಳೆ ಪಾಕಿಸ್ತಾನವು ಸೆಮೀಸ್‌ಗೇರಿದರೆ, ಮತ್ತೊಮ್ಮೆ ಅಂತಿಮ ನಾಲ್ಕರ ಘಟ್ಟದಲ್ಲಿ ಪಾಕಿಸ್ತಾನ ಎದುರಾಗುವ ಸಾಧ್ಯತೆಯಿದೆ. ಬುಧವಾರ ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ(09) ಹಾಗೂ ಕೊರಿಯಾ(05) ಸೆಣಸಾಡಲಿದ್ದು, ಹಾಲಿ ಚಾಂಪಿಯನ್ ಕೊರಿಯಾ ಸೆಮೀಸ್‌ಗೇರಬೇಕಿದ್ದರೆ ಜಯ ಅಗತ್ಯವಿದೆ. 

ವಿಶ್ವ ವಿವಿ ಗೇಮ್ಸ್‌ನಲ್ಲಿ 26 ಪದಕ ಗೆದ್ದ ಭಾರತ; ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ..!

ಭಾರತದ ಪಂದ್ಯ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಫ್ಯಾನ್ ಕೋಡ್.

ಏಷ್ಯನ್ ಗೇಮ್ಸ್‌: ಸೆಪ್ಟೆಂಬರ್ 30ರಂದು ಭಾರತ vs ಪಾಕಿಸ್ತಾನ ಹಾಕಿ..!

ನವದೆಹಲಿ: ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹಾಕಿಯಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಸೆಪ್ಟೆಂಬರ್ 30ರಂದು ಪರಸ್ಪರ ಮುಖಾಮುಖಿಯಾಗಲಿವೆ. ಟೂರ್ನಿಯ 'ಎ' ಗುಂಪಿನಲ್ಲಿ ಇವೆರಡು ತಂಡಗಳ ಜತೆಗೆ ಜಪಾನ್, ಬಾಂಗ್ಲಾದೇಶ, ಸಿಂಗಾಪೂರ, ಉಜ್ಬೇಕಿಸ್ತಾನ ತಂಡಗಳು ಕೂಡಾ ಸ್ಥಾನ ಪಡೆದಿವೆ.

ಸೆಪ್ಟೆಂಬರ್ 24ಕ್ಕೆ ಉಜ್ಬೇಕಿಸ್ತಾನ ವಿರುದ್ದ ಭಾರತ ಕಣಕ್ಕಿಳಿಯುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇದಾದ ಬಳಿಕ ಸೆಪ್ಟೆಂಬರ್ 26ಕ್ಕೆ ಸಿಂಗಾಪೂರ ವಿರುದ್ದ, ಸೆಪ್ಟೆಂಬರ್ 28ಕ್ಕೆ ಜಪಾನ್, ಅಕ್ಟೋಬರ್ 02ಕ್ಕೆ ಬಾಂಗ್ಲಾದೇಶ ವಿರುದ್ದ ಸೆಣಸಾಡಲಿದೆ. 

ಕಾಶ್ಮೀರಿ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರ್ಫರಾಜ್ ಖಾನ್..! ಇಲ್ಲಿವೆ ನೋಡಿ ಮದುವೆ ಫೋಟೋಗಳು

ಇನ್ನು ಭಾರತ ಮಹಿಳಾ ಹಾಕಿ ತಂಡವು ಕೂಡಾ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಹಾಂಕಾಂಗ್, ಸಿಂಗಾಪೂರ, ದಕ್ಷಿಣ ಕೊರಿಯಾ ಹಾಗೂ ಮಲೇಷ್ಯಾ ಜತೆ ಗುಂಪು ಹಂತದಲ್ಲಿ ಸೆಣಸಾಡಲಿವೆ. ಪುರುಷರ ಹಾಕಿ ಫೈನಲ್ ಪಂದ್ಯ ಅಕ್ಟೋಬರ್ 06ಕ್ಕೆ ನಿಗದಿಯಾಗಿದ್ದರೆ, ಮಹಿಳಾ ಹಾಕಿ ಫೈನಲ್‌ ಅಕ್ಟೋಬರ್ 07ಕ್ಕೆ ನಿಗದಿಯಾಗಿದೆ.

ಭಾರತದ ಕಿರಿಯರ ಹಾಕಿ ತಂಡಕ್ಕೆ ಹೆರ್ಮನ್‌ ಕೋಚ್

ನವದೆಹಲಿ: ಭಾರತ ಕಿರಿಯರ ಪುರುಷ ಹಾಗೂ ಮಹಿಳಾ ಹಾಕಿ ತಂಡಕ್ಕೆ ನೆದರ್‌ಲೆಂಡ್ಸ್‌ನ ಹೆರ್ಮನ್‌ ಕ್ರೂಸ್ ಕೋಚ್ ಅಗಿ ನೇಮಕವಾಗಿದ್ದಾರೆ. ಹೆರ್ಮನ್ ಈ ಮೊದಲು 2006ರಿಂದ 2010ರ ವರೆಗೆ ನೆದರ್‌ಲೆಂಡ್ಸ್‌ ಮಹಿಳಾ ತಂಡಕ್ಕೆ ಕೋಚ ಆಗಿದ್ದರು. ಕಳೆದ 7 ವರ್ಷಗಳಿಂದ ಅವರು ಬೆಲಾರಸ್ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ನವೆಂಬರ್ 19ರಿಂದ ಡಿಸೆಂಬರ್ 10ರ ವರೆಗೆ ಕಿರಿಯ ಮಹಿಳಾ ವಿಶ್ವಕಪ್‌ ನಡೆಯಲಿದೆ. ಈ ಟೂರ್ನಿಗೆ ಭಾರತ ಕಿರಿಯರ ಹಾಕಿ ತಂಡವನ್ನು ತಯಾರು ಮಾಡುವ ಹೊಣೆ ಕ್ರೂಸ್ ಮೇಲಿದೆ.

click me!