Asian Hockey Champions Trophy: ಇಂದಿನಿಂದ ಏಷ್ಯನ್‌ ಹಾಕಿ ಕೂಟ, ಟೂರ್ನಿಗೆ ಚೆನ್ನೈ ಆತಿಥ್ಯ..!

By Kannadaprabha News  |  First Published Aug 3, 2023, 9:48 AM IST

7ನೇ ಆವೃತ್ತಿಯ ಏಷ್ಯನ್‌ ಹಾಕಿ ಚಾಂಪಿಯನ್‌ಶಿಪ್‌ಗೆ ಚೆನ್ನೈ ಆತಿಥ್ಯ
ಚೀನಾ ವಿರುದ್ದ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿರುವ ಭಾರತ
ಪ್ರತಿ ತಂಡಗಳು ಲೀಗ್‌ ಹಂತದಲ್ಲಿ ತಲಾ 1 ಬಾರಿ ಮುಖಾಮುಖಿಯಾಗಲಿವೆ


ಚೆನ್ನೈ(ಆ.03): 7ನೇ ಆವೃತ್ತಿಯ ಏಷ್ಯನ್‌ ಪುರುಷರ ಹಾಕಿ ಚಾಂಪಿಯನ್‌ಶಿಪ್‌ಗೆ ಚೆನ್ನೈನಲ್ಲಿ ಗುರುವಾರ ಚಾಲನೆ ಸಿಗಲಿದ್ದು, ಆತಿಥೇಯ ಭಾರತ, ಚೀನಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಏಷ್ಯನ್‌ ಗೇಮ್ಸ್‌ಗೂ ಮುನ್ನ ತಂಡದ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಭಾರತಕ್ಕೆ ಈ ಕೂಟ ಮಹತ್ವದ್ದಾಗಿದೆ. ಕೂಟದಲ್ಲಿ ಚೀನಾ, ಪಾಕಿಸ್ತಾನ, ಜಪಾನ್‌, ಮಲೇಷ್ಯಾ, ದ.ಕೊರಿಯಾ ತಂಡಗಳೂ ಪಾಲ್ಗೊಳ್ಳಲಿದ್ದು, ಪ್ರತಿ ತಂಡಗಳು ಲೀಗ್‌ ಹಂತದಲ್ಲಿ ತಲಾ 1 ಬಾರಿ ಮುಖಾಮುಖಿಯಾಗಲಿವೆ. 

ಭಾರತ 2ನೇ ಪಂದ್ಯವನ್ನು ಜಪಾನ್‌ ವಿರುದ್ಧ ಆಗಸ್ಟ್ 4ಕ್ಕೆ ಆಡಲಿದ್ದು, ಬಳಿಕ ಮಲೇಷ್ಯಾ(ಆ.6), ದ.ಕೊರಿಯಾ(ಆ.7) ಹಾಗೂ ಪಾಕಿಸ್ತಾನ ವಿರುದ್ಧ ಆ.9ಕ್ಕೆ ಸೆಣಸಾಡಲಿದೆ. ಲೀಗ್‌ ಹಂತದ ಕೊನೆಯಲ್ಲಿ ಅಗ್ರ 4 ತಂಡಗಳು ಸೆಮೀಸ್‌ಗೇರಲಿವೆ. ಫೈನಲ್‌ ಪಂದ್ಯ ಆ.12ಕ್ಕೆ ನಿಗದಿಯಾಗಿದೆ.

Latest Videos

undefined

3 ಬಾರಿ ಪ್ರಶಸ್ತಿ ಗೆದ್ದಿದೆ ಭಾರತ

ಟೂರ್ನಿ 2011ರಲ್ಲಿ ಆರಂಭಗೊಂಡಿದ್ದು, ಇದೇ ಮೊದಲ ಬಾರಿ ಭಾರತ ಆತಿಥ್ಯ ವಹಿಸುತ್ತಿದೆ. ಭಾರತ ಈವರೆಗೆ 3 ಬಾರಿ ಚಾಂಪಿಯನ್‌ ಎನಿಸಿಕೊಂಡಿದೆ. 2011, 2016ರಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ, 2018ರಲ್ಲಿ ಪಾಕಿಸ್ತಾನ ಜೊತೆ ಟ್ರೋಫಿ ಹಂಚಿಕೊಂಡಿತ್ತು. ಪಾಕ್‌ ಕೂಡಾ 3 ಬಾರಿ ಚಾಂಪಿಯನ್‌ ಆಗಿದೆ.

ಸೆಕ್ಸ್‌ ಹಗರಣದಲ್ಲಿ ಸಿಕ್ಕಿಬಿದ್ದ ಟಾಪ್ 5 ಸ್ಟಾರ್ ಕ್ರಿಕೆಟಿಗರು..! ಇವರೇನು ಸಾಮಾನ್ಯ ಕ್ರಿಕೆಟಿಗರಲ್ಲ..!

ಒಲಿಂಪಿಕ್‌ ಅರ್ಹತೆಗಾಗಿ ಪಾಕ್‌ನಲ್ಲಿ ಹಾಕಿ ಆಡಲು ಹೋಗ್ತೇವೆ: ದಿಲೀಪ್‌ ಟಿರ್ಕಿ

ನವದೆಹಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆಲ್ಲಲು ವಿಫಲವಾದರೆ, ಒಲಿಂಪಿಕ್ಸ್‌ ಅರ್ಹತಾ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಹೋಗುತ್ತೇವೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕಿ ಹೇಳಿದ್ದಾರೆ. ಏಷ್ಯಾಡ್‌ನಲ್ಲಿ ಚಾಂಪಿಯನ್‌ ಆದರೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಸಿಗಲಿದ್ದು, ಅಲ್ಲದಿದ್ದರೆ ಪಾಕ್‌ ಮತ್ತು ಸ್ಪೇನ್‌ನಲ್ಲಿ ನಡೆಯಲಿರುವ ಅರ್ಹತಾ ಟೂರ್ನಿಯಲ್ಲಿ ಆಡಬೇಕು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಲೀಪ್‌, ‘ಏಷ್ಯಾಡ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯಿದೆ. ಇದು ಸಾಧ್ಯವಾಗದಿದ್ದರೆ ಅರ್ಹತಾ ಟೂರ್ನಿಯಲ್ಲಿ ಆಡಬೇಕಾಗುತ್ತದೆ. ಹೀಗಾದರೆ ಪಾಕ್‌, ಸ್ಪೇನ್‌ಗೆ ಖಂಡಿತಾ ಹೋಗುತ್ತೇವೆ’ ಎಂದಿದ್ದಾರೆ.

'ನಾವೇನೂ ಲಕ್ಸುರಿ ಕೇಳುತ್ತಿಲ್ಲ, ಕನಿಷ್ಠ ಮೂಲ ಸೌಕರ್ಯ ಕೊಡಿ': ವಿಂಡೀಸ್ ಮಂಡಳಿ ಮೇಲೆ ಕಿಡಿಕಾರಿದ ಹಾರ್ದಿಕ್‌ ಪಾಂಡ್ಯ

ಸಿಂಧು, ಶ್ರೀಕಾಂತ್‌ 2ನೇ ಸುತ್ತಿಗೆ ಲಗ್ಗೆ

ಸಿಡ್ನಿ: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು, ಭಾರತದವರೇ ಆದ ಅಶ್ಮಿತಾ ಛಲಿಹಾ ವಿರುದ್ಧ 21-18, 21-13 ಸುಲಭ ಜಯಗಳಿಸಿದರು. 

ಪುರುಷರ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು 21-18, 21-7ರಿಂದ ಸೋಲಿಸಿದರೆ, ಪ್ರಣಯ್‌ ಹಾಂಕಾಂಗ್‌ನ ಚ್ಯುಕ್‌ ಯು ಲೀ ವಿರುದ್ಧ 21-18, 16-21, 21-15ರಲ್ಲಿ ಜಯಗಳಿಸಿದರು. ಯುವ ಪ್ರತಿಭೆಗಳಾದ ಮಿಥುನ್‌ ಮಂಜುನಾಥ್‌, ವಿಶ್ವ ನಂ.7, ಸಿಂಗಾಪೂರದ ಲೊಹ್‌ ಕೀನ್‌ ಯೆವ್‌ಗೆ ಸೋಲಿನ ಆಘಾತ ನೀಡಿದರು. ಪ್ರಿಯಾನ್ಶು ರಾಜಾವತ್‌ ಕೂಡಾ 2ನೇ ಸುತ್ತಿಗೇರಿದರು. ಆದರೆ ಲಕ್ಷ್ಯ ಸೇನ್‌ ಗಾಯಗೊಂಡು ಟೂರ್ನಿಯಿಂದ ಹೊರನಡೆದರು.

click me!