ಕೊಡವ ಕೌಟುಂಬಿಕ ಹಾಕಿ ನಮ್ಮೆ: ಮಾತಂಡ, ನಾಪಂಡ, ಮಂಡೆಪಂಡಕ್ಕೆ ಮುನ್ನಡೆ

By Kannadaprabha News  |  First Published Mar 31, 2023, 7:16 AM IST

ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ
ಮಾತಂಡ, ಮಂಡೆಪಂಡ, ಕುಪ್ಪಂಡ ಸೇರಿ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶ
ನಾಪಂಡ ತಂಡವು ಚೇಂದಂಡ ತಂಡದ ವಿರುದ್ದ 2-0 ಅಂತರದಿಂದ ಗೆಲುವು
 


ದುಗ್ಗಳ ಸದಾನಂದ, ಕನ್ನಡಪ್ರಭ 

ನಾಪೋಕ್ಲು(ಮಾ.31): ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ಮಾತಂಡ, ಮಂಡೆಪಂಡ, ಕುಪ್ಪಂಡ (ಕೈಕೇರಿ), ಪುಟ್ಟಿಚಂಡ, ಪಟ್ಟಡ, ನಾಪಂಡ ಸೇರಿದಂತೆ ಹಲವು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.

Tap to resize

Latest Videos

undefined

ಮೈದಾನ ಒಂದರಲ್ಲಿ ನಡೆದ ಪಂದ್ಯದಲ್ಲಿ ಮಾತಂಡ ತಂಡವು ಚೇನಂಡಡ ತಂಡದ ವಿರುದ್ಧ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಮಂಡೆಪಂಡ ತಂಡವು ಕಡೆಮಾಡ ತಂಡದ ವಿರುದ್ಧ 2- 0 ಅಂತರದ ಜಯ ಸಾಧಿಸಿತು. ಕುಪ್ಪಂಡ (ಕೈಕೇರಿ ತಂಡವು )ಬಿದ್ದಾಟಂಡ ವಿರುದ್ಧ 3- 0 ಅಂತರದ ಗೆಲುವು ಸಾಧಿಸಿ ಮುನ್ನಡೆ ಪಡೆಯಿತು. ಪುಟ್ಟಿಚಂಡ ಕಾವಡಿಚಂಡ ತಂಡದ ವಿರುದ್ಧ 3- 1 ಅಂತರದ ಗೆಲುವು ಸಾಧಿಸಿತು. ಪಟ್ಟಡ ತಂಡವು ಬಲಚಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ನಾಪಂಡ ತಂಡವು ಚೇಂದಂಡ ತಂಡದ ವಿರುದ್ದ 2-0 ಅಂತರದಿಂದ ಗೆಲುವು ಸಾಧಿಸಿತು. ಕಲಿಯಂಡ ಮತ್ತು ಕೋಣಿಯಂಡ ತಂಡಗಳ ನಡುವಿನ ಪಂದ್ಯ ಮುಂದೂಡಲ್ಪಟ್ಟಿತು.

ಮೈದಾನ ಎರಡರಲ್ಲಿ ಪುಲ್ಲಂಗಡ ತಂಡವು 4- 0 ಅಂತರದಿಂದ ಅದೇಂಗಡ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಕಂಬಿರಂಡ ಒಂದು ಗೋಲು ಗಳಿಸಿ ಮಚ್ಚಾರಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಕಲ್ಲಿಚಂಡ ತಂಡವು ಕಂಗಡ ತಂಡದ ವಿರುದ್ಧ 2- 0 ಅಂತರದ ಗೆಲುವು ಸಾಧಿಸಿದರೆ ಕರಿನೆರವಂಡ ತಂಡ ಕರವಂಡ ತಂಡದ ವಿರುದ್ಧ 2- 0 ಅಂತರದ ಜಯ ಸಾಧಿಸಿತು. ಬೊಳ್ಳಂಡ ತಂಡವು ಅಪ್ಪಡೇರಂಡ ತಂಡದ ವಿರುದ್ಧ 3- 0 ಅಂತರದ ಗೆಲುವು ಸಾಧಿಸಿತು ಮನೆಯಪಂಡ ತಂಡ ಚೀಯಕಪೂವಂಡ ತಂಡದ ವಿರುದ್ಧ ಸೋಲನ್ನು ಅನುಭವಿಸಿತು. ಬೊಟ್ಟೋಳಂಡ ತಂಡವು ಕುಲ್ಲಚಂಡ ತಂಡದ ವಿರುದ್ಧ 1-0 ಅಂತರದ ಜಯ ಸಾಧಿಸಿತು. ಚಪ್ಪಂಡ ಮತ್ತು ನಾಳಿಯಂಡ ತಂಡಗಳ ನಡುವೆ ಪಂದ್ಯ ಮುಂದೂಡಲ್ಪಟ್ಟಿತು.

ಕೊಡವ ಕೌಟುಂಬಿಕ ಹಾಕಿ: ಚೋಕಿರ, ಅಜ್ಜಮಾಡ ತಂಡಗಳಿಗೆ ಗೆಲುವು

ಮೈದಾನ ಮೂರರಲ್ಲಿ ನಡೆದ ಪಂದ್ಯದಲ್ಲಿ ಬಿದ್ದಂಡ ತಂಡವು ಅರೆಯಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಮಣವಟ್ಟಿರ ತಂಡಕ್ಕೆ ಪಟ್ಟಮಾಡ ತಂಡದ ವಿರುದ್ಧ ಜಯ ಲಭಿಸಿತು. ಕೊಂಗೇಟಿರ ವರು ಬೇರೆರ ತಂಡದ ವಿರುದ್ಧ 2- 0 ಅಂತರದ ಗೆಲುವು ಸಾಧಿಸಿದರೆ, ಯಾವುದೇ ಗೋಲು ಗಳಿಸದೆ ಕೊಂಡಿರ ತಂಡ ಸೋಲನ್ನು ಅನುಭವಿಸಿತು. ವಾಟೇರಿರ ತಂಡಕ್ಕೆ ಒಂದು ಗೋಲು ಲಭಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಅಲ್ತಂಡವು ಮುಂಡಚಾಡಿರ ವಿರುದ್ಧ 4- 2 ಅಂತರದ ಗೆಲುವು ಸಾಧಿಸಿದರೆ, ಬೊಳಕಾರಂಡ ತಂಡವು ಕೇಲೆಟಿರ ತಂಡದ ವಿರುದ್ಧ ಹಾಗೂ ಅಚ್ಚಪಂಡ ತಂಡವು ಅಲ್ಲುಮಡ ತಂಡದ ವಿರುದ್ಧ ವಿಜಯ ಗಳಿಸಿತು. ಆಟಗಾರ ತಮ್ಮನ್‌ ಗಣಪತಿ ಹ್ಯಾಟ್ರಿಕ್‌ ಗೋಲ್‌ ಗಳಿಸಿದರು. ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಮತ್ತು ಹ್ಯಾಂಡ್‌ ಬಾಲ್‌ ಆಟಗಾರ್ತಿ ಅಲ್ಲುಮಡ ನಾಟ್ಯ ಅವರು ತಮ್ಮ ತಂಡದ ಪರವಾಗಿ ಆಡಿದರು.

ಇಂದಿನ ಪಂದ್ಯಗಳು

ಮೈದಾನ ಒಂದು

8.30ಕ್ಕೆ ಕುಂದತ್‌ ಮಾಳೇಟಿರ (ಕುಕ್ಕಲೂರು) - ಮಂಡೇಡ

9.30ಕ್ಕೆ ಕರ್ತಮಾಡ - ಕುಲ್ಲೇಟಿರ

10.30ಕ್ಕೆ ಮುಕ್ಕಾಟಿರ 9ಪುಲಿಕೋಟು) - ಕೋಡೀರ

11.30 ಕ್ಕೆ ಚೌರೀರ ಹೊದ್ದೂರು - ನೆರವಂಡ

1.30ಕ್ಕೆ ಅಲ್ಲಂಡ - ಚಿರಿಯಪಂಡ

2.30ಕ್ಕೆ ಮುರುವಂಡ - ಚೋಯಮಾಡಂಡ

ಮೈದಾನ 2

8:30ಕ್ಕೆ ಮಾರ್ಚಂಡ - ಚೆರುವಾಳಂಡ

9.30 ಕ್ಕೆ ಪರದಂಡ-ಐನಂಡ

11:30ಕ್ಕೆ ಮೇಕೇರಿರ-ಪೊನ್ನಚೆಟ್ಟೀರ

12.30ಕ್ಕೆ ನೆಲ್ಲಮಕ್ಕಡ-ಮೂಕಳೇರ

1.30ಕ್ಕೆ ಉದಿಯಂಡ-ಚೆಕ್ಕೇರ

2.30ಕ್ಕೆ ಚೌರೀರ(ಹೊದವಾಡ)-ಕೋದಂಡ

3.30 ಕ್ಕೆ ಇಟ್ಟಿರ-ಮಲ್ಲಮಾಡ

ಮೈದಾನ 3

9.30 ಕ್ಕೆ ಐಚೆಟ್ಟೀರ-ಶಾಂತೇಯಂಡ

10.30 ಕ್ಕೆ ತೀತಮಾಡ-ಕಲಿಯಂಡ

11.30ಕ್ಕೆ ಅಪ್ಪನೆರವಂಡ-ಚೇಂದಿರ

12.30ಕ್ಕೆ ಪುದಿಯೊಕ್ಕಡ-ಶಿವಚಾಳಿಯಂಡ

1.30ಕ್ಕೆ ಚೆಯ್ಯಂಡ-ಕೊಂಗಂಡ

2.30ಕ್ಕೆ ತಂಬುಕುತ್ತಿರ-ಬಾರಿಯಂಡ

click me!